ಪ್ರತಿಷ್ಠಿತ ಟಿ20 ವಿಶ್ವಕಪ್ ಆಡಲು ಎರಡು ವಾರ ಮುಂಚಿತವಾಗಿಯೇ ಬಂದ ಗುರುವಾರ ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧ ಎರಡನೆ ಅಭ್ಯಾಸ ಪಂದ್ಯ ಆಡಲಿದೆ.
ಪರ್ತ್ ನಲ್ಲಿ ನಡೆದಿದ್ದ ಮೊದಲ ಅಭ್ಯಾಸ ಪಂದ್ಯದಲ್ಲಿ ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಪಡೆ 9 ರನ್ಗಳ ರೋಚಕ ಗೆಲುವು ದಾಖಲಿಸಿತ್ತು, ಗುರುವಾರದ ಅಭ್ಯಾಸ ಪಂದ್ಯದ ಬಳಿಕ ಟೀಮ್ ಇಂಡಿಯಾ ಐಸಿಸಿ ಆಯೋಜಿಸಿರುವ ಅಭ್ಯಾಸ ಪಂದ್ಯಗಳನ್ನು ಆಡಲು ತೆರಳಲಿದೆ. ಅ.17 ಆತಿಥೇಯ ಆಸ್ಟ್ರೇಲಿಯಾ ವಿರುದ್ಧ, ಅ.19ರಂದು ಕಳೆದ ಬಾರಿಯ ರನ್ನರ್ ಅಪ್ ತಂಡ ನ್ಯೂಜಿಲೆಂಡ್ ವಿರು್ದ್ಧ ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ಇದೇ ವೇಳೆ ಭಾರತ ತಂಡ ಪರ್ತ್ ಸಮೀಪವಿರುವ ರಾಟ್ ನಟ್ ದ್ವೀಪಕ್ಕೆ ಭೇಟಿ ನೀಡಿ ರಿಲ್ಯಾಕ್ಸ್ ಮೂಡಿಗೆ ಜಾರಿತು. ಸತತ ಕ್ರಿಕೆಟ್ ಆಡಿ ಬಸವಳಿದಿರುವ ಬ್ಲೂ ಬಾಯ್ಸ್ ನಿಸರ್ಗದ ಮಡಿಲಿನಲ್ಲಿ ಕಾಲ ಕಳೆದರು.
ರಾಟ್ ನೆಟ್ ದ್ವೀಪದಲ್ಲಿ ಟೀಮ್ ಇಂಡಿಯಾ ಆಟಗಾರರು ಎಂಜಾಯ್ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳನ್ನು ಬಿಸಿಸಿಐ ತನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ರನ್ ಮಷೀನ್ ವಿರಾಟ್ ಕೊಹ್ಲಿ ಜಗತ್ತಿನ ಅತಿ ಸಂತಸದಿಂದ ಇರುವ ಪ್ರಾಣಿ ಕ್ವೊಕ್ಕಾ ಜೊತೆ ತೆಗೆಸಿಕೊಂಡಿರುವ ಫೋಟೋ ಸಖತ್ ವೈರಲ್ ಆಗಿದೆ.