ಇಂಡಿಯನ್ ಪ್ರೀಮಿಯರ್ ಲೀಗ್ನ ಶನಿವಾರದ ಡಬಲ್ ಧಮಾಕಾ ರೋಚಕತೆಯನ್ನು ಸೃಷ್ಟಿಸಿದೆ.ಲಖನೌ ಮತ್ತು ಕೊಲ್ಕತ್ತಾ ಪಂದ್ಯದಲ್ಲಿ ಅನೇಕ ಲೆಕ್ಕಾಚಾರಗಳಿವೆ. ಗೆಲುವು ಸೋಲಿನಷ್ಟೇ ನಂಬರ್ ಗೇಮ್ ಮತ್ತು ಗೇಮ್ಪ್ಲಾನ್ ಗಳ ಬಗ್ಗೆ ಚರ್ಚೆ ಶುರುವಾಗಿದೆ.
ನರೈನ್-ರಸೆಲ್ ಬೌಲಿಂಗ್ ಮೋಡಿ:
ಕೊಲ್ಕತ್ತಾ ನೈಟ್ ರೈಡರ್ಸ್ ಬೌಲರ್ಗಳಾದ ಆ್ಯಂಡ್ರೆ ರಸೆಲ್ ಮತ್ತು ಸುನೀಲ್ ನರೈನ್ ಲಖನೌ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ಕಾಟ ಕೊಟ್ಟಿದೆ. ನರೈನ್ ವಿರುದ್ದ ದೀಪಕ್ ಹೂಡ 20 ಎಸೆತಗಳಲ್ಲಿ ಕೇವಲ 19 ರನ್ ಮಾತ್ರ ಗಳೀಸಿದ್ದಾರೆ. ಅಷ್ಟೇ ಅಲ್ಲ ಎರಡು ಬಾರಿ ಔಟ್ ಮಾಡಿದ್ದಾರೆ. ಮಾರ್ಕಸ್ ಸ್ಟೋಯ್ನಿಸ್ ನರೈನ್ ವಿರುದ್ಧ ಒಮ್ಮೆ ಔಟಾಗಿದ್ದಾರೆ. ಇನ್ನೊಂದೆಡೆ ಆ್ಯಂಡ್ರೆ ರಸೆಲ್ ಸ್ಟೋಯ್ನಿಸ್ ಪಾಲಿಗೆ ವಿಲನ್ ಆಗಿದ್ದಾರೆ. ಸ್ಟೋಯ್ನಿಸ್ 3 ಬಾರಿ ರಸೆಲ್ ಗೆ ವಿಕೆಟ್ ಒಪ್ಪಿಸಿದ್ದಾರೆ. ರಸೆಲ್, ಜೇಸನ್ ಹೋಲ್ಡರ್ ಅವರನ್ನು 4 ಬಾರಿ ಔಟ್ ಮಾಡಿದ್ದಾರೆ. ಆದರೆ ಕೃನಾಲ್ ಪಾಂಡ್ಯಾ ರಸೆಲ್ ವಿರುದ್ಧ 22 ಎಸೆತಗಳಲ್ಲಿ 32 ರನ್ ಸಿಡಿಸಿದ್ದಾರೆ.
ಹೋಲ್ಡರ್ರನ್ನು ಹೋಲ್ಡ್ ಮಾಡಿ:
ಈ ಬಾರಿಯ ಐಪಿಎಲ್ನಲ್ಲಿ ಜೇಸನ್ ಹೋಲ್ಡರ್ ಪವರ್ ಪ್ಲೇ, ಮಿಡಲ್ ಓವರ್ ಹಾಗೂ ಸ್ಲಾಗ್ ಓವರುಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಆದರೆ ರಸೆಲ್ ಕ್ರೀಸ್ನಲ್ಲಿದ್ದಾಗ ಹೋಲ್ಡರ್ ಬೌಲಿಂಗ್ ಮಾಡದೇ ಇರುವುದು ಒಳ್ಳೆಯದು. ಯಾಕಂದರೆ ರಸೆಲ್ ಹೋಲ್ಡರ್ ವಿರುದ್ಧ 24 ಎಸೆತಗಳಲ್ಲಿ 42 ರನ್ ಸಿಡಿಸಿದ್ದಾರೆ.
ನಂಬರ್ ಗೇಮ್:
- ಪುಣೆಯಲ್ಲಿ ನಡೆದ ಎಲ್ಲಾ ಪಂದ್ಯಗಳಲ್ಲೂ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆರಿಸಿಕೊಂಡಿದೆ. ಆದರೆ ಗೆದ್ದಿರುವುದು ಕೇವಲ 3 ಪಂದ್ಯಗಳನ್ನು ಮಾತ್ರ.
- ಸುನೀಲ್ ನರೈನ್ ಮಿಡಲ್ ಓವರ್ ನಲ್ಲಿ ಕೇವಲ 5 ರನ್ಗಳ ಎಕಾನಮಿ ಹೊಂದಿದ್ದಾರೆ. ಕೃನಾಲ್ ಪಾಂಡ್ಯಾ ಎಕಾನಮಿ 5.95ರಷ್ಟಿದೆ.
- ನರೈನ್ ವಿರುದ್ಧ ರಾಹುಲ್ ಮಿಂಚಿದ್ದಾರೆ. ನರೈನ್ ಎಸೆದ 71 ಎಸೆತಗಳಲ್ಲಿ ರಾಹುಲ್ 131 ರನ್ ಬಾಚಿದ್ದಾರೆ.