ಕೊನೆ ಹಂತದವರೆಗೂ ಜಿದ್ದಾಜಿದ್ದಿನಿಂದ ಕೂಡಿದ್ದ ಹಣಾಹಣಿಯಲ್ಲಿ ಪ್ರಾಬಲ್ಯ ಸಾಧಿಸುವ ಮೂಲಕ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ 12 ರನ್‌ಗಳ ಅದ್ಭುತ ಗೆಲುವು ಸಾಧಿಸಿತು.
ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 169 ರನ್‌ಗಳಿಸಿತು. ಈ ಪೈಪೋಟಿಯ ಮೊತ್ತ ಕಲೆಹಾಕಿದ ಸನ್‌ರೈಸರ್ಸ್ ಹೈದ್ರಾಬಾದ್, 20 ಓವರ್‌ಗಳಲ್ಲಿ 9 ವಿಕೆಟ್‌ಗೆ 157 ರನ್‌ಗಳಿಗೆ ತನ್ನ ಹೋರಾಟ ಅಂತ್ಯಗೊಳಿಸಿತು. ಆ ಮೂಲಕ 12 ರನ್‌ಗಳ ಸೋಲನುಭವಿಸಿದ ಹೈದ್ರಾಬಾದ್ 15ನೇ ಆವೃತ್ತಿಯಲ್ಲಿ 2ನೇ ಸೋಲು ಕಂಡಿತು.
ಲಕ್ನೋ ನೀಡಿದ ಪೈಪೋಟಿಯ ಮೊತ್ತ ಎದುರಿಸಿದ ಸನ್‌ರೈಸರ್ಸ್ ಹೈದ್ರಾಬಾದ್ ಪರ ಅಭಿಷೇಕ್ ಶರ್ಮ(13), ಕೇನ್ ವಿಲಿಯಂಸನ್(16) ಹಾಗೂ ಮಾರ್ಕ್ರಂ(12) ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ತ್ರಿಪಾಠಿ(44) ಹಾಗೂ ಪೂರನ್(34) ಉತ್ತಮ ಆಟವಾಡಿದರು. ಮಧ್ಯಮ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್(18) ಸ್ವಲ್ಪಮಟ್ಟಿನ ಪ್ರತಿರೋಧ ತೋರಿದರು. ಲಕ್ನೋ ಪರ ಅವೇಶ್ ಖಾನ್(4/24) ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿದರೆ. 2022ರ ಐಪಿಎಲ್‌ನಲ್ಲಿ ಮೊದಲ ಪಂದ್ಯವಾಡಿದ ಜೇಸನ್ ಹೋಲ್ಡರ್(3/34), ಕೃನಾಲ್ ಪಾಂಡ್ಯ(2/27) ಉತ್ತಮ ಪ್ರದರ್ಶನ ನೀಡಿದರು.
ಲಕ್ನೋ ಆರಂಭಿಕ ಆಘಾತ:
ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್, ಆರಂಭಿಕ ಆಘಾತ ಕಂಡಿತು. ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಕ್ವಿಂಟನ್ ಡಿಕಾಕ್(1) ಬಹುಬೇಗನೆ ನಿರ್ಗಮಿಸಿದರು. ಇವರ ಬೆನ್ನಲ್ಲೇ ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದು 1ನೇ ಕ್ರಮಾಂಕದಲ್ಲಿ ಬಂದ ಎವಿನ್ ಲೂಯಿಸ್(1) ನಿರೀಕ್ಷಿತ ಆಟವಾಡುವಲ್ಲಿ ವಿಫಲರಾದರು. ಇವರಿಬ್ಬರ ಪತನದ ನಂತರ ಕಣಕ್ಕಿಳಿದ ಮನೀಷ್ ಪಾಂಡೆ(11) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ರಾಹುಲ್-ಹೂಡ ಅಬ್ಬರ
ಆರಂಭಿಕ ಆಘಾತದ ನಡುವೆಯೂ ಕೆ.ಎಲ್.ರಾಹುಲ್ ಹಾಗೂ ದೀಪಕ್ ಹೂಡ ಉತ್ತಮ ಆಟವಾಡಿದರು. ಹೈದ್ರಾಬಾದ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಸ್ಪೋಟಕ ಬ್ಯಾಟಿಂಗ್‌ನಿಂದ ಅಬ್ಬರಿಸಿದರು. ಅಲ್ಲದೇ 4ನೇ ವಿಕೆಟ್‌ಗೆ 87 ರನ್ ಕಲೆಹಾಕಿದರು. ಜವಾಬ್ದಾರಿಯ ಆಟವಾಡಿದ ನಾಯಕ ರಾಹುಲ್ 68 ರನ್ (50 ಬಾಲ್, 6 ಬೌಂಡರಿ, 1 ಸಿಕ್ಸ್) ತಂಡಕ್ಕೆ ಬೆನ್ನೆಲುಬಾದರು. ಒತ್ತಡದ ನಡುವೆ ಬ್ಯಾಟಿಂಗ್‌ನಲ್ಲಿ ನಾಯಕನಿಗೆ ಸಾಥ್ ನೀಡಿದ ದೀಪಕ್ ಹೂಡ 51 ರನ್ (33 ಬಾಲ್, 3 ಬೌಂಡರಿ, 3 ಸಿಕ್ಸರ್) ಐಪಿಎಲ್‌ನಲ್ಲಿ 5ನೇ ಅರ್ಧಶತಕ ಬಾರಿಸಿ ಮಿಂಚಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಆಯುಷ್ ಬಡೋನಿ – ರನ್ ಸಿಡಿಸಿದರು. ಸನ್‌ರೈಸರ್ಸ್ ಹೈದ್ರಾಬಾದ್ ಪರ ವಾಷಿಂಗ್ಟನ್ ಸುಂದರ್ (2/28), ರೊಮಾರಿಯೊ ಶೆಫರ್ಡ್ (2/25) ಹಾಗೂ ನಟರಾಜನ್ (2/26) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.