ವಿಶ್ವ ಕ್ರಿಕೆಟ್‌ನ ʼಕೂಲ್ ಕ್ಯಾಪ್ಟನ್ʼ ಎಂ.ಎಸ್.ಧೋನಿ, ಐಪಿಎಲ್ ಟೂರ್ನಿಯ ಮತ್ತೊಂದು ಮೈಲುಗಲ್ಲು ದಾಟಿದ್ದಾರೆ. ಹಲವು ಮೊದಲುಗಳಿಗೆ ಮುನ್ನುಡಿ ಬರೆದಿರುವ ಧೋನಿ, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 200ನೇ ಪಂದ್ಯವಾಡಿದ ಮೊದಲ ಕ್ರಿಕೆಟಿಗ ಎನಿಸಿದ್ದಾರೆ.
15ನೇ ಆವೃತ್ತಿಯ ಐಪಿಎಲ್‌ನಲ್ಲಿ ಬುಧವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯ ಸಿಎಸ್‌ಕೆ ನಾಯಕ ಎಂಎಸ್ ಧೋನಿ, ಅವರಿಗೆ 200ನೇ ಐಪಿಎಲ್ ಪಂದ್ಯವಾಗಿದೆ. ಐಪಿಎಲ್ ಟೂರ್ನಿಯಲ್ಲಿ ಧೋನಿ, ಈವರೆಗೆ ಒಟ್ಟು 230 ಪಂದ್ಯಗಳನ್ನು ಆಡಿದ್ದಾರೆ. ಆದರೆ 2016 ಹಾಗೂ 2017ನೇ ಸೀಸನ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಐಪಿಎಲ್‌ನಿಂದ ನಿಷೇಧ ಹೇರಲಾಗಿತ್ತು. ಈ ಎರಡು ಆವೃತ್ತಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದ ಪರ 30 ಪಂದ್ಯಗಳನ್ನು ಆಡಿದ್ದರು.

ಎಂಎಸ್ ಧೋನಿ ಹೊರತಾಗಿ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ ಒಂದೇ ಫ್ರಾಂಚೈಸಿ ಪರ 200ಕ್ಕೂ ಹೆಚ್ಚಿನ ಪಂದ್ಯವಾಡಿದ್ದಾರೆ. 2008ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ, ಈವರೆಗೆ ಒಟ್ಟು 218 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ.
ಸಿಎಸ್‌ಕೆ ಪರ ಧೋನಿ 200ನೇ ಪಂದ್ಯವನ್ನಾಡಿದ್ದು, ಇವರ ನಂತರದಲ್ಲಿ 2022ರ ಐಪಿಎಲ್ ಹರಾಜಿನಲ್ಲಿ ಯಾವುದೇ ತಂಡವನ್ನು ಸೇರದ ಸುರೇಶ್ ರೈನಾ, 176 ಪಂದ್ಯ ಹಾಗೂ ರವೀಂದ್ರ ಜಡೇಜಾ 142 ಪಂದ್ಯಗಳಲ್ಲಿ ಸಿಎಸ್‌ಕೆ ತಂಡವನ್ನು ಪ್ರತಿನಿಧಿಸಿದ್ದಾರೆ. ವಿಶ್ವ ಕ್ರಿಕೆಟ್‌ನ ಸರ್ವಶ್ರೇಷ್ಠ ಕ್ಯಾಪ್ಟನ್ ಎನಿಸಿರುವ ಎಂ.ಎಸ್. ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ 2010, 2011, 2018 ಹಾಗೂ 2021ರ ಐಪಿಎಲ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ.

IPLನಲ್ಲಿ ಹೆಚ್ಚು ಪಂದ್ಯ ಆಡಿದವರು (ಒಂದೇ ಫ್ರಾಂಚೈಸಿ ಪರ):
ವಿರಾಟ್ ಕೊಹ್ಲಿ – 218 (ಆರ್‌ಸಿಬಿ)
ಎಂಎಸ್ ಧೋನಿ – 200 (ಸಿಎಸ್‌ಕೆ)
ಕೈರನ್ ಪೊಲಾರ್ಡ್ – 187(ಎಂಐ)
ರೋಹಿತ್ ಶರ್ಮ – 177(ಎಂಐ)
ಸುರೇಶ್ ರೈನಾ – 176(ಸಿಎಸ್‌ಕೆ)