Shane Warne – 40 ಸಾವಿರ ಪ್ರೇಕ್ಷರು ಸಚಿನ್ ಅಟ ನೋಡಲು ಬಂದಿದ್ದಾರೆ.. ಕಾಲಿನಿಂದ ನೀನು ಒದೆಯುವುದನ್ನು ನೋಡಲು ಅಲ್ಲ.. !
ಶೇನ್ ವಾರ್ನ್ ನಿಧನದ ನಂತರ ಮೈದಾನದೊಳಗಿನ ಕೆಲವೊಂದು ಅವಿಸ್ಮರಣೀಯ ಘಟನೆಗಳು ಒಂದೊಂದಾಗಿ ನೆನೆಪಾಗುತ್ತಿವೆ.
ತನ್ನ ಹಾವಭಾವದಿಂದಲೇ ಗಮನ ಸೆಳೆಯುವ ಶೇನ್ ವಾರ್ನ್ ಎದುರಾಳಿ ತಂಡಗಳನ್ನು ದುಃಸ್ವಪ್ನವಾಗಿ ಕಾಡುತ್ತಿದ್ದರು. ಜೊತೆಗೆ ಅಷ್ಟೇ ಹಾಸ್ಯ ಪ್ರವೃತ್ತಿಯನ್ನು ಹೊಂದಿದ್ದರು. ಎದುರಾಳಿ ತಂಡ ಆಟವನ್ನು ಮೆಚ್ಚಿ ಕೊಂಡಾಡುವ ಗುಣವನ್ನು ಕೂಡ ಹೊಂದಿದ್ದರು. ಹೀಗಾಗಿಯೇ ಶೇನ್ ವಾರ್ನ್ ಅಂದ್ರೆ ಎದುರಾಳಿ ತಂಡದ ಅಟಗಾರರಿಗೂ ಒಂಥರಾ ಪ್ರೀತಿ.
ಆನೆ ನಡೆದದ್ದೇ ದಾರಿ ಅನ್ನೋ ಹಾಗೇ ಶೇನ್ ವಾರ್ನ್ ಪ್ರವೃತ್ತಿಯೂ ಅದೇ ರೀತಿಯಲ್ಲಿತ್ತು. ಸಾಮಾನ್ಯವಾಗಿ ಕ್ರಿಕೆಟ್ ಜಗತ್ತಿನಲ್ಲಿ ಆಸ್ಟ್ರೇಲಿಯನ್ನರು ಸ್ಲೆಡ್ಜಿಂಗ್ ಮಾಡುವುದರಲ್ಲಿ ನಿಪುಣರು. ಹಾಗಂತ ಶೇನ್ ವಾರ್ನ್ ಆಸ್ಟ್ರೇಲಿಯಾದ ಎಲ್ಲಾ ಆಟಗಾರ ರೀತಿಯಲ್ಲ. ಹಾಗೇ ಸ್ಲೆಡ್ಜಿಂಗ್ ಮಾಡುವುದರಲ್ಲೂ ಚಾಣಕ್ಯ. ಶೇನ್ ವಾರ್ನ್ ಸ್ಲೆಡ್ಜಿಂಗ್ ಮಾಡುವಾಗ ಬ್ಯಾಟ್ಸ್ ಮೆನ್ ತಿರುಗಿ ಮಾತನಾಡುವುದನ್ನು ಇಷ್ಟಪಡುತ್ತಿರಲಿಲ್ಲ. ಬೌಲರ್ ಗೆ ಯಾವತ್ತೂ ಮಾತಿನಲ್ಲಿ ತಿರುಗೇಟು ನೀಡಬಾರದು ಅನ್ನೋದು ಶೇನ್ ವಾರ್ನ್ ಅವರ ವಾದವಾಗಿತ್ತು.
ಇದೀಗ ಶೇನ್ ವಾರ್ನ್ ಅವರು ನಿಧನರಾಗಿದ್ದಾರೆ. ಕ್ರಿಕೆಟ್ ಜಗತ್ತು ಅವರ ಸಾಧನೆ, ಯಶಸ್ಸು, ವ್ಯಕ್ತಿತ್ವವನ್ನು ನೆನಪು ಮಾಡಿಕೊಳ್ಳುತ್ತಿದೆ. ಅದೇ ರೀತಿ ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಅವರು ಶೇ ನ್ ವಾರ್ನ್ ಮತ್ತು ಸೌರವ್ ಗಂಗೂಲಿ ನಡುವಿನ ಸ್ವಾರಸ್ಯಕರವಾದ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.
