Mohammed Shami – ಹೌದು.. ಕೊಹ್ಲಿ ಶತಕ ದಾಖಲಿಸಿಲ್ಲ ಏನು ಇವಾಗಾ….?
ವಿರಾಟ್ ಕೊಹ್ಲಿ ಈಗ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ. ಟೀಕೆಗಳು, ಆರೋಪಗಳು ಎಲ್ಲವೂ ವಿರಾಟ್ ಕೊಹ್ಲಿಯ ಹೆಸರಿನ ಮುಂದೆನೇ ಸುತ್ತುವರಿಯುತ್ತಿವೆ.
ಇದೀಗ ವಿರಾಟ್ ಕೊಹ್ಲಿ ಬೆಂಬಲಕ್ಕೆ ವೇಗಿ ಮಹಮ್ಮದ್ ಶಮಿ ಬಂದಿದ್ದಾರೆ. ಹೌದು, ವಿರಾಟ್ ಕೊಹ್ಲಿ 2019ರ ನಂತರ ಶತಕ ದಾಖಲಿಸಿಲ್ಲ. ಹೌದು, ಕೊಹ್ಲಿ ಶತಕ ದಾಖಲಿಸಲಿಲ್ಲ. ಏನು ಇವಾಗ ? ಎಂದು ಮಹಮ್ಮದ್ ಶಮಿ ಪ್ರಶ್ನೆ ಮಾಡಿದ್ದಾರೆ.
Mohammed Shami Comes To Virat Kohli’s Defence
ಅಷ್ಟೇ ಅಲ್ಲ ವಿರಾಟ್ ಕೊಹ್ಲಿ ಶತಕ ದಾಖಲಿಸಲಿಲ್ಲ ಅಂತ ಹೇಳೋದು ಎಷ್ಟರ ಮಟ್ಟಿಗೆ ಸರಿ. ವಿರಾಟ್ ಸರ್ವಶ್ರೇಷ್ಠ ಆಟಗಾರ. ಹಾಗಂತ ಅವರು ರನ್ ಗಳಿಸಲೇ ಇಲ್ವಾ ? ಸ್ಥಿರ ಪ್ರದರ್ಶನ ನೀಡುತ್ತಾ ಅರ್ಧಶತಕಗಳನ್ನು ದಾಖಲಿಸಲಿಲ್ವಾ? ಹಾಗಾದ್ರೆ ಅವರು ಗಳಿಸುತ್ತಿದ್ದ 50-60 ರನ್ ಗಳು ರನ್ ಗಳೇ ಅಲ್ವಾ ? ಅದರಿಂದ ತಂಡಕ್ಕೆ ಸಹಾಯವಾಗಿಲ್ವಾ ? ಹೀಗೆ ವಿರಾಟ್ ಕೊಹ್ಲಿ ಶತಕ ದಾಖಲಿಸಲಿಲ್ಲ ಎಂದು ದೂರು ಎಷ್ಟರ ಮಟ್ಟಿಗೆ ಸರಿ ಎಂದು ಮಹಮ್ಮದ್ ಶಮಿ ಅವರು ವಿರಾಟ್ ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ.
ಕೊಲ್ಕತ್ತಾದಲ್ಲಿ 2019ರಲ್ಲಿ ವಿರಾಟ್ ಕೊಹ್ಲಿ ಬಾಂಗ್ಲಾ ದೇಶದ ವಿರುದ್ದ ತನ್ನ ಕ್ರಿಕೆಟ್ ಬದುಕಿನ 70ನೇ ಶತಕವನ್ನು ಸಿಡಿಸಿದ್ದರು. ಆ ನಂತರ ವಿರಾಟ್ ಕೊಹ್ಲಿ ಶತಕ ದಾಖಲಿಸಿಲ್ಲ. ಆದ್ರೂ ಟೀಮ್ ಇಂಡಿಯಾವನ್ನು ಯಶಸ್ಸಿನ ಉತ್ತುಂಗಕ್ಕೇರಿಸಿದ್ರು. ಆದ್ರೆ 2021ರ ಟಿ-20 ವಿಶ್ವಕಪ್ ಸೋಲಿನ ನಂತರ ವಿರಾಟ್ ಕೊಹ್ಲಿ ನಾಯಕತ್ವವನ್ನು ಕಳೆದುಕೊಂಡ್ರು.
ಇನ್ನು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮಹಮ್ಮದ್ ಶಮಿ ಮತ್ತು ಜಸ್ಪ್ರಿತ್ ಬೂಮ್ರಾ ಅವರು ತಂಡದ ಪ್ರಮುಖ ಬೌಲರ್ ಆಗಿದ್ದರು.
ಇದೇ ವೇಳೆ ಮಹಮ್ಮದ್ ಶಮಿ ಅವರು ವಿರಾಟ್ ಕೊಹ್ಲಿಯವರ ನಾಯಕತ್ವದ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವಿರಾಟ್ ಕೊಹ್ಲಿ ಬೌಲರ್ ಗಳ ನಾಯಕ. ಬೌಲರ್ ಗಳಿಗೆ ಅವರು ಸಂಪೂರ್ಣವಾದ ಸ್ವಾತಂತ್ರ್ಯವನ್ನು ನೀಡುತ್ತಿದ್ದರು. ಅಲ್ಲದೆ ನಮ್ಮ ಅಭಿಪ್ರಾಯಗಳನ್ನು ಕೇಳುತ್ತಿದ್ದರು. ವಿರಾಟ್ ಜೊತೆ ಸಾಕಷ್ಟು ಸಮಯ ಕಳೆದಿದ್ದೇನೆ. ಸಾಕಷ್ಟು ಸ್ಮರಣೀಯ ಘಟನೆಗಳು ಇವೆ. ಇವು ಯಾವಾಗಲೂ ನೆನಪಿನಲ್ಲಿ ಉಳಿಯುತ್ತವೆ ಎಂದು ಮಹಮ್ಮದ್ ಶಮಿ ಹೇಳಿದ್ದಾರೆ.
ಕಳೆದ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ದ ಸೋತ ನಂತರ ಮಹಮ್ಮದ್ ಶಮಿ ಅವರು ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಟೀಕೆಗಳನ್ನು ಕೇಳಿದ್ದರು. ಆಗ ಮಹಮ್ಮದ್ ಶಮಿ ಅವರ ನೆರವಿಗೆ ಬಂದಿದ್ದು ವಿರಾಟ್ ಕೊಹ್ಲಿ.