Sanju Samson – ಸಂಜು ಸ್ಯಾಮ್ಸನ್ ಬಗ್ಗೆ ದೊಡ್ಡ ಗಣೇಶ್ ದೊಡ್ಡ ಮಾತು..!

ಸಂಜು ಸ್ಯಾಮ್ಸನ್. ಪ್ರತಿಭೆ ಮತ್ತು ಸಾಮಥ್ರ್ಯಕ್ಕೆ ಒಂಚೂರು ಕೊರತೆ ಇಲ್ಲ. ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಳ್ಳುವ ಜಾಣ್ಮೆ ಇದೆ. ಆದ್ರೆ ಅದೃಷ್ಟವೊಂದಿಲ್ಲ. ಈ ವಿಚಾರದಲ್ಲಿ ಕೇರಳದ ಹುಡುಗ ನತದೃಷ್ಟ ಕ್ರಿಕೆಟಿಗನೇ ಸರಿ.
ಹೌದು, ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ನಾಯಕನಾಗಿರುವ ಸಂಜು ಸ್ಯಾಮ್ಸನ್ ಅವರ ಪ್ರತಿಭೆಯನ್ನು ಮೊದಲು ಗುರುತಿಸಿದ್ದೇ ಹಾಲಿ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್.
ಆದ್ರೆ ರಾಹುಲ್ ದ್ರಾವಿಡ್ ಈಗ ಹೆಡ್ ಕೋಚ್ ಆಗಿದ್ದರೂ ತನ್ನ ಶಿಷ್ಯನಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನವಿಲ್ಲ
ಇತ್ತೀಚೆಗೆ ಐರ್ಲೆಂಡ್ ವಿರುದ್ದದ ಟಿ-20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು. ಆದ್ರೆ ಇಂಗ್ಲೆಂಡ್ ಸರಣಿಯಲ್ಲಿ ಅವಕಾಶವೇ ಸಿಗಲಿಲ್ಲ.
ಇದೀಗ ವೆಸ್ಟ್ ಇಂಡೀಸ್ ವಿರುದ್ದದ ಟಿ-20 ಸರಣಿಗೂ ಸಂಜು ಸ್ಯಾಮ್ಸನ್ ಆಯ್ಕೆಯಾಗಿಲ್ಲ.
ಹಾಗಿದ್ರೆ ಸಂಜು ಸ್ಯಾಮ್ಸನ್ ಆಯ್ಕೆಯಾಗಲು ಏನು ಮಾಡಬೇಕು.. ಇದಕ್ಕು ಉತ್ತರವಿಲ್ಲ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುತ್ತಿದ್ರೂ ಸಂಜು ಸ್ಯಾಮ್ಸನ್ ಗೆ ಅವಕಾಶವೇ ಸಿಗುತ್ತಿಲ್ಲ.

ಸದ್ಯ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಗಳು ಕ್ಯೂನಲ್ಲಿ ನಿಂತಿದ್ದಾರೆ.
ಸದ್ಯದ ಮಟ್ಟಿಗೆ ರಿಷಬ್ ಪಂತ್ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಗಳಲ್ಲಿ ಮೊದಲ ಆಯ್ಕೆಯಾಗಿದೆ. ನಂತರ ಇಶಾನ್ ಕಿಶಾನ್ ಇದ್ದಾರೆ. ಹಾಗೇ ದಿನೇಶ್ ಕಾರ್ತಿಕ್ ಮ್ಯಾಚ್ ಫಿನಿಶರ್ ಆಗಿರುವುದರಿಂದ ಅವರು ಕೂಡ ಕೀಪಿಂಗ್ ಮಾಡ್ತಾರೆ. ಒಂದು ವೇಳೆ ಕೆ.ಎಲ್. ರಾಹುಲ್ ತಂಡವನ್ನು ಸೇರಿಕೊಂಡ್ರೆ ಅವರು ಕೂಡ ಕೀಪಿಂಗ್ ಮಾಡ್ತಾರೆ.
ಹೀಗಾಗಿ ಸಂಜು ಸ್ಯಾಮ್ಸನ್ ಗೆ ಪದೇ ಪದೇ ಅನ್ಯಾಯವಾಗುತ್ತಿದೆ ಇನ್ನು ಬ್ಯಾಟ್ಸ್ ಮೆನ್ ಆಗಿ ತೆಗೆದುಕೊಂಡ್ರೂ ಸಂಜು ತನ್ನ ಸಾಮಥ್ರ್ಯವನ್ನು ಸಾಬೀತುಪಡಿಸುತ್ತಿದ್ದಾರೆ.
ಈಗಾಗಲೇ ಸಾಮಾಜಿಕ ಜಾಲ ತಾಣದಲ್ಲಿ ಸಂಜ್ಯ ಸ್ಯಾಮ್ಸನ್ ಪರವಾಗಿ ನೆಟ್ಟಿಗರು ಬ್ಯಾಟ್ ಬೀಸುತ್ತಿದ್ದಾರೆ.
ಅದರಲ್ಲೂ ಟೀಮ್ ಇಂಡಿಯಾದ ಮಾಜಿ ವೇಗಿ ಹಾಗೂ ಪೀಣ್ಯ ಎಕ್ಸ್ ಪ್ರೆಸ್ ಖ್ಯಾತಿಯ ದೊಡ್ಡ ಗಣೇಶ್ ಟ್ವಿಟರ್ ನಲ್ಲಿ ಸಂಜು ಸ್ಯಾಮ್ಸನ್ ಪರವಾಗಿ ಬರೆದುಕೊಂಡಿದ್ದಾರೆ.
ನೀವು ಶ್ರೇಯಸ್ ಅಯ್ಯರ್ ಗಾಗಿ ಸಂಜು ಸ್ಯಾಮ್ಸನ್ ನಂತಹ ಆಟಗಾರರನ್ನು ಕಡೆಗಣಿಸುತ್ತಿರುವುದು ಸರಿನಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಶ್ರೇಯಸ್ ಅಯ್ಯೆರ್, ರಿಷಬ್ ಪಂತ್, ಇಶಾನ್ ಕಿಶಾನ್ ಮತ್ತು ದಿನೇಶ್ ಕಾರ್ತಿಕ್ ಅವರ ಇತ್ತೀಚಿನ ಪಂದ್ಯಗಳಲ್ಲಿ ಗಳಿಸಿರುವ ರನ್ ಮತ್ತು ಸಂಜು ಸ್ಯಾಮ್ಸನ್ ಗಳಿಸಿರುವ ರನ್ ಗಳನ್ನು ಅಂಕಿ ಅಂಶಗಳ ಮೂಲಕ ಮಾಹಿತಿ ನೀಡಿದ್ದಾರೆ. ಅಲ್ಲದೆ ಸಂಜ್ಯ ಸ್ಯಾಮ್ಸನ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಸಂಜು ಸ್ಯಾಮ್ಸನ್ ಅವರು 2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಒಟು 14 ಟಿ-20 ಪಂದ್ಯಗಳಲ್ಲಿ ಸಂಜು 251 ರನ್ ಗಳಿಸಿದ್ದಾರೆ.
ಟೀಮ್ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ-20 ಮತ್ತು ಏಕದಿನ ಸರಣಿ ಜುಲೈ ಮತ್ತು ಆಗಸ್ಟ್ ನಲ್ಲಿ ನಡೆಯಲಿದೆ. ಮೂರು ಏಕದಿನ ಮತ್ತು ಐದು ಪಂದ್ಯಗಳ ಟಿ-20 ಸರಣಿ ನಡೆಯಲಿದೆ.