ಮ್ಯಾಟ್ ಹೆನ್ರಿ(3/44) ಹಾಗೂ ಮೈಕಲ್ ಬ್ರೇಸ್ವೆಲ್(3/50) ಸಂಘಟಿತ ಬೌಲಿಂಗ್ ದಾಳಿಯ ಪರಿಣಾಮ ಪ್ರವಾಸಿ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಅತಿಥೇಯ ನ್ಯೂಜಿ಼ಲೆಂಡ್ ಸಂಪೂರ್ಣ ಹಿಡಿತ ಸಾಧಿಸಿದೆ.
ವೆಲ್ಲಿಂಗ್ಟನ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅತಿಥೇಯ ಕಿವೀಸ್, ಆಲ್ರೌಂಡ್ ಪ್ರದರ್ಶನ ನೀಡಿದೆ. ಮೊದಲ ಇನ್ನಿಂಗ್ಸ್ನಲ್ಲಿ 580/4 ಡಿಕ್ಲೇರ್ ಬೃಹತ್ ಮೊತ್ತ ಕಲೆಹಾಕಿರುವ ನ್ಯೂಜಿ಼ಲೆಂಡ್, ಎದುರಾಳಿ ಶ್ರೀಲಂಕಾ ತಂಡವನ್ನ ಮೊದಲ ಇನ್ನಿಂಗ್ಸ್ನಲ್ಲಿ 164 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಬಳಿಕ ಫಾಲೋ ಆನ್ ಸಂಕಷ್ಟಕ್ಕೆ ಸಿಲುಕಿರುವ ಲಂಕಾ ಪಡೆ 3ನೇ ದಿನದಂತ್ಯಕ್ಕೆ 113/2 ರನ್ಗಳಿಸಿದೆ.
2ನೇ ದಿನದಂತ್ಯಕ್ಕೆ 26/2 ರನ್ಗಳಿಂದ 3ನೇ ದಿನದಾಟ ಆರಂಭಿಸಿದ ಶ್ರೀಲಂಕಾ ಬ್ಯಾಟಿಂಗ್ ವೈಫ್ಯಕ್ಕೆ ಸಿಲುಕಿತು. ನಾಯಕ ದಿಮುತ್ ಕರುಣಾರತ್ನೆ(89) ಹಾಗೂ ಚಂದಿಮಲ್(37) ಅವರುಗಳ ಜವಾಬ್ದಾರಿಯ ಬ್ಯಾಟಿಂಗ್ ನಡುವೆಯೂ ಪ್ರವಾಸಿ ತಂಡ ಮ್ಯಾಟ್ ಹೆನ್ರಿ(3/44) ಹಾಗೂ ಮೈಕಲ್ ಬ್ರೇಸ್ವೆಲ್(3/50) ಅವರುಗಳ ಸಂಘಟಿತ ದಾಳಿಗೆ ಸಿಲುಕಿತು. ಪರಿಣಾಮ ಲಂಕಾ ತಂಡ ಮೊದಲ ಇನ್ನಿಂಗ್ಸ್ನಲ್ಲಿ 164 ರನ್ಗಳಿಗೆ ಆಲೌಟ್ ಆಯಿತು. ಕಿವೀಸ್ ಪರ ಹೆನ್ರಿ ಹಾಗೂ ಬ್ರೇಸ್ವೆಲ್ ತಲಾ 3 ವಿಕೆಟ್ ಪಡೆದರೆ. ಸೌಥಿ, ಡಾಗ್ ಬ್ರೇಸ್ವೆಲ್ ಹಾಗೂ ಟಿಕ್ನರ್ ತಲಾ 1 ವಿಕೆಟ್ ಪಡೆದುಕೊಂಡರು.
ಮೊದಲ ಇನ್ನಿಂಗ್ಸ್ನಲ್ಲಿ 164 ರನ್ಗಳಿಗೆ ಆಲೌಟ್ ಆದ ಶ್ರೀಲಂಕಾ, 416 ರನ್ಗಳ ಬೃಹತ್ ಹಿನ್ನಡೆ ಅನುಭವಿಸಿತು. ಹೀಗಾಗಿ ಫಾಲೋ ಆನ್ಗೆ ಸಿಲುಕಿದ ಲಂಕಾ ಪಡೆ 2ನೇ ಇನ್ನಿಂಗ್ಸ್ ಆರಂಭಿಸಿದ್ದು, ಕರುಣಾರತ್ನೆ(51) ಹಾಗೂ ಕುಸಲ್ ಮೆಂಡಿಸ್(51*) ಅವರುಗಳ ಅರ್ಧಶತದ ನೆರವಿನಿಂದ 2ನೇ ದಿನದಂತ್ಯಕ್ಕೆ 113 ರನ್ಗಳಿಸಿದೆ. 303 ರನ್ಗಳ ಹಿನ್ನಡೆಯೊಂದಿಗೆ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ಶ್ರೀಲಂಕಾ ಪರ ಮೆಂಡಿಸ್ ಹಾಗೂ ಏಂಜೆಲೋ ಮ್ಯಾಥ್ಯೂವ್ಸ್ 1* ಕಣದಲ್ಲಿದ್ದಾರೆ. ಕಿವೀಸ್ ತಂಡದ ಪರ ಸೌಥಿ ಹಾಗೂ ಡಾಗ್ ಬ್ರೇಸ್ವೆಲ್ ತಲಾ 1 ವಿಕೆಟ್ ಪಡೆದಿದ್ದಾರೆ.
NZ v SL, Sri Lanka, New Zealand, Test Series, Second Test, Sports Karnataka