ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಟಗಾರ್ತಿ ಕೆಥರಿನ್ ಬ್ರಂಟ್ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಆದರೆ ಏಕದಿನ ಮತ್ತು ಟಿ20 ಕ್ರಿಕೆಟ್ನ್ಲಿ ಬ್ರಂಟ್ ಆಟವನ್ನು ಮುಂದುವರೆಸಲಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ನ ಮೂರೂ ಮಾದರಿಗಳನ್ನು ಒಟ್ಟಾರಿ ಸೇರಿಸಿದಾಗ ಇಂಗ್ಲೆಂಡ್ ಮಹಿಳಾ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಇವರಾಗಿದ್ದಾರೆ.
ಬ್ರಂಟ್ 2004ರಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲೇ 9 ವಿಕೆಟ್ ಪಡೆದು ಮಿಂಚಿದ್ದ ಬ್ರಂಟ್ ಇಂಗ್ಲೆಂಡ್ಗೆ ಮಹಿಳಾ ಆ್ಯಶಸ್ ಅನ್ನು 42 ವರ್ಷಗಳ ಬಳಿಕ ತಂದುಕೊಟ್ಟರು. ಟೆಸ್ಟ್ ಕ್ರಿಕೆಟ್ನಲ್ಲಿ ಬ್ರಂಟ್ 51 ವಿಕೆಟ್ಗಳನ್ನು ಸಂಪಾದಿಸಿದ್ದಾರೆ.
ಕ್ಯಾನ್ಬೆರಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ಪಂದ್ಯದಲ್ಲಿ ಬ್ರಂಟ್ ಕೊನೆಯ ಬಾರಿ ಆಡಿದ್ದರು. ಆ ಪಂದ್ಯದಲ್ಲೂ 5 ವಿಕೆಟ್ ಪಡೆದು ಬ್ರಂಟ್ ಮಿಂಚಿದ್ದರು. ಜೂನ್ 27 ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೂ ಮೊದಲೇ ಬ್ರಂಟ್ ಟೆಸ್ಟ್ಗೆ ವಿದಾಯ ಹೇಳಿರುವುದು ಇಂಗ್ಲೆಂಡ್ ಮಹಿಳಾ ತಂಡಕ್ಕೆ ಅಚ್ಚರಿ ಮೂಡಿಸಿದೆ.