ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಪಡೆಯುವುದು ಸುಲಭದ ಮಾತಲ್ಲ. ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಪಡೆದ ಬೌಲರ್ಗಳು ಪಟ್ಟಿಯಲ್ಲಿರುವುದು ಮೂರೇ ಮೂರು ಬೌಲರ್ಗಳು. ಜಿಮ್ ಲೇಕರ್ ಮೊದಲಿಗರಾದರೆ, ಅನಿಲ್ ಕುಂಬ್ಳೆ ಎರಡನೇಯವರು. ಮುಂಬೈ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ನ ಅಜಾಝ್ ಪಟೇಲ್ ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಪಡೆದು ಮೂರನೇಯವರಾಗಿ ದಾಖಲೆ ಪುಟ ಸೇರಿಕೊಂಡರು.
ಕ್ರಿಕೆಟ್ನಲ್ಲಿ ಅಪರೂಪದ ದಾಖಲೆ ಬರೆದ ಅಜಾಝ್ ಪಟೇಲ್ ಈಗ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿಲ್ಲ. ಇದು ನಂಬಲು ಸಾಧ್ಯವಾಗದೇ ಇದ್ದರೂ ನಂಬಲೇಬೇಕು. ಎಡಗೈ ಸ್ಪಿನ್ನರ್ ಪಟೇಲರ್ ರನ್ನು ನ್ಯೂಜಿಲೆಂಡ್ ಏಕಾಏಕಿ ತಂಡದಿಂದ ಹೊರಗಿಟ್ಟಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಕಿವೀಸ್ ಕ್ರಿಕೆಟ್ ಮಂಡಳಿ ಅಜಾಜ್ ಪಟೇರ್ನಲ್ಲಿ ಕಡೆಗಣಿಸಿದೆ.
ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡ ಪ್ರಕಟಗೊಂಡಿದ್ದು ಆಯ್ಕೆ ಸಮಿತಿ 13 ಆಟಗಾರರ ತಂಡವನ್ನು ಪ್ರಕಟಿಸಲಾಗಿದೆ. ಅಚ್ಚರಿಯೆಂದರೆ ಈ ಬಳಗದಲ್ಲಿ ಅಜಾಜ್ ಹೆಸರೇ ಇಲ್ಲ. ಐತಿಹಾಸಿಕ ಸಾಧನೆ ಮಾಡಿದ ಹೊರತಾಗಿಯೂ ಅಜಾರ್ರನ್ನು ತಂಡದಿಂದಲೇ ಕೈಬಿಟ್ಟಿದ್ದು ಅಚ್ಚರಿ ಮೂಡಿಸಿದೆ. ಭಾರತ ಮೂಲದ ಮತ್ತೊಬ್ಬ ಆಟಗಾರ ರಚಿನ್ ರವೀಂದ್ರ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಮೇಲ್ನೋಟಕ್ಕೆ ನ್ಯೂಜಿಲೆಂಡ್ ವೇಗಿಗಳಿಗೆ ಹೆಚ್ಚು ಒತ್ತು ನೀಡದಂತೆ ಕಾಣುತ್ತಿದೆ. ಟ್ರೆಂಟ್ ಬೌಲ್ಟ್, ನೈಲ್ ವಾಗ್ನರ್, ಟಿಮ್ ಸೌಥೀ, ಖೈಲ್ ಜೆಮಿಸನ್ ಮತ್ತು ಮ್ಯಾಟ್ ಹೆನ್ರಿ ಹೀಗೆ 5 ವೇಗಿಗಳನ್ನು ಆಯ್ಕೆ ಮಾಡಿದೆ. ಕೇನ್ ವಿಲಿಯಮ್ಸನ್ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಂಜುರಿಗೆ ತುತ್ತಾಗಿದ್ದರು. ಅವರು ಇನ್ನೂ ಗಾಯದಿಂದ ಗುಣಮುಖರಾಗದ ಕಾರಣ ಸಂಪೂರ್ಣ ಸರಣಿಗೆ ಟಾಮ್ ಲಾಥಮ್ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ.
ನ್ಯೂಜಿಲೆಂಡ್ ತಂಡ: ಟಾಮ್ ಲಾಥಮ್ (ನಾಯಕ), ಡೆವೊನ್ ಕಾನ್ವೇ, ವಿಲ್ ಯಂಗ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಡ್ಯಾರಲ್ ಮಿಚೆಲ್, ಟಾಮ್ ಬ್ಲಂಡೆಲ್, ರಚಿನ್ ರವೀಂದ್ರ, ಖೈಲ್ ಜೆಮಿಸನ್, ಮ್ಯಾಟ್ ಹೆನ್ರಿ, ಟಿಮ್ ಸೌಥೀ, ನೈಲ್ ವಾಗ್ನರ್, ಟ್ರೆಂಟ್ ಬೌಲ್ಟ್.