ಅದು 1999ರ ಭಾರತದ ಆಸ್ಟ್ರೇಲಿಯಾ ಪ್ರವಾಸ. ಆಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡುಲ್ಕರ್ ಅರ್ಧಶತಕ ಕೂಡ ದಾಖಲಿಸಿದ್ದರು. ಶೇನ್ ವಾರ್ನ್ ಆಗ ಬೌಲಿಂಗ್ ದಾಳಿ ಶುರು ಮಾಡಿದ್ದರು. ಸ್ಟ್ರೈಕರ್ ನಲ್ಲಿ ಸೌರವ್ ಗಂಗೂಲಿ ಬ್ಯಾಟಿಂಗ್ ಮಾಡುತ್ತಿದ್ರೆ, ನಾನ್ ಸ್ಟ್ರೈಕರ್ ನಲ್ಲಿ ಸಚಿನ್ ತೆಂಡುಲ್ಕರ್ ಬ್ಯಾಟಿಂಗ್ ಮಾಡುತ್ತಿದ್ದರು.
ಶೇನ್ ವಾರ್ನ್ ಎಸೆತಗಳನ್ನು ಸೌರವ್ ಗಂಗೂಲಿ ತುಂಬಾನೇ ರಕ್ಷಣಾತ್ಮಕವಾಗಿ ಆಡುತ್ತಿದ್ದರು. ಹೀಗೆ ಮೂರು ನಾಲ್ಕು ಫುಟ್ ಮಾರ್ಕ್‍ನಿಂದ ಆಚೆಗಿನ ಎಸೆತಗಳನ್ನು ಗಂಗೂಲಿ ಕಾಲಿನಿಂದ ಒದೆಯುವ ಮೂಲಕ ರಕ್ಷಣಾತ್ಮಕವಾಗಿ ಆಡುತ್ತಿದ್ದರು. ಇದು ಶೇನ್ ವಾರ್ನ್ ಅವರಿಗೆ ಕಿರಿಕಿರಿಯನ್ನುಂಟು ಮಾಡಿತ್ತು. ಆಗ ಶೇನ್ ವಾರ್ನ್ ಗಂಗೂಲಿಗೆ ಹೇಳಿಗೆ ಹೀಗೆ… ಹೇ.. ಇಲ್ಲಿ ಸೇರಿರುವ 40 ಸಾವಿರ ಜನ ತೆಂಡುಲ್ಕರ್ ಆಟವನ್ನು ನೋಡಲು ಬಂದಿರೋದು.. ಕಾಲಿನಿಂದ ನೀನು ಒದೆಯುವುದನ್ನು ನೋಡಲು ಅಲ್ಲ ಎಂದು ಹೇಳುವ ಮೂಲಕ ಸೌರವ್ ಗಂಗೂಲಿಯ ತಾಳ್ಮೆಯನ್ನು ಪರೀಕ್ಷೆ ಮಾಡಿದ್ದರು.
ಶೇನ್ ವಾರ್ನ್ ಹೇಳಿಕೆಯಿಂದ ತಾಳ್ಮೆ ಕಳೆದುಕೊಂಡ ಗಂಗೂಲಿ ಶೇನ್ ವಾರ್ನ್ ಗೆ ವಿಕೆಟ್ ಕೂಡ ಒಪ್ಪಿಸಿದ್ದರು. People have come to watch Tendulkar: Shane Warne’s hilarious jibe at Ganguly
ಅಂದ್ರೆ ಶೇನ್ ವಾರ್ನ್ ವಾಕ್ಸಮರದ ದಾಟಿ ಯಾವ ರೀತಿ ಇತ್ತು ಎಂಬುದಕ್ಕೆ ಇದೊಂದು ನಿದರ್ಶನವಷ್ಟೇ.
ಇಲ್ಲಿ ಶೇನ್ ವಾರ್ನ್ ಗೆ ವಿಕೆಟ್ ಬೇಕಿತ್ತು. ಉತ್ತಮ ಜೊತೆಯಾಟವನ್ನು ಮುರಿಯಬೇಕಿತ್ತು. ಅದಕ್ಕೆ ಅವರು ಸಚಿನ್ ಹೆಸರನ್ನು ತೆಗೆದುಕೊಂಡ್ರು. ಸಚಿನ್ ಆಟವನ್ನು ಕೊಂಡಾಡಿದ್ರು. ಪ್ರೇಕ್ಷರ ನಿರೀಕ್ಷೆಗಳನ್ನು ದಾಳವಾಗಿ ಬಳಸಿಕೊಂಡ್ರು. ಗಂಗೂಲಿ ತಾಳ್ಮೆ ಕಳೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದ್ರು.
ಹೀಗೆ ಶೇನ್ ವಾರ್ನ್ ಎದುರಾಳಿ ಬ್ಯಾಟ್ಸ್ ಮೆನ್ ಗಳ ಮೈಂಡ್ ಅನ್ನು ರೀಡ್ ಮಾಡುವ ಕಲೆಯನ್ನು ಚೆನ್ನಾಗಿಯೇ ಕರಗತ ಮಾಡಿಕೊಂಡಿದ್ದರು.