ಬಾಸ್ ಡಿ ಲೇಡ್ ಅವರ ಅಮೋಘ ಬೌಲಿಂಗ್ ನೆರವಿನಿಂದ ನೆದರ್ಲೆಂಡ್ ತಂಡ ಯುಎಇ ವಿರುದ್ಧ 3 ವಿಕೆಟ್ ಗಳ ರೋಚಕ ಗೆಲುವು ದಾಖಲಿಸಿದೆ.
ಗಿಲಾಂಗ್ನಲ್ಲಿ ನಡೆದ ಟಿ20 ವಿಶ್ವಕಪ್ನ ಎರಡನೆ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿತು. ನೆದರ್ಲೆಂಡ್ 19.5 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 112 ರನ್ ಕಲೆ ಹಾಕಿತು.
ಯುಎಇ ಪರ ಮಹ್ಮದ್ ವಾಸೀಮ್ 41, ಅರವಿಂದ್ 18, ಚಿರಾಗ್ ಸೂರಿ 12, ಕಾಶೀಫ್ 15 ರನ್ ಗಳಿಸಿದರು. ನೆದರ್ಲೆಂಡ್ ಒಂದು ಎಸೆತ ಬಾಕಿ ಇರುವಂತೆ ಗೆಲುವಿನ ದಡ ಸೇರಿತು.
ನೆದರ್ಲೆಂಡ್ ಪರ ಬಾಸ್ ಡಿ ಲೇಡ್ 19ಕ್ಕೆ 3ವಿಕೆಟ್, ಫ್ರೆಡ್ ಕ್ಲಾಸೆನ್ 13ಕ್ಕೆ 2 ವಿಕೆಟ್ ಪಡೆದರು. ಟಿಮ್ ಪ್ರಿಗಲ್ ಹಾಗೂ ವಾನ್ ಡೆರ್ ಮೆರ್ವೆ ತಲಾ 1 ವಿಕೆಟ್ ಪಡೆದರು.
ನೆದರ್ಲೆಂಡ್ ಪರ ಮ್ಯಾಕ್ಸ್ ಒ ದೌದ್ 23, ನಾಯಕ ಸ್ಕಾಟ್ ಎಡ್ವರ್ಡ್ಸ್ 16, ಟಿಮ್ ಪ್ರಿಂಗಲ್ 15 ರನ್ ಕಲೆ ಹಾಕಿದರು.
ಯುಎಇ ಪರ ಜುನೈದ್ ಸಿದ್ದಿಕ್ 24ಕ್ಕೆ 3 ವಿಕೆಟ್ ಪಡೆದರು. 3 ವಿಕೆಟ್ ಪಡೆದ ಬಾಸ್ ಡಿ ಲೇಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.