2022-23ರ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಚಾಂಪಿಯನ್ ಆಗಿಎಟಿಕೆ ಮೋಹನ್ ಬಗನ್ ತಂಡ ಹೊರಹೊಮ್ಮಿದೆ.
ಗೋವಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರು ಎಫ್ಸಿ ವಿರುದ್ಧ ಶೂಟೌಟ್ನಲ್ಲಿ 4-3 ಗೋಲುಗಳ ಅಂತರದಲ್ಲಿ ಗೆದ್ದ ಮೋಹನ್ ಬಗನ್ ತಂಡ ನಾಲ್ಕನೆ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಚಾಂಪಿಯನ್ ಎಟಿಕೆ ತಂಡಕ್ಕೆ 6 ಕೋಟಿ ರೂ. ರನ್ನರ್ ಅಪ್ ಬೆಂಗಳೂರು ತಂಡಕ್ಕೆ 2.5 ಕೋಟಿ ರೂ. ಬಹುಮಾನ ದೊರೆತಿದೆ.
ನಿಗದಿತ 90 ನಿಮಿಷಗಳ ಆಟದಲ್ಲಿ ಎರಡೂ ತಂಡಗಳು 2-2ರಲ್ಲಿ ಸಮಬಲ ಸಾಧಿಸಿದವು.30 ನಿಮಿಷಗಳ ಹೆಚ್ಚುವರಿ ಸಮಯದಲ್ಲಿ ಗೋಲು ದಾಖಲಾದಗೇ ಇದ್ದಾಗ ಶೂಟೌಟ್ ಮೊರೆಹೋಗಲಾಯಿತು.
ಶೂಟೌಟ್ನಲ್ಲಿ ಬಿಎಫ್ಸಿ ಪರ ಬ್ರುನೊ ರಮಿರಸ್, ಪಾಬ್ಲೊ ಮೆರೆಜ್ ಗೋಲು ಬಾರಿಸಲು ವಿಫಲರಾದರು. ತನ್ನ ಮೊದಲ ನಾಲ್ಕೂ ಪ್ರಯತ್ನಗಳಲ್ಲಿ ಗೋಲು ಬಾರಿಸಿದ್ದ ಎಟಿಕೆ ಮೋಹನ್ ಬಗನ್ ತಂಡ ಟ್ರೋಫಿಗೆ ಮುತ್ತಿಕ್ಕಿತ್ತು.