ಟೊಕಿಯೋ ಒಲಿಂಪಿಕ್ಸ್ನಲ್ಲಿ ಟ್ರ್ಯಾಕ್ ಅಂಡ್ ಫೀಲ್ಡ್ನಲ್ಲಿ ಭಾರತಕ್ಕೆ ಮೊತ್ತ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಈಗ ಮತ್ತೊಂದು ದಾಖಲೆ ಬರೆದಿದ್ದಾರೆ. ಫಿನ್ಲೆಂಡ್ನಲ್ಲಿ ನಡೆದ ಕುರ್ಟೆನ್ ಗೇಮ್ಸ್ನಲ್ಲಿ ದಾಖಲೆ ಬರೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಸ್ವರ್ಣ ಬೇಟೆ ವೇಳೆ ತನ್ನದೇ ರಾಷ್ಟ್ರೀಯ ದಾಖಲೆಯನ್ನುಉತ್ತಮ ಪಡಿಸಿಕೊಂಡಿದ್ದಾರೆ.
ಕುರ್ಟೆನ್ನಲ್ಲಿ ನೀರಜ್ ಮೊದಲ ಪ್ರಯತ್ನದಲ್ಲೇ 86.69ಮೀಟರ್ ಜಾವೆಲಿನ್ ಎಸೆದು ಭಾರತದ ರಾಷ್ಟ್ರಗೀತೆ ಮೊಳಗುವ ಹಾಗೆ ಮಾಡಿದ್ದಾರೆ. ನೀರಜ್ ಮತ್ತೆರಡು ಪ್ರಯತ್ನದಲ್ಲಿ ವೈಫಲ್ಯ ಕಂಡಿದ್ದರು. ಆದರೆ ಮೊದಲ ಪ್ರಯತ್ನದಲ್ಲಿ ಸ್ವರ್ಣ ಗೆಲ್ಲುವ ಜೊತೆಗೆ ತನ್ನ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮ ಪಡಿಸಿಕೊಂಡಿದ್ದಾರೆ.

ಕುರ್ಟೇನ್ನಲ್ಲಿ 2012 ಒಲಿಂಪಿಕ್ ಚಾಂಪಿಯನ್ ಮತ್ತು 2019ರ ವಿಶ್ವ ಚಾಂಪಿಯನ್ ವಾಲ್ಕಟ್ ಬೆಳ್ಳಿ ಪದಕ ಪಡೆದರು. ಟೊಕಿಯೋ ಒಲಿಂಪಿಕ್ ಬಳಿಕ ನೀರಜ್ಗೆ ಇದು 2ನೇ ಚಾಂಪಿಯನ್ಶಿಪ್ ಕೂಟವಾಗಿದ್ದು, ಮೊದಲ ಚಾಂಪಿಯನ್ಶಿಪ್ ಕೂಟ ನಾರ್ವೆಯ ಪೊಮಿಯಲ್ಲಿ ನಡೆದಿತ್ತು. ಅಲ್ಲೂ ನೀರಜ್ ಬೆಳ್ಳಿ ಪದಕ ಗೆದ್ದಿದ್ದರು.