15ನೇ ಆವೃತ್ತಿಯ ಐಪಿಎಲ್ನಲ್ಲಿ ಏಳು-ಬೀಳಿನ ಪ್ರದರ್ಶನ ಕಂಡಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ರೈಸರ್ಸ್ ಹೈದ್ರಾಬಾದ್ ತಂಡಗಳು ಮಹತ್ವದ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಪ್ಲೇ-ಆಫ್ ರೇಸ್ನಲ್ಲಿರುವ ಎರಡು ತಂಡಗಳಿಗೂ ಗೆಲುವು ಅನಿವಾರ್ಯವಾಗಿದ್ದು, ಪ್ರಬಲ ಹಣಾಹಣಿ ನಡೆಸಲು ಉಭಯ ತಂಡಗಳು ಸಜ್ಜಾಗಿವೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಅಂಗಳದಲ್ಲಿ ಎರಡು ತಂಡಗಳ ಕದನಕ್ಕೆ ವೇದಿಕೆ ಸಜ್ಜಾಗಿದೆ. ಪ್ರಮುಖ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕೆಕೆಆರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ʼಮಾಡು ಇಲ್ಲವೇ ಮಡಿʼ ಪಂದ್ಯದಲ್ಲಿ ಎರಡು ತಂಡಗಳು ಕೆಲವೊಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿವೆ. ಕೆಕೆಆರ್ ಪರ ಉಮೇಶ್ ಯಾದವ್ ಹಾಗೂ ಸ್ಯಾಮ್ ಬಿಲ್ಲಿಂಗ್ಸ್ ಇಂದಿನ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಎಸ್ಆರ್ಎಚ್ ಪರ ವಾಷಿಂಗ್ಟನ್ ಸುಂದರ್, ನಟರಾಜನ್ ಹಾಗೂ ಮಾಕ್ರೋ ಜಾನ್ಸನ್ ಇಂದಿನ ಪಂದ್ಯದಲ್ಲಿ ಆಡುತ್ತಿದ್ದಾರೆ.
ಟೂರ್ನಿಯಲ್ಲಿ ಕೆಕೆಆರ್ ಹಾಗೂ ಎಸ್ಆರ್ಎಚ್ ತಂಡಗಳು ಒಂದೇ ಹಾದಿಯಲ್ಲಿದ್ದು, ಆಡಿರುವ 11 ಪಂದ್ಯದಲ್ಲಿ 5 ಗೆಲುವು, 6 ಸೋಲು ಕಂಡಿರುವ ಹೈದ್ರಾಬಾದ್ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಅಂತೆಯೇ 12 ಪಂದ್ಯದಲ್ಲಿ 7 ಸೋಲು ಮತ್ತು 5 ಗೆಲುವು ಕಂಡಿರುವ ಕೆಕೆಆರ್, 8ನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇ-ಆಫ್ ಹಂತಕ್ಕೇರಲು ಎರಡು ತಂಡಕ್ಕೂ ಉಳಿದೆಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಉಭಯ ತಂಡಗಳು:
ಕೊಲ್ಕತ್ತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್(ನಾಯಕ), ನಿತೀಶ್ ರಾಣ, ರಿಂಕು ಸಿಂಗ್, ಆಂಡ್ರೆ ರಸೆಲ್, ಸುನೀಲ್ ನರೈನ್, ಸ್ಯಾಮ್ ಬಿಲ್ಲಿಂಗ್ಸ್, ಉಮೇಶ್ ಯಾದವ್, ಟಿಮ್ ಸೌಥಿ, ವರುಣ್ ಚಕ್ರವರ್ತಿ.
ಸನ್ರೈಸರ್ಸ್ ಹೈದ್ರಾಬಾದ್: ಅಭಿಷೇಕ್ ಶರ್ಮ, ಕೇನ್ ವಿಲಿಯಂಸನ್(ನಾಯಕ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಂ, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಮಾರ್ಕೋ ಜಾನ್ಸನ್, ಭುವನೇಶ್ವರ್ಕುಮಾರ್, ಟಿ. ನಟರಾಜನ್, ಉಮ್ರಾನ್ ಮಲ್ಲಿಕ್.