ನಾಯಕ ಕೆ.ಎಲ್. ರಾಹುಲ್(77) ಹಾಗೂ ದೀಪಕ್ ಹೂಡ(52) ಅದ್ಭುತ ಜೊತೆಯಾಟದ ನೆರವಿನಿಂದ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 195 ರನ್ಗಳಿಸಿದೆ.
ವಾಂಖೆಡೆ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಲಕ್ನೋ ಪರ ಬ್ಯಾಟ್ಸ್ಮನ್ಗಳು ಮಿಂಚಿನ ಪ್ರದರ್ಶನ ನೀಡಿದರು. ಪರಿಣಾಮ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 195 ರನ್ಗಳಿಸಿತು. ಲಕ್ನೋ ಸೂಪರ್ ಜೈಂಟ್ಸ್ ಪರ, ಕೆ.ಎಲ್.ರಾಹುಲ್(77), ದೀಪಕ್ ಹೂಡ(52) ಉತ್ತಮ ಬ್ಯಾಟಿಂಗ್ನಿಂದ ಆಸರೆಯಾದರು.
![IPL 2022: ರಾಹುಲ್-ಹೂಡ ಅರ್ಧಶತಕದ ಅಬ್ಬರ: ಡೆಲ್ಲಿ ವಿರುದ್ಧ ಲಕ್ನೋ 195/3 3 RAHUL AND HOODA](http://sportskarnataka.com/wp-content/uploads/2022/05/RAHUL-AND-HOODA.jpg)
ರಾಹುಲ್-ಹೂಡ ಅಬ್ಬರ:
ಇನ್ನಿಂಗ್ಸ್ ಆರಂಭಿಸಿದ ಲಕ್ನೋ ಪರ ಕ್ವಿಂಟನ್ ಡಿಕಾಕ್(23) ಬಿರುಸಿನ ಆಟವಾಡಿ ಹೊರ ನಡೆದರು. ನಂತರ ಜೊತೆಯಾದ ಕೆ.ಎಲ್.ರಾಹುಲ್ 77 ರನ್(51 ಬಾಲ್, 4 ಬೌಂಡರಿ, 5 ಸಿಕ್ಸ್) ಹಾಗೂ ದೀಪಕ್ ಹೂಡ 52 ರನ್(34 ಬಾಲ್, 6 ಬೌಂಡರಿ, 1 ಸಿಕ್ಸ್) ಬ್ಯಾಟಿಂಗ್ನಲ್ಲಿ ಮಿಂಚಿದರು. ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಈ ಜೋಡಿ, 2ನೇ ವಿಕೆಟ್ಗೆ 95(61) ರನ್ಗಳ ಭರ್ಜರಿ ಜೊತೆಯಾಟದಿಂದ ತಂಡಕ್ಕೆ ಆಸರೆಯಾದರು.
ದೀಪಕ್ ಹೂಡ ವಿಕೆಟ್ ಪತನದ ನಂತರವೂ ರಾಹುಲ್, ಜವಾಬ್ದಾರಿಯ ಆಟ ಮುಂದುವರಿಸಿದರು. 3ನೇ ವಿಕೆಟ್ಗೆ ಮಾರ್ಕಸ್ ಸ್ಟಾಯ್ನಿಸ್(17*) ಜೊತೆಗೂಡಿ 39(25) ರನ್ಗಳ ಜೊತೆಯಾಟದ ಮೂಲಕ ತಂಡದ ಮೊತ್ತವನ್ನ ಹೆಚ್ಚಿಸಿದರು. ಕೊನೆ ಹಂತದಲ್ಲಿ ಬಂದ ಕೃನಾಲ್ ಪಾಂಡ್ಯ(9*) ತಂಡದ ಮೊತ್ತವನ್ನು 195ಕ್ಕೆ ತಂದು ನಿಲ್ಲಿಸಿದರು.
![IPL 2022: ರಾಹುಲ್-ಹೂಡ ಅರ್ಧಶತಕದ ಅಬ್ಬರ: ಡೆಲ್ಲಿ ವಿರುದ್ಧ ಲಕ್ನೋ 195/3 4 DELHI CAPITALS](http://sportskarnataka.com/wp-content/uploads/2022/05/DELHI-CAPITALS.jpg)
ಡೆಲ್ಲಿ ಕ್ಯಾಪಿಟಲ್ಸ್ ಪರ ಶಾರ್ದೂಲ್ ಥಾಕೂರ್(3/40) ಹೊರತುಪಡಿಸಿ ಉಳಿದ ಯಾವುದೇ ಬೌಲರ್ಗಳು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ.