ವಿಶ್ವ ಕ್ರಿಕೆಟ್ನ ಶ್ರೇಷ್ಠ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ಮಿಂಚುತ್ತಿರುವ ಕನ್ನಡಿಗ ಕೆ.ಎಲ್.ರಾಹುಲ್, ಐಪಿಎಲ್ನಲ್ಲಿ ತಮ್ಮ ಸ್ಥಿರ ಪ್ರದರ್ಶನದ ಮೂಲಕ ಕಮಾಲ್ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಬ್ಯಾಟಿಂಗ್ನಲ್ಲಿ ಅಬ್ಬರಿಸುತ್ತಿರುವ ರಾಹುಲ್, 15ನೇ ಆವೃತ್ತಿಯಲ್ಲೂ ಘರ್ಜಿಸುತ್ತಿದ್ದಾರೆ.
ಚುಟುಕು ಕ್ರಿಕೆಟ್ನಲ್ಲಿ ಮಿಂಚು ಹರಿಸುತ್ತಿರುವ ಕೆ.ಎಲ್.ರಾಹುಲ್, ಕಳೆದ ಐದು ಆವೃತ್ತಿಗಳಿಂದಲೂ ಭರ್ಜರಿ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಈ ಹಿಂದಿನ ಸೀಸನ್ಗಳಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸುತ್ತಿದ್ದ ರಾಹುಲ್, 2022ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಾರಥ್ಯವಹಿಸಿದ್ದಾರೆ. ನಾಯಕತ್ವದ ಒತ್ತಡದ ನಡುವೆಯೂ ಮಿಂಚುತ್ತಿರುವ ʼಕರ್ನಾಟಕ ಲಯನ್ʼ ಖ್ಯಾತಿಯ ಕೆ.ಎಲ್.ರಾಹುಲ್, ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿ ಘರ್ಜಿಸುತ್ತಿದ್ದಾರೆ.
2022ರ ಐಪಿಎಲ್ನಲ್ಲಿ ಈಗಾಗಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿರುವ ರಾಹುಲ್, 2 ಶತಕ ಹಾಗೂ 2 ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ʼಗೋಲ್ಡನ್ ಡಕ್ʼ ಆಗಿದ್ದ ಕೆಎಲ್, ನಂತರದಲ್ಲಿ ಗೋಲ್ಡನ್ ಫಾರ್ಮ್ ಕಂಡುಕೊಂಡಿದ್ದಾರೆ. ಈಗಾಗಲೇ ವೈಯಕ್ತಿಯ 450 ರನ್ಗಳ ಗಡಿದಾಟಿರುವ ಅವರು, ಈ ಸೀಸನ್ನಲ್ಲಿ ಗರಿಷ್ಠ ರನ್ಗಳಿಸಿದ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ 2ನೇ ಸ್ಥಾನದಲ್ಲಿದ್ದು, ಆರೆಂಜ್ ಕ್ಯಾಪ್ ರೇಸ್ನಲ್ಲಿದ್ದಾರೆ.
ಕೆ.ಎಲ್.ರಾಹುಲ್ (ಕಳೆದ 5 – IPLನಲ್ಲಿ)
2018 – 659 ರನ್ಗಳು
2019 – 593 ರನ್ಗಳು
2020 – 670 ರನ್ಗಳು
2021 – 626 ರನ್ಗಳು
2022* – 451* ರನ್ಗಳು
ರಾಹುಲ್ ಪ್ರದರ್ಶನ (2022ರ ಐಪಿಎಲ್ನಲ್ಲಿ)
ಇನ್ನಿಂಗ್ಸ್ – 10
ರನ್ಗಳು – 451
ಸರಾಸರಿ – 56.38
ಸ್ಟ್ರೈಕ್ ರೇಟ್ – 145.02
50s/100s – 2/2
ನಾಟೌಟ್ – 2
ಡಕೌಟ್ – 2
4s/6s – 38/20