ಕ್ರಿಕೆಟಿಗರು ಎಷ್ಟು ಸೆಲೆಬ್ರಿಟಿಗಳೋ ಅವರಷ್ಟೇ ಅವರ ಮಡದಿಯರು ಕೂಡ ಸೆಲಬ್ರಿಟಿಗಳಾಗಿದ್ದಾರೆ. ಪಂದ್ಯ ನಡೆಯುವಾಗ ಕ್ರಿಕೆಟಿಗರು ಮೈದಾನದಲ್ಲಿದ್ದರೆ ಅವರ ಮಡದಿಯರು ವಿಐಪಿ ಬಾಕ್ಸ್ನಲ್ಲಿ ಕ್ಯಾಮರಾಗಳಿಗೆ ಫೋಸ್ ಕೊಡುತ್ತಿರುತ್ತಾರೆ. ಆಟಗಾರರು ಸಂಭ್ರಮಿಸುವಾಗ ಅವರ ಮಡದಿಯರ ಸಂಭ್ರಮವನ್ನೂ ಕ್ಯಾಪ್ಚರ್ ಮಾಡಲಾಗುತ್ತದೆ.
ಈ ಬಾರಿಯ ಐಪಿಎಲ್ನಲ್ಲಿ ಕ್ರಿಕೆಟಿಗರ ಪತ್ನಿಯರಿಗೆ ಬಯೋಬಬಲ್ನಲ್ಲಿ ಅವಕಾಶ ಕೊಡಲಾಗಿದೆ. ಹೀಗಾಗಿ ಪ್ರತಿಯೊಂದು ಪಂದ್ಯದ ವೇಳೆಯೂ ಕ್ರಿಕೆಟಿಗರ ಮಡದಿಯರು ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಕೊಲ್ಕತ್ತಾ ಕ್ರಿಕೆಟ್ ತಂಡದ ಆಟಗಾರರ ಮಡದಿಯರ ಗ್ಯಾಂಗ್ ಸುದ್ದಿಯಲ್ಲಿದೆ. ಎಲ್ಲಾ ಕ್ರಿಕೆಟಿಗರ ಮಡದಿಯರು ಒಂದೇ ಫ್ರೇಮ್ನಲ್ಲಿ ಸಿಗುತ್ತಿರುವುದರಿಂದ ಅವರ ಬಗ್ಗೆ ಕುತೂಹಲ ಹೆಚ್ಚಿದೆ.
ನಿತೀಶ್ ರಾಣಾ ಅವರು ವೃತ್ತಿಪರ ಇಂಟೀರಿಯರ್ ಡಿಸೈನರ್ ಸಾಚಿ ವರ್ಮಾ ಅವರನ್ನು ವಿವಾಹವಾಗಿದ್ದಾರೆ. ಈ ಜೋಡಿಯು 2016 ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿತು. ಅವರು 2018 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಒಂದು ವರ್ಷದ ನಂತರ, 2019 ರಲ್ಲಿ ಅವರು ವಿವಾಹವಾದರು.
ರಾಧಿಕಾ ಧೋಪಾವ್ಕರ್ ಅಜಿಂಕ್ಯ ರಹಾನೆ ಪತ್ನಿ. ರಾಧಕಾ ಗೃಹಿಣಿ. ರಾಧಿಕಾ ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್ .
ಆಂಡ್ರೆ ರಸ್ಸೆಲ್ ಪತ್ನಿ, ಜಸ್ಸಿಮ್ ಲೋರಾ, ಕೆರಿಬಿಯನ್ ಸೆಲೆಬ್ರಿಟಿ, ಫ್ಯಾಷನ್ ಮಾಡೆಲ್ ಮತ್ತು ಬ್ಲಾಗರ್. ಬೋಲ್ಡ್ ಶೂಟಿಂಗ್ಗಳಿಂದಾಗಿ ಆಗಾಗ್ಗೆ ಸುದ್ದಿ ಮಾಡುತ್ತಾರೆ.
ವೇಗಿ ಉಮೇಶ್ ಯಾದವ್ ಫ್ಯಾಷನ್ ಡಿಸೈನರ್ ತಾನ್ಯಾ ವಾಧ್ವಾ ಅವರನ್ನು ವಿವಾಹವಾಗಿದ್ದಾರೆ. ಉಮೇಶ್ ಮತ್ತು ತಾನ್ಯಾ ಜೋಡಿ ಸದ್ಯದ ಐಪಿಎಲ್ನಲ್ಲಿ ಕ್ಯಾಮರಾಗಳ ಹಾಟ್ ಕ್ಯಾಪ್ಚರ್.
ಇಂಗ್ಲೆಂಡ್ನ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಸ್ಯಾಮ್ ಬಿಲ್ಲಿಂಗ್ಸ್ ಟೆನಿಸ್ ಆಟಗಾರ್ತಿ ಸಾರಾ ಕ್ಯಾಂಟ್ಲೇ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಸಾರಾ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ.
ಶೆಲ್ಡನ್ ಜಾಕ್ಸನ್ ವರದಾ ಅವರನ್ನು ವಿವಾಹವಾಗಿದ್ದಾರೆ. ಡಿಸೆಂಬರ್ 27, 2016 ರಂದು ವಿವಾಹವಾಗಿ ಒಂದು ಗಂಡು ಮಗುವನ್ನೂ ಪಡೆದಿದ್ದಾರೆ.
ಪ್ಯಾಟ್ ಇಂಟೀರಿಯರ್ ಡಿಸೈನರ್ ಬೆಕಿ ಬೋಸ್ಟನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. . ಈ ಜೋಡಿ 2014 ರಿಂದ ಡೇಟಿಂಗ್ ನಡೆಸುತ್ತಿದೆ.
ಆಲ್ ರೌಂಡರ್ ಸುನಿಲ್ ನರೈನ್ ಅವರು ಅಂಜೆಲಿಯಾ ಅವರನ್ನು ವಿವಾಹವಾಗಿದ್ದಾರೆ. ಅಂಜೆಲಿಯಾ ನರೈನ್ ಎರಡನೇ ಪತ್ನಿ. ಈ ಹಿಂದೆ ನರೈನ್ ಭಾರತೀಯ ಮೂಲದ ನಂದಿತಾ ಕುಮಾರ್ ಅವರನ್ನು ಮದುವೆಯಾಗಿದ್ದರು.