ಬರ್ಮಿಂಗ್ಹ್ಯಾಂ (Birmingham) ಕಾಮನ್ವೆಲ್ತ್ ಗೇಮ್ಸ್ (Commonwealth Games) ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ. ಆಗಸ್ಟ್ 28 ರಿಂದ ಆರಂಭವಾಗುವ ಈ ಕ್ರೀಡಾಕೂಟ ಆಗಸ್ಟ್ 8ರ ತನಕ ನಡೆಯಲಿದೆ. 5ನೇ ಬಾರಿಗೆ ಇಂಗ್ಲೆಂಡ್ ಕಾಮನ್ವೆಲ್ತ್ ಗೇಮ್ಸ್ಗೆ ಆತಿಥ್ಯ ನೀಡುತ್ತಿದೆ. ಭಾರತದ (India) ಕ್ರೀಡಾಪಟುಗಳ ಪ್ರದರ್ಶನದ ಬಗ್ಗೆ ಕುತೂಹ ಹೆಚ್ಚಿದೆ. ಹೆಚ್ಚು ಪದಕಗ ನಿರೀಕ್ಷೆ ಇದೆ.
ಕಾಮನ್ವೆಲ್ತ್ ಕ್ರೀಡಾಕೂಡದಲ್ಲಿ ಭಾರತ ಉತ್ತಮ ಸಾಧನೆಯನ್ನೇ ಮಾಡಿದೆ. ಪದಕಗಳನ್ನು(Medal) ಭೇಟೆಯಾಡಿದೆ. ಆದರೆ ಕಾಮನ್ವೆಲ್ತ್ನಲ್ಲಿ ಭಾರತ ಸಾಧಿಸಿದ ಮೊದಲುಗಳ ಬಗ್ಗೆ ಮರೆತು ಹೋಗಿರಬಹುದು. ಹಾಗಾಗಿ ಕಾಮನ್ವೆಲ್ತ್ ಮೊದಲುಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
332: ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಗಳು ಸೇರಿದಂತೆ ಒಟ್ಟು 322 ಸದಸ್ಯರ ಭಾರತೀಯ ತಂಡವು ಭಾಗವಹಿಸಲಿದೆ. ಇದರಲ್ಲಿ 215 ಕ್ರೀಡಾಪಟುಗಳಿದ್ದು, ಇವರು 19 ಕ್ರೀಡೆಗಳ ಮೂಲಕ 141 ವಿವಿಧ ಸ್ಪರ್ಧೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
15: ಕಾಮನ್ವೆಲ್ತ್ ಕ್ರೀಡಾಕೂಟದ ಅತ್ಯಂತ ಯಶಸ್ವಿ ಭಾರತೀಯ ಅಥ್ಲೀಟ್ ಶೂಟರ್ ಜಸ್ಪಾಲ್ ರಾಣಾ. ಜಸ್ಪಾಲ್ ಅವರು ಇದುವರೆಗೆ ಭಾರತಕ್ಕಾಗಿ ಒಟ್ಟು 15 ಪದಕಗಳನ್ನು ಗೆದ್ದಿದ್ದಾರೆ.
1934: ಭಾರತ ಮೊದಲ ಬಾರಿಗೆ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆದ್ದಿತ್ತು. ಕುಸ್ತಿಪಟು ರಶೀದ್ ಅನ್ವರ್ ಮೊದಲ ಪದಕ ವೀರ. ಲಂಡನ್ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ಕಂಚಿನ ಪದಕ ರಶೀದ್ ಗೆದ್ದಿದ್ದರು. ಈ ಕೂಟದಲ್ಲಿ ಭಾರತದ ೬ ಕ್ರೀಡಾಪಟುಗಳು ಮಾತ್ರ ಭಾಗಿಯಾಗಿದ್ದರು. ಅಥ್ಲೆಟಿಕ್ಸ್ ಮತ್ತು ಕುಸ್ತಿ ವಿಭಾಗಗಳಲ್ಲಿ ಮಾತ್ರ ಭಾರತ ಸ್ಪರ್ಧಿಸಿತ್ತು.
1958: ಕಾಮನ್ವೆಲ್ತ್ನಲ್ಲಿ ಭಾರತಕ್ಕೆ ಮೊತ್ತ ಮೊದಲ ಚಿನ್ನದ ಪದಕ. ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಅವರು ಕಾರ್ಡಿಫ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಓಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.
1978: ಕೆನಡಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಅಮಿ ಘಿಯಾ ಮತ್ತು ಕನ್ವಾಲ್ ಥಕರ್ ಸಿಂಗ್ ಜೋಡಿಯು ಬ್ಯಾಡ್ಮಿಂಟನ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿಯರು ಎನಿಸಿಕೊಂಡರು.
2010: ಡಿಸ್ಕಸ್ ಎಸೆತಗಾರ್ತಿ ಕೃಷ್ಣ ಪೂನಿಯಾ ಅವರು ಮಿಲ್ಕಾ ಸಿಂಗ್ ಅವರ ಐತಿಹಾಸಿಕ ಸಾಧನೆಯನ್ನು 52 ವರ್ಷಗಳ ನಂತರ ಸರಿಗಟ್ಟಿದ್ದರು. 2010 ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪೂನಿಯಾ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದರು.
1998: ಶೂಟರ್ ರೂಪಾ ಉನ್ನಿಕೃಷ್ಣನ್ ಅವರು ಕೌಲಾಲಂಪುರದಲ್ಲಿ 1998 ರ ಆವೃತ್ತಿಯ ಕ್ರೀಡಾಕೂಟದಲ್ಲಿ ಮಹಿಳೆಯರ 50 ಮೀಟರ್ ರೈಫಲ್ ಪ್ರೋನ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅಲ್ಲದೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು.
503: ಭಾರತವು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಒಟ್ಟು 503 ಪದಕಗಳನ್ನು ಗೆದ್ದಿದೆ.
1938 & 1954: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಸ್ಪರ್ಧಿಗಳು ಕೇವಲ ಎರಡು ಬಾರಿ ಮಾತ್ರ ಪದಕವಿಲ್ಲದೆ ಮರಳಿದ್ದರು. 1938 (ಸಿಡ್ನಿ) ಮತ್ತು 1954 (ವ್ಯಾಂಕೋವರ್) ರಲ್ಲಿ ಕ್ರೀಡಾಕೂಟದಲ್ಲಿ ಭಾರತೀಯ ಸ್ಪರ್ಧಿಗಳು ಯಾವುದೇ ಪದಕ ಗೆದ್ದಿರಲಿಲ್ಲ.
2010: ದೆಹಲಿ ಕಾಮನ್ವೆಲ್ತ್ ಗೇಮ್ಸ್ನ ಆತಿಥ್ಯ ಹಕ್ಕುಗಳನ್ನು ಪಡೆದುಕೊಂಡಿತ್ತು.
2002: ಮ್ಯಾಂಚೆಸ್ಟರ್ನಲ್ಲಿ ನಡೆದ 2002ರ ಆವೃತ್ತಿಯ ಕ್ರೀಡಾಕೂಟದ ನಂತರ ಭಾರತವು ಪದಕಗಳ ಪಟ್ಟಿಯಲ್ಲಿ ಟಾಪ್-5 ನಲ್ಲಿ ಕಾಣಿಸಿಕೊಳ್ಳುತ್ತಾ ಬಂದಿದೆ.