36ನೇ ರಾಷ್ಟ್ರೀಯ ಕ್ರೀಡಾಕೂಟ ಸಂಪನ್ನಗೊಂಡಿದ್ದು ಕರ್ನಾಟಕ ತನ್ನ ಸಾರ್ವಕಾಲಿಕಾ ಶ್ರೇಷ್ಠ ಪ್ರದರ್ಶನ ತೋರಿದೆ. ಕ್ರೀಡಾಕೂಟದಲ್ಲಿ 27 ಚಿನ್ನ ಸೇರಿ 88 ಪದಕಗಳನ್ನು ಗೆದ್ದು ನಾಲ್ಕನೆ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ಮಂಗಳವಾರ ನಡೆದ ಸಮಾರೋಪ ಸಮಾರಂಭದಲ್ಲಿ ಉಪ ರಾಷ್ಟ್ರಪತಿಜಗದೀಪ್ ಧನಕರ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ,ಗುಜರಾತ್ ಸಿಎಂ ಹಾಗೂ ಕ್ರೀಡಾ ಸಚಿವರು ಭಾಗಿಯಾಗಿದ್ದರು.
ಸರ್ವಿಸ್ ಕ್ರೀಡಾಕೂಟದ ಚಾಂಪಿಯನ್ನಾಗಿ ಹೊರಹೊಮ್ಮಿತ್ತು. 140 ಪದಕ ಗೆದ್ದ ಮಹಾರಾಷ್ಟ್ರ ಎರಡನೆ ಸ್ಥಾನ, 115 ಚಿನ್ನ ಗೆದ್ದ ಹರ್ಯಾಣ ಮೂರನೆ ಸ್ಥಾನ ಪಡೆಯಿತು.
ಈ ಬಾರಿ ಕರ್ನಾಟಕ 27 ಚಿನ್ನ 23 ಬೆಳ್ಳಿ ಹಾಗೂ 38 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.1997ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆದಿತ್ತು.ಅಂದು ಮೊದಲ ಸ್ಥಾನ ಪಡೆದರೂ ಇಷ್ಟೊಂದು ಪದಕಗಳನ್ನು ಗೆದ್ದಿರಲಿಲ್ಲ.
ಪದಕ ಬೇಟೆಯಲ್ಲಿ ಕರ್ನಾಟಕ ಸಾಕಷ್ಟು ಸುಧಾರಿಸಿದೆ. 2015ರಲ್ಲಿ ತಿರುವನಂತಪುರಂನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ 8 ಚಿನ್ನ, 21 ಬೆಳ್ಳಿ, 24 ಕಂಚು ಸೇರಿ 53 ಪದಕಗಳೊಂದಿಗೆ 11ನೇ ಸ್ಥಾನ ಪಡೆದಿತ್ತು.
ಮುಖ್ಯವಾಗಿ ಈ ಬಾರಿ ಈಜಿನಲ್ಲಿ 19 ಚಿನ್ನ, 8 ಬೆಳ್ಳಿ ಹಾಗೂ 12 ಕಂಚು ಒಟ್ಟು 39 ಪದಕಗಳು ಈಜು ವಿಭಾಗ ಬಂದಿದ್ದರಿಂದ ಟಾಪ್ 5ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು. ರಾಜ್ಯದ ಈಜುಪಟುಗಳು 10ಕ್ಕೂ ಹೆಚ್ಚು ರಾಷ್ಟ್ರೀಯ ದಾಖಲೆ ಬರೆದಿರುವುದು ವಿಶೇಷವಾಗಿದೆ.
6 ಚಿನ್ನ 1 ಕಂಚಿನ ಪದಕ ಗೆದ್ದ ಕರ್ನಾಟಕದ 14 ವರ್ಷದ ಹಾಶಿಕಾ ರಾಮಚಂದ್ರ ಕ್ರೀಡಾಕೂಟದ ಶ್ರೇಷ್ಠ
ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದರು. ಕೇರಳದ ಸಾಜನ್ ಶ್ರೇಷ್ಠ ಪುರುಷ ಕ್ರೀಡಾಪಟು ಪ್ರಶಸ್ತಿ ಪಡೆದರು.
2011ರ ಕ್ರೀಡಾಕೂಟಲದಲ್ಲಿ 16 ಚಿನ್ನ, 10 ಬೆಳ್ಳಿ ಹಾಗೂ 20 ಕಂಚಿನೊಂದಿಗೆ ಒಟ್ಟು 55 ಪದಕಗಳೊಂದಿಗೆ 11ನೇ ಸ್ಥಾನ ಪಡೆದಿತ್ತು. 2007ರ ಗುವಾಹಟಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ 21 ಚಿನ್ನ,21 ಬೆಳ್ಳಿ, 29 ಕಂಚು ಸೇರಿ 71 ಪದಕಗಳನ್ನು ಗೆದ್ದು 10ನೇ ಸ್ಥಾನ ಪಡೆದಿತ್ತು.