15ನೇ ಸೀಸನ್‌ನಲ್ಲಿ ಏರಿಳಿತದ ಪ್ರದರ್ಶನ ಕಂಡಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಪ್ಲೇ-ಆಫ್ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದು, ಇಂದು ನಡೆಯುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ತಂಡವನ್ನ ಎದುರಿಸಲು ಸಜ್ಜಾಗಿದೆ. ಅಲ್ಲದೇ 2022ರ ಐಪಿಎಲ್ ಬಳಿಕ ಕೆಕೆಆರ್ ತಂಡದ ಕೋಚ್ ಹುದ್ದೆಯಿಂದ ಕೆಳಗಿಳಿಯಲಿರುವ ಬ್ರೆಂಡನ್ ಮೆಕ್ಕಲಂ ಅವರಿಗೆ ಗೆಲುವಿನ ಉಡುಗೊರೆ ನೀಡಲು ತಂಡದ ಆಟಗಾರರು ಉತ್ಸುಕರಾಗಿದ್ದಾರೆ.
ಇಂಗ್ಲೆಂಡ್ ತಂಡದ ಕೋಚ್ ಆಗಿ ನೇಮಕಗೊಂಡಿರುವ ಬ್ರೆಂಡನ್ ಮೆಕ್ಕಲಂ, ಐಪಿಎಲ್ ಟೂರ್ನಿಯ ಬಳಿಕ ಈ ಜವಾಬ್ದಾರಿವಹಿಸಿಕೊಳ್ಳಲಿದ್ದಾರೆ. ಕೆಕೆಆರ್ ತಂಡ ಬ್ರೆಂಡನ್ ಮೆಕ್ಕಲಂ ಅವರ ಮಾರ್ಗದರ್ಶನದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್, ಟೂರ್ನಿಯಲ್ಲಿ ಕೆಲವೇ ಪಂದ್ಯಗಳನ್ನು ಆಡಲಿದೆ. ಈ ಪಂದ್ಯಗಳನ್ನು ಗೆದ್ದು ಪ್ಲೇ-ಆಫ್ ಪ್ರವೇಶಿಸುವ ಲೆಕ್ಕಾಚಾರದಲ್ಲಿರುವ ಕೊಲ್ಕತ್ತಾ, ಆ ಮೂಲಕ ತಮ್ಮ ಕೋಚ್‌ಗೆ ಗೆಲುವಿನ ವಿದಾಯ ಹೇಳುವ ನಿರೀಕ್ಷೆಯಲ್ಲಿದೆ.
ನ್ಯೂಜಿ಼ಲೆಂಡ್ ತಂಡದ ಸ್ಪೋಟಕ ಬ್ಯಾಟ್ಸ್ಮನ್ ಬ್ರೆಂಡನ್ ಮೆಕ್ಕಲಂ, ಕೆಕೆಆರ್ ತಂಡದ ಕೋಚ್ ಆದ ನಂತರದಲ್ಲಿ ತಂಡದ ಪ್ರದರ್ಶನದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಈ ಸೀಸನ್‌ನಲ್ಲಿ ಪ್ಲೇ-ಆಫ್ ರೇಸ್‌ನಲ್ಲಿ ಭಾರೀ ಪೈಪೋಟಿ ನೀಡುತ್ತಿರುವ ಕೆಕೆಆರ್, ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಮಣಿಸಿ ಹೊಸ ಜೋಶ್‌ನಲ್ಲಿದೆ. ಇದೇ ಉತ್ಸಾಹದೊಂದಿಗೆ ಇಂದಿನ ಫೈಟ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ತಂಡವನ್ನ ಮಣಿಸುವ ತವಕದಲ್ಲಿದೆ.
ಟೂರ್ನಿಯಲ್ಲಿ ಈವರೆಗೂ ಆಡಿರುವ 12 ಪಂದ್ಯಗಳಲ್ಲಿ 7 ಸೋಲು, 5 ಗೆಲುವಿನ ಮೂಲಕ 10 ಅಂಕದೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 8ನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇ-ಆಫ್ ಪ್ರವೇಶದ ನಿರೀಕ್ಷೆಯಲ್ಲಿರುವ ಕೆಕೆಆರ್ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಕೆಕೆಆರ್ ಗೆದ್ದರೆ ಮೆಕ್ಕಲಂ ಅವರ ಮಾರ್ಗದರ್ಶನದಲ್ಲೇ ಮುಂದುವರೆಯಲಿದೆ. ಒಂದೊಮ್ಮೆ ಕೆಕೆಆರ್ ಸೋಲಿನ ಆಘಾತ ಎದುರಿಸಿದ್ದೇ ಆದಲ್ಲಿ, ಮೇ 18ರಂದು ನಡೆಯುವ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯ ನೈಟ್ ರೈಡರ್ಸ್‌ಗೆ ಕೊನೆಯ ಪಂದ್ಯವಾಗಲಿದೆ. ಜೊತೆಗೆ ತಂಡದ ಕೋಚ್ ಬ್ರೆಂಡನ್ ಮೆಕ್ಕಲಂ ಅವರಿಗೂ ಕೊನೆಯ ಐಪಿಎಲ್ ಪಂದ್ಯವಾಗಲಿದೆ.