ಏಷ್ಯನ್ ಹಾಕಿ ಚಾಂಪಿಯನ್ಶಿಪ್ನಲ್ಲಿ ಭಾರತವು ಕಡುವೈರಿ ಪಾಕಿಸ್ತಾನ ತಂಡವನ್ನು ಸೋಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಭಾರತ 2ನೇ ಗೆಲುವು ದಾಖಲಿಸಿದೆ. ಒಲಿಂಪಿಕ್ ಕಂಚಿನ ಪದಕ ವಿಜೇತ ಭಾರತ 3-1 ಗೋಲುಗಳಿಂದ ಸೋಲಿಸಿದೆ. ಭಾರತದ ಪರ ಹರ್ಮನ್ಪ್ರೀತ್ ಸಿಂಗ್ ಎರಡು ಮತ್ತು ಆಕಾಶದೀಪ್ ಸಿಂಗ್ ಒಂದು ಗೋಲು ಗಳಿಸಿದರು. ಕೊರಿಯಾ ವಿರುದ್ಧ ಡ್ರಾ ಸಾಧಿಸುವ ಮೂಲಕ ಭಾರತ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿತ್ತು. ಇದಾದ ಬಳಿಕ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 9-0 ಅಂತರದಿಂದ ಸೋಲಿಸಿತ್ತು. ಈಗ ಪಾಕ್ ವಿರುದ್ಧವೂ ಜಯ ದಾಖಲಿಸಿ ಅಜೇಯ ತಂಡವಾಗಿ ಉಳಿದಿದೆ.
2011 ರಲ್ಲಿ ಈ ಟೂರ್ನಿ ಆರಂಭವಾಗಿತ್ತು. ಇಲ್ಲಿ ತನಕ ಭಾರತ ಮೂರು ಬಾರಿ ಪ್ರಶಸ್ತಿಯನ್ನು ಗೆದ್ದಿದೆ. ಡಿಸೆಂಬರ್ 19 ರಂದು ಜಪಾನ್ ವಿರುದ್ಧ ಲೀಗ್ ಪಂದ್ಯ, ಡಿಸೆಂಬರ್ 21 ರಂದು ಸೆಮಿಫೈನಲ್ ಮತ್ತು ಡಿಸೆಂಬರ್ 22 ರಂದು ಫೈನಲ್ ನಡೆಯಲಿದೆ.