Neeraj Chopra: ಅಥ್ಲೆಟಿಕ್‌ನಲ್ಲಿ ಭಾರತಕ್ಕೆ ಸಿಕ್ಕಿದ ಪೋಸ್ಟರ್ Boy!
ಅದ್ಭುತ..ಅತ್ಯದ್ಭುತ.. ಈ ಪದ ಬಿಟ್ಟರೆ ಮತ್ತೊಂದು ಪದ ಈತನ ಸಾಧನೆಯನ್ನು ಬಣ್ಣಿಸಲು ಕೊಂಚ ಕಷ್ಟ. ಟೊಕಿಯೊ ಒಲಿಂಪಿಕ್ಸ್‌ಗೂ ಮುನ್ನ ನೀರಜ್ ಚೋಪ್ರಾ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಆದರೆ ಒಂದು ಸಾಧನೆ ನೀರಜ್ ವ್ಯಕ್ತಿತ್ವವನ್ನು ಬದಲಿಸಿಬಿಟ್ಟಿದೆ. ಕ್ರಿಕೆಟ್ ಹಿಂದೆ ಬೀಳುತ್ತಿದ್ದ ಯುವಕರು ಈಗ ಅಥ್ಲೆಟಿಕ್ ಕಡೆಯೂ ನೋಡುವ ಹಾಗೆ ಮಾಡಿದ್ದಾರೆ.

ಅಂದಹಾಗೇ 24 ವರ್ಷ ವಯಸ್ಸಿನ ನೀರಜ್ ಭಾರತದ ಪೋಸ್ಟರ್ ಬಾಯ್. ಮುಟ್ಟಿದ್ದೆಲ್ಲವೂ ಚಿನ್ನ ಅನ್ನುವ ಹಾಗೇ ಪ್ರದರ್ಶನ ನೀಡುತ್ತಿದ್ದಾರೆ. ಅದ್ಭುತಗಳನ್ನು ಸೃಷ್ಟಿ ಮಾಡಲು ಸಾಹಸ ಮತ್ತು ಶ್ರಮ ಬೇಕು. ಅದೆರಡನ್ನೂ ನೀರಜ್ ಮಾಡುತ್ತಿದ್ದಾರೆ. ವಿದೇಶಗಳಲ್ಲಿ ಒಂದು ಕ್ಷಣವೂ ವ್ಯರ್ಥ ಮಾಡದೆ ತರಭೇತಿ ಪಡೆಯುತ್ತಿದ್ದಾರೆ.
ಬೆವರಿನ ಹನಿಗಳು ನೀರಿನಂತೆ ಹರಿಯುತ್ತಿವೆ. ನಾಲಿಗೆ ಬೇಡುವ ರುಚಿಯಾದ ಆಹಾರವನ್ನೂ ಬಿಟ್ಟು ಫಿಟ್‌ನೆಸ್‌ಗೆ ಏನು ಬೇಕೋ ಅದನ್ನು ಮಾತ್ರ ಸೇವನೆ ಮಾಡುತ್ತಿದ್ದಾರೆ. ಈ ತ್ಯಾಗ ನೀರಜ್‌ಗೆ ಪದಕಗಳ ಮೇಲೆ ಪದಕ ತಂದುಕೊಡುತ್ತಿದೆ.

ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಖ್ಯಾತ ಲಾಂಗ್ ಜಂಪ್ ತಾರೆ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದ್ದಿದ್ದರು. ಆದರೆ ಆ ದಾಖಲೆಯನ್ನು ಕೂಡ ನೀರಜ್ ಬೆಳ್ಳಿ ಗೆದ್ದು ಮೀರಿಸಿದ್ದಾರೆ. ಚಿನ್ನವನ್ನು ಕೆಲ ಮೀಟರ್‌ಗಳ ಅಂತರದಿಂದ ತಪ್ಪಿಸಿಕೊಂಡರೂ ನೀರಜ್ ಸಾಧನೆ ಸಣ್ಣದಲ್ಲ.
ನೀರಜ್ ಚೋಪ್ರಾ ಸಾಧನೆಗಳು
ಟೊಕಿಯೋ ಒಲಿಂಪಿಕ್ಸ್- ಚಿನ್ನ
ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್: ಬೆಳ್ಳಿ
ಏಷ್ಯನ್ ಗೇಮ್ಸ್- ಚಿನ್ನ
ಕಾಮನ್‌ವೆಲ್ತ್ ಗೇಮ್ಸ್- ಚಿನ್ನ
ಅಂಡರ್ 20 World Championship: ಚಿನ್ನ
ಕೇವಲ ಪ್ರದರ್ಶನದಿಂದ ಮಾತ್ರ ಸುದ್ದಿಯಾಗುತ್ತಿರುವ ನೀರಜ್ ಕೆಲ ವರ್ಷಗಳಲ್ಲಿ ಭಾರತದ ನಂಬರ್ ವನ್ ಸ್ಟಾರ್ ಆಗುವ ಸಾಧ್ಯತೆಯಂತೂ ಇದ್ದೇ ಇದೆ. ನೀರಜ್ ಪ್ರದರ್ಶನದಿಂದ ಇಡೀ ಭಾರತ ಹೆಮ್ಮೆ ಪಡುತ್ತಿದೆ. ಪೋಸ್ಟರ್ ಬಾಯ್ ನೀರಜ್ ಭವಿಷ್ಯಕ್ಕೆ ಗುಡ್ ಲಕ್.