Anil Kumble – ಶೇನ್ ವಾರ್ನ್ ಸ್ನೇಹದ ಅಂತರಂಗ… ಅನಿಲ್ ಕುಂಬ್ಳೆ ಬಹಿರಂಗ..!

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಅಕಾಲಿಕ ನಿಧನ ಕ್ರಿಕೆಟ್ ಜಗತ್ತಿಗೆ ಆಘಾತವನ್ನುಂಟು ಮಾಡಿದೆ. ಶೇನ್ ವಾರ್ನ್ ಸಾಧನೆ, ವ್ಯಕ್ತಿತ್ವದ ಬಗ್ಗೆ ಆಪ್ತರು ನೆನಪು ಮಾಡಿಕೊಳ್ಳುತ್ತಿದ್ದಾರೆ.
ಹೌದು, ಶೇನ್ ವಾರ್ನ್ ಗೆ ಭಾರತದ ಕ್ರಿಕೆಟ್ ಮತ್ತು ಭಾರತೀಯ ಕ್ರಿಕೆಟ್ ಅಟಗಾರರ ಜೊತೆಗೆ ಉತ್ತಮವಾದ ಒಡನಾಟವಿತ್ತು. ಅದರಲ್ಲೂ ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ಜೊತೆ ನಂಟು ಇರೋದರಿಂದ ಅನೇಕ ಭಾರತದ ಮಾಜಿ ಮತ್ತು ಯುವ ಕ್ರಿಕೆಟಿಗರು ಶೇನ್ ವಾರ್ನ್ ಜೊತೆ ಸ್ನೇಹವನ್ನು ಹೊಂದಿದ್ದರು.
ಇನ್ನು ಮುಖ್ಯವಾಗಿ ಟೀಮ್ ಇಂಡಿಯಾ ಟೆಸ್ಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಮತ್ತು ಶೇನ್ ವಾರ್ನ್ ಸಮಕಾಲೀನ ಕ್ರಿಕೆಟಿಗರು. ಇಬ್ಬರು ಕೂಡ ಲೆಗ್ ಸ್ಪಿನ್ನರ್ ಗಳು. ಹೀಗಾಗಿ ಇಬ್ಬರ ನಡುವೆಯೂ ಸ್ಪರ್ಧೆ ಇತ್ತು. ಜೊತೆಗೆ ಉತ್ತಮ ಸ್ನೇಹಿತರಾಗಿದ್ದರು.
ಇದೀಗ ಅನಿಲ್ ಕುಂಬ್ಳೆ ಶೇನ್ ವಾರ್ನ್ ಜೊತೆಗಿನ ಒಡನಾಟವನ್ನು ನೆನಪು ಮಾಡಿಕೊಂಡಿದ್ದಾರೆ.
ಶೇನ್ ವಾರ್ನ್ ಶ್ರೇಷ್ಠ ಸ್ಪಿನ್ನರ್. ಅದರಲ್ಲೂ ಭಾರತದ ವಿರುದ್ಧ ಅವರು ಉತ್ತಮ ಪ್ರದರ್ಶನ ನೀಡಿದ್ದರಿಂದ ಅವರ ಖ್ಯಾತಿಯೂ ಹೆಚ್ಚಾಗಿತ್ತು. ಯಾಕಂದ್ರೆ ಭಾರತೀಯ ಬ್ಯಾಟ್ಸ್ ಮೆನ್ ಗಳು ಸ್ಪಿನ್ನರ್ ಗಳ ವಿರುದ್ಧ ಚೆನ್ನಾಗಿ ಆಡುತ್ತಿದ್ದರು. ಹೀಗಾಗಿ ಶೇನ್ ವಾರ್ನ್ ಅವರು ಭಾರತದ ವಿರುದ್ಧ ಶ್ರೇಷ್ಠ ಪ್ರದರ್ಶನವನ್ನು ನೀಡುವುದನ್ನು ಬಯಸುತ್ತಿದ್ದರು ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.
ಇದೇ ವೇಳೆ ಅನಿಲ್ ಕುಂಬ್ಳೆ ಅವರು 1998ರ ಆಸ್ಟ್ರೇಲಿಯಾದ ಭಾರತ ಪ್ರವಾಸದ ಟೆಸ್ಟ್ ಸರಣಿಯನ್ನು ನೆನಪು ಮಾಡಿಕೊಂಡಿದ್ದಾರೆ. ಆಗ ಆ ಸರಣಿಯನ್ನು ಸಚಿಬ್ ವರ್ಸಸ್ ಶೇನ್ ವಾರ್ನ್ ಅಂತನೇ ಬಣ್ಣಿಸಲಾಗುತ್ತಿತ್ತು. ಮೊದಲು ಶೇನ್ ವಾರ್ನ್ ಮೇಲುಗೈ ಸಾಧಿಸಿದ್ರೆ, ನಂತರ ಸಚಿನ್ ಮೇಲುಗೈ ಸಾಧಿಸಿದ್ರು ಅಂತ ಹೇಳ್ತಾರೆ ಅನಿಲ್ ಕುಂಬ್ಳೆ.

ಇದೇ ವೇಳೆ ಅನಿಲ್ ಕುಂಬ್ಳೆ ಅವರು ಆಸ್ಟ್ರೇಲಿಯಾ ತಂಡದ ಅದರಲ್ಲೂ ಶೇನ್ ವಾರ್ನ್ ಅವರ ಸ್ನೇಹದ ಸಿಕ್ರೇಟ್ ಅನ್ನು ಬಹಿರಂಗಪಡಿಸಿದ್ದಾರೆ. Anil Kumble recalls heartwarming memory of facing Australia star
ನೀವು ಶೇನ್ ವಾರ್ನ್ ಜೊತೆ ಉತ್ತಮವಾದ ಸ್ನೇಹಿತರಾಗಿದ್ರೆ ನಿಮಗೆ ಏನು ತೊಂದರೆಯಾಗುವುದಿಲ್ಲ. ನೀವು ಬ್ಯಾಟಿಂಗ್ ಮಾಡುವಾಗ ಆಸೀಸ್ ಆಟಗಾರರು ಯಾವುದೇ ಅಪಹಾಸ್ಯ ಮಾಡುವುದಿಲ್ಲ. ಇದಕ್ಕೆ ಕಾರಣ ಶೇನ್ ವಾರ್ನ್ ಅವರ ಸ್ನೇಹ. ಹೀಗಾಗಿಯೇ ನನಗೆ ಆಸ್ಟ್ರೇಲಿಯಾ ವಿರುದ್ಧ ಬ್ಯಾಟಿಂಗ್ ಮಾಡುವಾಗ ನನಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಶೇನ್ ವಾರ್ನ್ ಅವರು ಸ್ನೇಹಕ್ಕೆ ಅಷ್ಟೊಂದು ಬೆಲೆ ಕೊಡುತ್ತಿದ್ದರು ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.
ಶೇನ್ ವಾರ್ನ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 708 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಮೊದಲ ಸ್ಥಾನದಲ್ಲಿ ಮುತ್ತಯ್ಯ ಮುರಳೀಧರನ್ ಇದ್ದಾರೆ. ಅನಿಲ್ ಕುಂಬ್ಳೆ ಕೂಡ ಭಾರತ ಪರ ಗರಿಷ್ಠ ವಿಕೆಟ್ ಪಡೆದು ಅಗ್ರ ಸ್ಥಾನದಲ್ಲಿದ್ದಾರೆ.