ಫೈನಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕರ್ನಾಟಕ ಪುರುಷರ ಹಾಕಿ ತಂಡ 3-2ರಿಂದ ಉತ್ತರ ಪ್ರದೇಶವನ್ನು ಮಣಿಸಿ 36ನೇ ರಾಷ್ಟ್ರೀಯ ಕ್ರೀಡಾಕೂಟದ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಸೊಗಸಾದ ಪ್ರದರ್ಶನ ನೀಡಿದೆ. ಮೊದಲ ಅವಧಿಯಲ್ಲಿ ಉಭಯ ತಂಡಗಳು ಗೋಲು ಬಾರಿಸುವಲ್ಲಿ ವಿಫಲವಾದವು. ಎರಡನೇ ಅವಧಿಯಲ್ಲಿ ಕರ್ನಾಟಕ ಸಿಕ್ಕ ಅವಕಾಶವನ್ನು ಬಳಸಿಕೊಂಡು ಒಂದು ಗೋಲ್ ದಾಖಲಿಸಿತು. ಅಲ್ಲದೆ ಎದುರಾಳಿ ತಂಡದ ಮೇಲೆ ಒತ್ತಡ ಹೇರಿತು. ಅಲ್ಲದೇ ಈ ಅವಧಿಯಲ್ಲಿ ಕರ್ನಾಟಕ 1-0 ಮುನ್ನಡೆ ಸಾಧಿಸಿತು.
ಮೂರನೇ ಅವಧಿಯಲ್ಲಿ ಕರ್ನಾಟಕ ಹಾಗೂ ಉತ್ತರ ಪ್ರದೇಶ ತಂಡಗಳು ಗೋಲು ಭಾರಿಸುವಲ್ಲಿ ವಿಫಲವಾದವು. ಪರಿಣಾಮ ಪಂದ್ಯ ರೋಚಕತೆ ಹುಟ್ಟಿಸಿತು.
ನಾಲ್ಕನೇ ಅವಧಿಯಲ್ಲಿ ಕರ್ನಾಟಕ ಸ್ಥಿರ ಪ್ರದರ್ಶನ ನೀಡಿ ಎರಡು ಗೋಲ್ ದಾಖಲಿಸಿತು. ಇದೇ ಹೋದೆಯಲ್ಲಿ ಉತ್ತರ ಪ್ರದೇಶ ಎರಡು ಗೋಲ್ ಬಾರಿಸಿ ಅಬ್ಬರಿಸಿತು. ಕೊನೆಯ ಕ್ಷಣದವರೆಗೂ ಗೋಲಗಳ ಸಂಖ್ಯೆಯನ್ನು ಸಮನಾಗಿಸುವ ಉತ್ತರ ಪ್ರದೇಶದ ಆಸೆ ಫಲಿಸಲಿಲ್ಲ. ಕರ್ನಾಟಕ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
Karnataka, men’s hockey, Uttar Pradesh, 36th National Games