Syed Mushtaq Ali Trophy: ದೇವದತ್ ಶತಕದ ಅಬ್ಬರಕ್ಕೆ ಒಲಿದ ಜಯ
ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಅವರು ಸಿಡಿಸಿದ ಶತಕದ ಬಲದಿಂದ ಕರ್ನಾಟಕ 99 ರನ್ ಗಳಿಂದ ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟಿ-೨೦ ಟೂರ್ನಿಯಲ್ಲಿ ಮಹಾರಾಷ್ಟ್ರ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಮೊದಲು ಬ್ಯಾಟ್ ಮಾಡಿದ ಕರ್ನಾಟಕದ ಪರ ದೇವದತ್ ಪಡಿಕ್ಕಲ್ ಹಾಗೂ ಮಯಾಂಕ್ ಅಗರ್ ವಾಲ್ ಜೋಡಿ ಮೊದಲ ವಿಕೆಟ್ ಗೆ 34 ರನ್ ಕಲೆ ಹಾಕಿತು. ಮಯಾಂಕ್ ಅಗರ್ ವಾಲ್ 28 ರನ್ ಬಾರಿಸಿ ಔಟ್ ಆದರು.
ಎರಡನೇ ವಿಕೆಟ್ ಗೆ ದೇವದತ್ ಮತ್ತು ಮನೀಷ್ ಪಾಂಡೆ ಉತ್ತಮ ಪ್ರದರ್ಶನ ನೀಡಿದರು. ಈ ಜೋಡಿಯನ್ನು ಕಟ್ಟಿಹಾಕಲು ಎದುರಾಳಿ ತಂಡ ಮಾಡಿಕೊಂಡ ಪ್ಲಾನ್ ಉಲ್ಟಾ ಆಯಿತು. ಈ ಜೋಡಿ ತಂಡದ ಪರ ಅಗತ್ಯ ರನ್ ಕಲೆ ಹಾಕಿದರು. ಮನೀಷ್ ಪಾಂಡೆ 1 ಬೌಂಡರಿ, 4 ಸಿಕ್ಸರ್ ಸಹಾಯದಿಂದ 50 ರನ್ ಸಿಡಿಸಿ ಔಟ್ ಆದರು.
ಆರಂಭಿಕ ದೇವದತ್ ಪಡಿಕ್ಕಲ್ ಮನಮೋಹಕ ಆಟದ ಪ್ರದರ್ಶನ ನೀಡಿದರು. ಇವರು 62 ಎಸೆತಗಳಲ್ಲಿ 14 ಬೌಂಡರಿ, 6 ಸಿಕ್ಸರ್ ನೆರವಿನಿಂದ ಅಜೇಯ 124 ರನ್ ಸಿಡಿಸಿದರು. ಅಂತಿಮವಾಗಿ ಕರ್ನಾಟಕ 20 ಓವರ್ ಗಳಲ್ಲಿ 2 ವಿಕೆಟ್ ಗೆ 215 ರನ್ ಸೇರಿಸಿತು.
ಗುರಿಯನ್ನು ಹಿಂಬಾಲಿಸಿದ ಮಹಾರಾಷ್ಟ್ರ ಪರ ದಿವ್ಯಾಂಗ್ ಹಿಂಗನೇಕರ್ (47), ಶಂಶುಜಾಮ ಕಾಜಿ (28) ಎರಡಂಕಿ ಮುಟ್ಟಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ ಮನ್ ಗಳು ಎರಡಂಕಿ ಮುಟ್ಟುವಲ್ಲಿ ವಿಫಲರಾದರು. ತಂಡದ ಸ್ಟಾರ್ ಆಟಗಾರರು ಸಮಯೋಚಿತ ಬ್ಯಾಟಿಂಗ್ ನಡೆಸದೇ ಇರುವ ಕಾರಣ ಸೋಲು ಕಂಡಿತು. ಕರ್ನಾಟಕ ಪರ ವಿದ್ವತ್ ಕಾವೇರಪ್ಪ 3, ವಿಜಯ ಕುಮಾರ್ 2 ವಿಕೆಟ್ ಪಡೆದರು.
Syed Mushtaq Ali Trophy, Karnataka, Maharashtra