ಇಂಡಿಯನ್ ಪ್ರೀಮಿಯರ್ ಲೀಗ್ ದಿನಕಳೆದಂತೆ ಒಂದೊಂದೇ ಪಂದ್ಯಗಳು ಮುಕ್ತಾಯ ಕಾಣುತ್ತಿವೆ. ಆರೇಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಫೈಟ್ ಮಧ್ಯ ನಿಧಾನವಾಗಿ ಪ್ಲೇ-ಆಫ್ ಕನಸುಗಳು ಹುಟ್ಟಿಕೊಳ್ಳುತ್ತಿವೆ. ಈ ಮಧ್ಯೆ ಬೌಂಡರಿ ಗಳ ಲೆಕ್ಕಾಚಾರವೂ ನಡೆಯುತ್ತಿದೆ. ಈ ಬಾರಿಯ ಐಪಿಎಲ್ನಲ್ಲಿ ಅತೀ ಹೆಚ್ಚು ಫೋರ್ ಬಾರಿಸಿದ ತಂಡಗಳ ಬಗ್ಗೆ ಚರ್ಚೆ ಯಿದೆ.
ಹೊಸ ತಂಡ ಲಖನೌ ಸೂಪರ್ ಜೈಂಟ್ಸ್ ಫೋರ್ ಬಾರಿಸುವುದರಲ್ಲಿ ಎತ್ತಿದ ಕೈ. ಲಖನೌ ಇಲ್ಲಿ ತನಕ 3 ಪಂದ್ಯಗಳಿಂದ 49 ಫೋರ್ ಬಾರಿಸಿದೆ. ಪಂದ್ಯ ಒಂದಕ್ಕೆ ಸರಾಸ 16 ಫೋರ್ ಬಾರಿಸಿದ ಕೀರ್ತಿ ಲಖನೌ ತಂಡಕ್ಕಿದೆ. ಮತ್ತೊಂದು ಕಡೆ ಚೆನ್ನೈ ಪಂದ್ಯವೊಂದರಲ್ಲಿ ತಲಾ 15 ಫೋರ್ ಬಾರಿಸಿದ ಸರಾಸರಿ ಹೊಂದಿದೆ. ಸನ್ ರೈಸರ್ಸ್ ಹೈದ್ರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಲೆಕ್ಕಾಚಾರದಲ್ಲಿ ಹಿಂದೆ ಬಿದ್ದಿವೆ.