ಮುಂಬೈ ಇಂಡಿಯನ್ಸ್ ಐಪಿಎಲ್ 15ನೇ ಆವೃತ್ತಿಯಲ್ಲಿ ಸಾಧಿಸಲು ಏನೂ ಉಳಿದಿಲ್ಲ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದ ಕಳಂಕ ತಪ್ಪಿಸಿಕೊಳ್ಳಲಷ್ಟೇ ಆಡಬೇಕಿದೆ. ಆದರೆ ಉಳಿದ ತಂಡಗಳ ಭವಿಷ್ಯ ಮುಂಬೈ ಇಂಡಿಯನ್ಸ್ ಕೈಯಲ್ಲಿದೆ ಅನ್ನುವುದು ಸುಳ್ಳಲ್ಲ. ಮೊದಲಿಗೆ ಕೆಕೆಆರ್ ಆಟವನ್ನು ಖತಂ ಮಾಡಲು ರಣತಂತ್ರಸಜ್ಜಾಗಿದೆ.
ರೋಹಿತ್ ಪ್ರಾಬ್ಲಂ..!
ಸುನೀಲ್ ನರೈನ್ ರೋಹಿತ್ ಶರ್ಮಾ ಅವರನ್ನು 23 ಟಿ20 ಇನ್ನಿಂಗ್ಸ್ ಗಳಲ್ಲಿ 9 ಬಾರಿ ಔಟ್ ಮಾಡಿದ್ದಾರೆ. ಅಷ್ಟೇ ಅಲ್ಲ ನರೈನ್ ರೋಹಿತ್ಗೆ 170 ಎಸೆತಗಳಲ್ಲಿ 183 ರನ್ ಮಾತ್ರ ಬಿಟ್ಟುಕೊಟ್ಟಿದ್ದಾರೆ. ಟಿಮ್ ಸೌಥಿ 14 ಟಿ20 ಇನ್ನಿಂಗ್ಸ್ ಗಳಲ್ಲಿ ರೋಹಿತ್ ಅವರನ್ನು 4 ಬಾರಿ ಔಟ್ ಮಾಡಿದ್ದಾರೆ. ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ನರೈನ್ ಮತ್ತು ಸೌಥಿ ಕೈಯಿಂದ ಬೌಲಿಂಗ್ ಆರಂಭಿಸಿದರೂ ಅಚ್ಚರಿ ಇಲ್ಲ.
ಸಿಕ್ಸರ್ ಕಿಂಗ್ ಡೇವಿಡ್:
2021ರಿಂದ ಟಿಮ್ ಡೇವಿಡ್ ಟಿ20 ಮ್ಯಾಚ್ನ ಡೆತ್ ಓವರ್ ಗಳಲ್ಲಿ 47 ಸಿಕ್ಸರ್ ಬಾರಿಸಿದ್ದಾರೆ. ಇದು 16 ರಿಂದ 20 ಓವರುಗಳ ಮಧ್ಯೆ ಬ್ಯಾಟ್ಸ್ಮನ್ ಸಿಡಿಸಿರುವ ಗರಿಷ್ಟ ಸಿಕ್ಸರ್ ಸಂಖ್ಯೆ ಆಗಿದೆ.
ನಂಬರ್ ಗೇಮ್:
- ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 30 ಪಂದ್ಯಗಳಲ್ಲಿ 22 ಪಂದ್ಯಗಳನ್ನು ಗೆದ್ದು ಬೀಗಿದೆ.
- ಐಪಿಎಲ್ 2022 ರಲ್ಲಿ ರೋಹಿತ್ ಶರ್ಮಾ ಕೇವಲ 19.80 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಇದು ರೋಹಿತ್ ಜೀವನದ ಅತ್ಯಂತ ಕಳಪೆ ಸಾಧನೆ.
- ಮುಂಬೈ ಇಂಡಿಯನ್ಸ್ 250ನೇ ಟಿ20 ಪಂದ್ಯ ಆಡಲು ಸಿದ್ಧವಾಗುತ್ತಿದೆ.