ಕ್ರೀಡಾಲೋಕದಲ್ಲಿ ಈಗ ಲೀಗ್ಗಳದ್ದೇ (Sports League)ಮಾತು. ಹಾಕಿಯಿಂದ ಆರಂಭವಾದ ಲೀಗ್ ಪದ್ಧತಿ ಕ್ರಿಕೆಟ್ನಿಂದ ಜನಪ್ರಿಯವಾಯಿತು. ಫ್ರಾಂಚೈಸಿ ಲೆಕ್ಕ ಕ್ರಿಕೆಟ್ನಲ್ಲಿ ಕ್ಲಿಕ್ ಆಯಿತು. ಎಲ್ಲಾ ಕ್ರೀಡೆಗಳು ಕ್ರಿಕೆಟ್ ಅನ್ನು ಫಾಲೋ ಮಾಡಿದವು. ಪರಿಣಾಮ ಕಬ್ಬಡ್ಡಿ, ಬ್ಯಾಡ್ಮಿಂಟನ್, ವಾಲಿಬಾಲ್ ಹೀಗೆ ಹತ್ತು ಹಲವು ಲೀಗ್ಗಳು ಆರಂಭವಾದವು.
ಈಗ ಖೋ ಖೋ ಆಟಕ್ಕೂ ಹೊಸ ಲೀಗ್ ಆರಂಭಗೊಳ್ಳಲಿದೆ. ಇದಕ್ಕೆ ಅಲ್ಟಿಮೇಟ್ ಖೋ ಖೋ ಲೀಗ್ ಅಂತ ಹೆಸರಿಡಲಾಗಿದೆ. ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ-ಖೋ ಲೀಗ್ ಆಗಸ್ಟ್ 14ರಿಂದ ಪುಣೆಯ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಆರಂಭಗೊಳ್ಳಲಿದೆ.
ಡಾಬರ್ ಸಮೂಹದ (Dabour Group)ಮುಖ್ಯಸ್ಥ ಅಮಿತ್ ಬರ್ಮನ್ ಅವರು ಭಾರತೀಯ ಖೋ ಖೋ ಫೆಡರೇಶನ್ ಸಹಭಾಗಿತ್ವದಲ್ಲಿ ಲೀಗ್ ಆರಂಭಿಸುತ್ತಿದ್ದು, ಸೆಪ್ಟೆಂಬರ್ 4ರಂದು ಲೀಗ್ ಮುಕ್ತಾಯಗೊಳ್ಳಲಿದೆ. ಇದು ಫ್ರಾಂಚೈಸಿ ಆಧಾರಿತ ಲೀಗ್ ಆಗಿದ್ದು ಈ ಆವೃತ್ತಿಯಲ್ಲಿ 6 ತಂಡಗಳು ಪಾಲ್ಗೊಳ್ಳಲಿವೆ. ಒಡಿಶಾ ಸರ್ಕಾರ ಕೂಡಾ ತಂಡವೊಂದನ್ನು ಖರೀದಿಸಿದೆ.
ಲೀಗ್ನಲ್ಲಿ ಕೆಎಲ್ಒ ಸ್ಪೋರ್ಟ್ಸ್ ಮಾಲಿಕತ್ವದ ಚೆನ್ನೈ ಕ್ವಿಕ್ ಗನ್ಸ್, ಅದಾನಿ ಸ್ಪೋಟ್ಸ್ರ್ಲೈನ್ ಮಾಲಿಕತ್ವದ ಗುಜರಾತ್ ಜೈಂಟ್ಸ್, ಬಾದ್ಶಾ ಮತ್ತು ಪುನೀತ್ ಬಾಲನ್ ಒಡೆತನದ ಮುಂಬೈ ಕಿಲಾಡೀಸ್, ಒಡಿಶಾ ಸರ್ಕಾರದ ಒಡಿಶಾ ಜಗ್ಗರ್ನಟ್ಸ್, ಕ್ಯಾಪ್ರಿ ಗ್ಲೋಬಲ್ ಮಾಲಿಕತ್ವ ಹೊಂದಿರುವ ರಾಜಸ್ಥಾನ ವಾರಿಯರ್ಸ್ಸ್ ಹಾಗೂ ಜಿಎಂಆರ್ ಸಂಸ್ಥೆಯ ತೆಲುಗು ಯೋಧಾಸ್ ತಂಡಗಳು ಪಾಲ್ಗೊಳ್ಳಲಿವೆ . ಒಟ್ಟಿನಲ್ಲಿ ಖೋಖೋ ಆಟಕ್ಕೆ ಹೊಸ ಟಚ್ ನೀಡಲು ಲೀಗ್ ಆರಂಭವಾಗುತ್ತಿದ್ದು ಇದು ಯಶಸ್ವಿಯಾಗಲಿ ಅನ್ನುವುದೇ ಎಲ್ಲರ ಹಾರೈಕೆ