ಕತಾರ್ ಫುಟ್ಬಾಲ್ ವಿಶ್ವಕಪ್ ನನ್ನ ಕೊನೆಯ ಫುಟ್ಬಾಲ್ ವಿಶ್ವಕಪ್ ಆಗಿದೆ ಎಂದು ಅರ್ಜೆಂಟಿನಾ ದಂತಕತೆ ಲಿಯೊನೆಲ್ ಮೆಸ್ಸಿ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಈ ಸುದ್ದಿಯನ್ನು ಕೇಳಲು ಯಾವ ಫುಟ್ಬಾಲ್ ಅಭಿಮಾನಿಗೂ ಇಷ್ಟವಿಲ್ಲ ಆದರೆ ಇದು ನನ್ನ ಕೊನೆಯ ವಿಶ್ವಕಪ್ ಎಂದು ಮೆಸ್ಸಿ ಸ್ಪಷ್ಟನೆ ನೀಡಿದ್ದಾರೆ.
ನಾನು ದೈಹಿಕವಾಗಿ ಚೆನ್ನಾಗಿದ್ದೇನೆ. ಈ ಋತು ನನಗೆ ಚೆನ್ನಾಗಿತ್ತು. ನಾನು ತುಂಬ ತಡವಾಗಿ ಟ್ರೇನಿಂಗ್ ಆರಂಭಿಸಿದೆ. ರಿದಂ ಇಲ್ಲದೇ ಆಡಿದೆ. ನಂತರ ರಾಷ್ಟ್ರೀಯ ತಂಡಕ್ಕೆ ಹೋದೆ. ಅಲ್ಲಿ ಗಾಯಗೊಂಡು ವಾಪಸ್ ಮರಳಿದೆ ಎಂದಿದ್ದಾರೆ.
ವಿಶ್ವಕಪ್‍ನ ಕೌಂಟ್‍ಡೌನ್ ಮಾಡುತ್ತಿದ್ದೇನೆ. ನಿzಜವೇನೆಂದರೆ ಸ್ವಲ್ಪ ಆತಂಕವಿದೆ. ಏನು ಆಗುತ್ತದೆ ಎಂಬುದನ್ನು ಎದುರು ನೋಡುತ್ತೀದ್ದೇನೆ.ಫುಟ್ಬಾಲ್ ಅನ್ನು ಕಾಯಲು ಆಗುತ್ತಿಲ್ಲ.ಆದರೆ ಅದು ಆರಂಭವಾಗುವರೆಗೂ ಕಾಯಬೇಕು ಎಂದು ಹೇಳಿದ್ದಾರೆ.
ಫಿಫಾ ವಿಶ್ವಕಪ್‍ಗಳಲ್ಲಿ ಚೆನ್ನಾಗಿ ಆಡುತ್ತಾ ಬಂದಿದ್ದಾರೆ. 2006, 2010, 2014 ಮತ್ತು 2108ರ ವಿಶ್ವಕಪ್ ಹೊರತು ಪಡಿಸಿ 19 ಪಂದ್ಯಗಳಿಂದ ಆರು ಗೋಲುಗಳನ್ನು ಹೊಡೆದಿದ್ದಾರೆ.
ವಿಶ್ವಕಪ್‍ನಲ್ಲಿ ಮೆಸ್ಸಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಪ್ರಶಸ್ತಿ ಸಮೀಪಕ್ಕೆ ಸಾಗಿಯೂ ಗೆಲ್ಲಲೂ ಸಾಧ್ಯವಾಗಿಲ್ಲ. 2014ರಲ್ಲಿdರ್ಮನಿ ವಿರುದ್ಧ ಫೈನಲ್‍ನಲ್ಲಿ ಸೋತು ನಿರಾಸೆ ಅನುಭವಿಸಿತ್ತು. ಈ ಬಾರಿ ನ.22ರಂದು ಸೌದಿ ಅರೆಬಿಯಾ ವಿರುದ್ಧ ಅರ್ಜೆಂಟಿನಾ ತನ್ನ ಮೊದಲ ವಿಶ್ವಕಪ್ ಪಂದ್ಯವನ್ನು ಆಡಲಿದೆ.