ಟಿ20 ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ನಮಿಬಿಯಾ ಏಷ್ಯಾ ಚಾಂಪಿಯನ್ ಲಂಕಾ ತಂಡವನ್ನು ಬಗ್ಗುಬಡಿದಿದೆ.
ಕಳೆದ ವಿಶ್ವಕಪ್ನಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸಿತ್ತು.
ಕ್ರಿಕೆಟ್ ಶಿಶು ನಮಿಬಿಯಾ ಗೆಲ್ಲಲು ಕಾರಣ ಆಲ್ರೌಂಡರ್ ಜಾನ್ ಫ್ರೈಲಿಂಕ್. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನಮಿಬಿಯಾ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಕಲೆ ಹಾಕಿತು.
ಆರನೆ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಜಾನ್ ಫ್ರೈಲಿಂಕ್ 28 ಎಸೆತದಲ್ಲಿ 4 ಬೌಂಡರಿಯೊಂದಿಗೆ 44 ರನ್ ಚಚ್ಚಿದರು. ಮತ್ತೋರ್ವ ಆಲ್ರೌಂಡರ್ ಜೆಜೆ ಸ್ಮಿತ್ ಕೂಡ 29 ಎಸೆತದಲ್ಲಿ 2 ಬೌಂಡರಿ 2 ಸಿಕ್ಸರ್ ಸಿಡಿಸಿ ಅಜೇಯ 31 ರನ್ ಗಳಿಸಿದರು.
ಇನ್ನು ಬೌಲಿಂಗ್ ನಲ್ಲಿ ಕೂಡ ಧನಂಜಯ ಡಿಸಿಲ್ವಾ ಹಾಗೂ ಲಂಕಾ ನಾಯಕ ದಸಾನು ಶನಕಾ ಪ್ರಮುಖ 2 ವಿಕೆಟ್ ಪಡೆದು ಮಿಂಚು ಹರಿಸಿದರು.
ಜಾನ್ ಫ್ರೈಲಿಂಕ್ 4 ಓವರ್ ಗಳಿಂದ 26 ರನ್ ಕೊಟ್ಟು 2 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಗೆಲುವಿನ ಕುರಿತು ಫ್ರೈಲಿಂಕ್ ಈ ಕ್ಷಣದಲ್ಲಿ ಏನು ಮಾತನಾಡಲು ಆಗುತ್ತಿಲ್ಲ. ನಾವು ಗೆಲ್ಲುತ್ತೇವೆ ಎಂದು ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ.