ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈಗ ಮುಂಬೈ ಇಂಡಿಯನ್ಸ್ ವೇಗಿ ಜಸ್ ಪ್ರಿತ್ ಬುಮ್ರಾ ಬೌಲಿಂಗ್ನದ್ದೇ ಮಾತು. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಬುಮ್ರಾ ವಿಕೆಟ್ ಗಾಗಿ ಪರದಾಡಿದ್ದರು. ಆಡಿದ್ದ 9 ಪಂದ್ಯಗಳಲ್ಲಿ ಕೇವಲ 5 ವಿಕೆಟ್ ಮಾತ್ರ ಪಡೆದಿದ್ದರು. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬುಮ್ರಾ ಬೆಂಕಿಯಾಗಿದ್ದಾರಿ.
ಬೂಮ್ ಬೂಮ್ ಬುಮ್ರಾ ಫಾರ್ಮ್ ಗೆ ಮರಳಿದ್ದು ಮಾತ್ರ ಅಲ್ಲ, ಈ ಬಾರಿಯ ಐಪಿಎಲ್ ನಲ್ಲಿ ದಿ ಬೆಸ್ಟ್ ಬೌಲಿಂಗ್ ಫರ್ಫಾಮೆನ್ಸ್ ನೀಡಿದ್ದಾರೆ. ಬುಮ್ರಾ ಕೆಕೆಆರ್ ವಿರುದ್ಧ 4 ಓವರುಗಳನ್ನು ಎಸೆದು ಕೇವಲ 10 ರನ್ ನೀಡಿದ್ದರು. ಆದರೆ 5 ಪ್ರಮುಖ ವಿಕೆಟ್ ಗಳನ್ನು ಪಡೆದಿದ್ದರು. ಇದು ಈ ಬಾರಿಯ ಐಪಿಎಲ್ನ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ.
ಬುಮ್ರಾ ಸಾಧನೆಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವನಿಂದು ಹಸರಂಗ ಈ ಬಾರಿಯ ಐಪಿಎಲ್ ನ ಬೆಸ್ಟ್ ಫರ್ಫಾಮೆನ್ಸ್ ನೀಡಿದ್ದರು. ಹಸರಂಗ 18 ರನ್ ಗೆ 5 ವಿಕೆಟ್ ಪಡೆದಿದ್ದರು. ಅಚ್ಚರಿ ಅಂದರೆ ಟಾಪ್ 5 ಬೆಸ್ಟ್ ಬೌಲಿಂಗ್ ಫರ್ಫಾಮೆನ್ಸ್ ಲಿಸ್ಟ್ ನಲ್ಲಿ ಮೂವರು ವೇಗಿಗಳು ಸ್ಥಾನ ಪಡೆದುಕೊಂಡಿದ್ದಾರೆ.
ಬೌಲರ್ ಬೆಸ್ಸ್ ಬೌಲಿಂಗ್ ಎದುರಾಳಿ
ಜಸ್ಪ್ರಿತ್ ಬುಮ್ರಾ 10ರನ್ 5 ವಿಕೆಟ್ ಕೊಲ್ಕತ್ತಾ ನೈಟ್ ರೈಡರ್ಸ್
ವನಿಂದು ಹಸರಂಗ 18 ರನ್ 5 ವಿಕೆಟ್ ಸನ್ ರೈಸರ್ಸ್ ಹೈದ್ರಾಬಾದ್
ಉಮ್ರನ್ ಮಲಿಕ್ 25 ರನ್ 5 ವಿಕೆಟ್ ಗುಜರಾತ್ ಲಯನ್ಸ್
ಯಜುವೇಂದ್ರ ಚಹಲ್ 40 ರನ್ 5 ವಿಕೆಟ್ ಕೊಲ್ಕತ್ತಾ ನೈಟ್ ರೈಡರ್ಸ್
ಆ್ಯಂಡ್ರೆ ರಸೆಲ್ 5 ರನ್ 4 ವಿಕೆಟ್ ಗುಜರಾತ್ ಲಯನ್ಸ್