ಐಪಿಎಲ್ನಲ್ಲಿ ನಿಧಾನವಾಗಿ ಪ್ಲೇ-ಆಫ್ ಲೆಕ್ಕಾಚಾರ ಶುರುವಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ಭರ್ಜರಿಯಾಗಿ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಅಂಕಪಟ್ಟಿಯಲ್ಲಿ ಅಲ್ಲೋಲ ಕಲ್ಲೋಲವನ್ನು ಸೃಷ್ಟಿಸಿದೆ. ಮುಂಬೈ ವಿರುದ್ಧ ಕೇವಲ 16ಓವರುಗಳಲ್ಲಿ 162 ರನ್ ಚೇಸ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ಎಲ್ಲಾ ಲೆಕ್ಕಾಚಾರಗಳನ್ನು ಮೀರಿ ನಿಂತಿದೆ.
ಕೆಕೆಆರ್ ಮುಂಬೈ ವಿರುದ್ಧದ ಪಂದ್ಯದ ಬಳಿಕ 3 ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಿ ಮುನ್ನಡೆಯುತ್ತಿದೆ. ಅಂಕಗಳ ಜೊತೆಗೆ ರನ್ ರೇಟ್ ಕೂಡ ಹೆಚ್ಚಾಗಿದೆ ಹೀಗಾಗಿ ಕೆಕೆಆರ್ ಪ್ಲೇ-ಆಫ್ ಪ್ರವೇಶಿಸುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ.
ಟಾಪ್ 5 ತಂಡಗಳು
ತಂಡ ಪಂದ್ಯ ಗೆಲುವು ಅಂಕ ರನ್ರೇಟ್
ಕೆಕೆಆರ್ 04 03 06 +1.102
ಆರ್.ಆರ್ 03 02 04 +1.218
ಜಿ.ಟಿ 02 02 04 +0.495
ಪಂಜಾಬ್ 03 02 04 +0.238
ಲಖನೌ 03 02 04 +0.193
ಕೊಲ್ಕತ್ತಾ ಭರ್ಜರಿ ಗೆಲುವಿನ ಬಳಿಕ 4 ಪಂದ್ಯಗಳನ್ನು ಆಡಿ 6 ಅಂಕ ಸಂಪಾದಿಸಿ ರನ್ ರೇಟ್ ಕೂಡ ಹೆಚ್ಚಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ರನ್ ರೇಟ್ ಹೆಚ್ಚಿದ್ದರೂ 1 ಪಂದ್ಯ ಕಡಿಮೆ ಆಡಿದೆ. ಗುಜರಾತ್ ಲಯನ್ಸ್ ಸೋಲಿಲ್ಲದ ಏಕೈಕ ತಂಡವಾಘಿದೆ. ಪಂಜಾಬ್ ಮತ್ತು ಲಖನೌ ತಂಡಗಳು ಟಾಪ್ 5ರಲ್ಲಿವೆ.
ಲಾಸ್ಟ್ 5 ತಂಡಗಳು
ಆರ್ಸಿಬಿ 03 02 04 +0.159
ಡಿ.ಸಿ. 02 01 02 +0.065
ಸಿಎಸ್ಕೆ 03 00 00 -1.251
ಮುಂಬೈ 03 00 00 -1.362
ಹೈದ್ರಾಬಾದ್ 02 00 00 -1.825
ಆರ್ಸಿಬಿ ಒಂದು ಪಂದ್ಯದ ಸೋಲಿನ ಬಳಿಕ ಗೆಲುವಿನ ರುಚಿ ಕಂಡಿದ್ದರೂ ರನ್ ರೇಟ್ ಸಾಕಷ್ಟು ಕಡಿಮೆ ಇದೆ. ಡೆಲ್ಲಿ ಕ್ಯಾಪಿಟಲ್ಸ್ ಒಂದು ಪಂದ್ಯವನ್ನು ಕಡಿಮೆ ಆಗಿದರೂ 7ನೇ ಸ್ಥಾನದಲ್ಲಿದೆ. ಚೆನ್ನೈ, ಮುಂಬೈ ಮತ್ತು ಹೈದ್ರಾಬಾದ್ ತಂಡಗಳು ಇಲ್ಲಿ ತನಕ ಗೆಲುವಿನ ರುಚಿಯನ್ನೇ ಕಂಡಿಲ್ಲ.