ಪ್ರೋ ಕಬಡ್ಡಿ ಲೀಗ್ ಹಂತದ ನಾಲ್ಕನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಪಿಂಕ್ ಪ್ಯಾಂಥರ್ಸ್ ತಂಡಗಳು ಕಾದಾಟ ನಡೆಸಲಿದ್ದು, ಉಭಯ ತಂಡಗಳು ಗೆಲುವಿನ ವಿಶ್ವಾಸ ಹೊಂದಿವೆ.
ಈ ಎರಡೂ ತಂಡಗಳು ಈವರೆಗೆ ಆಡಿದ ಏಳು ಪಂದ್ಯಗಳಲ್ಲಿ ಗುಜರಾತ್ ಐದು ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಪಿಂಕ್ ಪ್ಯಾಂರ್ಥಸ್ ಎರಡು ಪಂದ್ಯಗಳನ್ನು ಗೆದ್ದಿದೆ.
ಗುಜರಾತ್ ಜೈಂಟ್ಸ್ ತಂಡ ಪಿಂಕ್ ಪ್ಯಾಂಥರ್ಸ್ಗೆ ಹೋಲಿಸಿದರೆ ಪ್ರಬಲ ತಂಡ. ಏಕೆಂದರೆ ಹಿಂದಿನ ಋತುವಿನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ಹಲವು ಪಂದ್ಯಗಳನ್ನು ಗೆದ್ದಿತ್ತು. ಮತ್ತೊಂದೆಡೆ, ಪಿಂಕ್ ಪ್ಯಾಂಥರ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಉಭಯ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದು ಶುಭಾರಂಭದ ಕನಸು ಹೊಂದಿವೆ.
ತಂಡಗಳು:
ಪಿಂಕ್ ಪ್ಯಾಂಥರ್ಸ್: ಅಜಯ್ ಕುಮಾರ್, ರಾನ್ ಸಿಂಗ್, ಶ್ರೀಕಾಂತ್ ತೇಥಿಯಾ, ಮಹಿಪಾಲ್ ನರ್ವಾಲ್, ಪರ್ವೇಶ್ ಭೈನ್ವಾಲ್, ಜಸ್ವೀರ್ ಸಿಂಗ್, ತುಷಾರ್ ಪಾಟೀಲ್, ಅಮಿತ್ ಹೂಡಾ, ಜವಾಹರ್ ದಾಗರ್, ದೀಪಕ್ ನಿವಾಸ್, ನಿತಿನ್ ರಾವಲ್
ಗುಜರಾತ್ ತಂಡ: ಸಚಿನ್ ತನ್ವಾರ್, ಸಿದ್ಧಾರ್ಥ್ ದೇಸಾಯಿ, ರೋಹಿತ್ ಗುಲಿಯಾ, ವಿಶಾಲ್ ಭಾರದ್ವಾಜ್, ಪರ್ವೇಶ್ ಭೈನ್ವಾಲ್, ಅಂಕಿತ್ ಮತ್ತು ಸುಮಿತ್, ಸುನಿಲ್ ಕುಮಾರ್, ಅಬೋಲ್ಫಜಲ್ ಮಾಗ್ಸೋಡ್ಲೌ ಮಹಲ್ಲಿ, ವಿನೋದ್ ಕುಮಾರ್, ಲಲಿತ್ ಚೌಧರಿ