India Beat Zimbabwe-ಸೂರ್ಯ ಕುಮಾರ್ ಯಾದವ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ 71 ರನ್ಗಳ ಭರ್ಜರಿ ಗೆಲುವು ದಾಖಲಿಸಿತು.ಇದರೊಂದಿಗೆ ಸೂಪರ್ 12ರಲ್ಲಿ ಮೊದಲ ಸ್ಥಾನದೊಂದಿಗೆ ಸೆಮಿಫೈನಲ್ಗೆ ಪ್ರವೇಶ ಪಡಿಯಿತು.
ಪಂದ್ಯಕ್ಕೂ ಮನ್ನವೇ ಟೀಮ್ ಇಂಡಿಯಾ ಸೆಮಿಫೈನಲ್ ಖಾತ್ರಿಪಡಿಸಿಕೊಂಡಿದ್ದರಿಂದ ಜಿಂಬಾಬ್ವೆ ವಿರುದ್ಧ ನಿರಾಯಾಸವಾಗಿ ಆಡಿತು.
ಎಂಸಿಜೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಕಲೆ ಹಾಕಿತು. ಜಿಂಬಾಬ್ವೆ ತಂಡ 17.2 ಓವರ್ಗಳಲ್ಲಿ 115 ರನ್ ಗಳಿಗೆ ಆಲೌಟ್ ಆಯಿತು.
ಭಾರತ ಪರ ಕೆ.ಎಲ್.ರಾಹುಲ್ 51 ರನ್ ( 35 ಎಸೆತ, 3 ಬೌಂಡರಿ, 3 ಸಿಕ್ಸರ್), ನಾಯಕ ರೋಹಿತ್ ಶರ್ಮಾ 15, ವಿರಾಟ್ ಕೊಹ್ಲಿ 26,ಸೂರ್ಯ ಕುಮಾರ್ 1 ರನ್ (25 ಎಸೆತ,6 ಬೌಂಡರಿ, 4 ಸಿಕ್ಸರ್) , ರಿಷಬ್ ಪಂತ್ 3, ಹಾರ್ದಿಕ್ ಪಾಂಡ್ಯ 18 ರನ್ ಗಳಿಸಿದರು.
ಸೀಯಾನ್ ವಿಲಿಯಮ್ಸ್ 9ಕ್ಕೆ 2,ಸಿಕಂದರ್ ರಾಝಾ 18ಕ್ಕೆ 1, ಮುಜಾರ್ಬಾನಿ ಹಾಗೂ ಎನ್ಗಾರಾವಾ ತಲಾ 1 ವಿಕೆಟ್ ಪಡೆದರು.
ಜಿಂಬಾಬ್ವೆ ಪರ ಸಿಕಂದರ್ ರಾಝಾ 34, ರಿಯಾನ್ ಬರ್ಲ್ 35, ಕ್ರೇಗ್ ಎರ್ವಿನ್ 13, ಸಿಯಾನ್ ವಿಲಿಯಮ್ಸ್ 11 ರನ್ ಗಳಿಸಿದರು.
ಭಾರತ ಪರ ಆರ್.ಅಶ್ವಿನ್ 22ಕ್ಕೆ 3,ಹಾರ್ದಿಕ್ ಪಾಂಡ್ಯ 16ಕ್ಕೆ 2, ಶಮಿ 14ಕ್ಕೆ 2, ಭುವನೇಶ್ವರ್ 11ಕ್ಕೆ 1, ಆರ್ಷದೀಪ್ 9ಕ್ಕೆ 1,ಅಕ್ಸರ್ ಪಟೇಲ್ 40ಕ್ಕೆ 1 ವಿಕೆಟ್ ಪಡೆದರು.