Netherland Beat ಟಿ20 ವಿಶ್ವಕಪ್ನಲ್ಲಿ ನೆದರ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ಭಾರತ ಹಾಗೂ ಪಾಕಿಸ್ತಾನ ತಂಡಗಳಿಗೆ ಸಹಾಯ ಮಾಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ನಂತರ ಪಾಕ್ ನಾಯಕ ಬಾಬರ್ ಅಜಂ ಹಾಗೂ ಆಟಗಾರರು ಮೈದಾನದಲ್ಲಿ ನೆದರ್ಲೆಂಡ್ಗೆ ಧನ್ಯವಾದ ತಿಳಿಸಿದರು.
ಪಂದ್ಯ ಮುಗಿದ ನಂತರ ನೆದರ್ ಲೆಂಡ್ ಆಟಗಾರ ಟಾಮ್ ಕೂಪರ್ ಪಾಕ್ ತಂಡದ ನಾಯಕ ಬಾಬರ್ ಅಜಂಗೆ ಬಾಂಗ್ಲಾ ವಿರುದ್ಧ ಗೆಲ್ಲುವುದನ್ನು ಖಾತ್ರಿ ಮಾಡಿಕೊಳ್ಳಿ ನಾವು ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನ ಪಡೆಯುತ್ತೇವೆ ಎಂದು ಹೇಳಿದರು.
ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ನಿರೀಕ್ಷೆಯಂತೆ ಪಾಕಿಸ್ತಾನ ಬಾಂಗ್ಲಾವನ್ನು 5 ವಿಕೆಟ್ಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿತು. ಜೊತೆಗೆ ಉಪಕಾರ ಮಾಡಿದ ನೆದರ್ಲೆಂಡ್ಗ ಹೇಳಿದ ಮಾತನ್ನು ಉಳಿಸಿಕೊಂಡಿತು.
ಇದೊಂದು ದೊಡ್ಡ ಅನುಭವ, ನೆದರಲ್ಂಡ್ ಕೊಟ್ಟ ಮತ್ತೊಂದು ಶಾಕ್. ಮುಂದಿನ ವಿಶ್ವಕಪ್ನಲ್ಲಿ ಸ್ಥಾನಕ್ಕಾಗಿ ಹೋರಾಡುವುದೇ ನಮ್ಮ ಗುರಿ ಎಂದು ನೆದರ್ಲೆಂಡ್ ತಂಡದ ನಾಯಕ ಸ್ಕಾಟ್ ಎಡ್ವರ್ಡಸ್ ಹೇಳಿದ್ದಾರೆ.