P.T.Usha – ರಾಜ್ಯ ಸಭಾ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕಾರ..!

ಭಾರತದ ಅಪ್ರತಿಮ ಕ್ರೀಡಾ ತಾರೆ ಪಿ.ಟಿ.ಉಷಾ ಅವರು ರಾಜ್ಯ ಸಭಾ ಸದಸ್ಯೆಯಾಗಿ ಇಂದು ಪ್ರಮಾಜ ವಚನ ಸ್ವೀಕರಿಸಿದ್ದರು.
ಇತ್ತೀಚೆಗೆ ಪಿ.ಟಿ. ಉಷಾ ಅವರನ್ನು ಕೇಂದ್ರ ಸರ್ಕಾರ ರಾಜ್ಯ ಸಭೆಗೆ ನಾಮ ನಿರ್ದೇಶನ ಮಾಡಿತ್ತು.
1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಪಿ.ಟಿ. ಉಷಾ ಅವರು ಪದಕವನ್ನು ಮಿಸ್ ಮಾಡಿಕೊಂಡಿದ್ದರು.
ಪಯ್ಯೋಲಿ ಎಕ್ಸ್ ಪ್ರೆಸ್ ಖ್ಯಾತಿಯನ್ನು ಪಡೆದುಕೊಂಡಿದ್ದ ಪಿ.ಟಿ. ಉಷಾ ಅವರು ಕೇರಳದವರು. ವೇಗದ ಓಟಗಾರ್ತಿಯಾಗಿ ಭಾರತದ ಬಾವುಟವನ್ನು ಉನ್ನತ ಮಟ್ಟಕ್ಕೇರಿಸಿದ್ದ ಅಪ್ರತಿಮ ಅಥ್ಲೀಟ್. ಏಷ್ಯನ್ ಗೇಮ್ಸ್ ನಲ್ಲಿ ನಾಲ್ಕು ಚಿನ್ನದ ಪದಕ ಸೇರಿ ಹಲವು ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿದ್ದರು. ತನ್ನ ವೃತ್ತಿ ಬದುಕಿನಲ್ಲಿ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿದ್ದರು.
ಕ್ರೀಡಾ ಬದುಕಿಗೆ ವಿದಾಯ ಹೇಳಿದ ನಂತರ ಪಿ.ಟಿ. ಉಷಾ ಅವರು ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ ಅಕಾಡೆಮಿಯನ್ನು ಸ್ಥಾಪಿಸಿದ್ದರು. ಯುವ ಕ್ರೀಡಾಪಟುಗಳಿಗೆ ಅತ್ಯುತ್ತಮ ಗುಣಮಟ್ಟದ ತರಬೇತಿಯನ್ನು ಇಲ್ಲಿ ನೀಡಲಾಗುತ್ತಿದೆ.
58ರ ಹರೆಯದ ಪಿ.ಟಿ. ಉಷಾ ಅವರು ಇದೀಗ ರಾಜ್ಯ ಸಭೆಯ ಸದಸ್ಯೆಯಾಗಿ ಭಾರತದ ಕ್ರೀಡಾ ಅಭಿವೃದ್ದಿಗೆ ಹಲವು ಯೋಜನೆಗಳನ್ನು ರೂಪಿಸಲು ಸರ್ಕಾರಕ್ಕೆ ಸಲಹೆಗಳನ್ನು ನೀಡಬೇಕಿದೆ.