ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಯ ಪಂದ್ಯಗಳು ಎಲ್ಲಿ ನಡೆಯುತ್ತವೆ ಅನ್ನುವ ಬಗ್ಗೆ ಚರ್ಚೆಗಳು ಶುರುವಾಗಿದ್ದವು. 10 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುವುದರಿಂದ ಬಿಸಿಸಿಐಗೆ ಬಯೋಬಬಲ್ ಫಿಕ್ಸ್ ಮಾಡುವುದು ತಲೆ ನೋವಾಗಿತ್ತು. ಇದಕ್ಕೆ ಪರಿಹಾರವನ್ನು ಬಿಸಿಸಿಐ ಕಂಡುಕೊಂಡಿದೆ. ಕೇವಲ 3 ಕ್ರೀಡಾಂಗಣದಲ್ಲಿ ಲೀಗ್ ಪಂದ್ಯಗಳನ್ನು ಆಯೋಜಿಸಲು ಪ್ಲಾನ್ ಮಾಡಿದೆ.
ಕೊರೋನಾ ಭೀತಿ ಹಿನ್ನೆಲೆಯಲ್ಲಿ 10 ಸ್ಟೇಡಿಯಂಗಳಲ್ಲಿ ಪಂದ್ಯವನ್ನು ಆಯೋಜಿಸುವುದು ಸುಲಭವಲ್ಲ. ಹೀಗಾಗಿ ಒಂದೇ ರಾಜ್ಯದ 3 ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವ ಸಾಧ್ಯತೆ ಇದೆ. ಮಹಾರಾಷ್ಟ್ರದ ಡಿವೈ ಪಾಟೀಲ್ ಸ್ಟೇಡಿಯಂ, ವಾಂಖೆಡೆ ಸ್ಟೇಡಿಯಂ ಹಾಗೂ ಬ್ರಬೋರ್ನ್ ಸ್ಟೇಡಿಯಂ ನಲ್ಲಿ ಇಡೀ ಟೂರ್ನಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಇದಲ್ಲದೆ ಹೆಚ್ಚುವರಿಯಾಗಿ ರಿಲಯನ್ಸ್ ಸ್ಟೇಡಿಯಂ ಅನ್ನು ಕೂಡ ಬಳಸಿಕೊಳ್ಳುವ ಬಗ್ಗೆ ಯೋಜನೆಗಳಿವೆ.
ಮಾರ್ಚ್ 26 ರಿಂದ ಟೂರ್ನಿಗೆ ಚಾಲನೆ ಸಿಗಬಹುದು. ಈ ಮೂರು ಸ್ಟೇಡಿಯಂನಲ್ಲಿ ಬಯೋ ಬಬಲ್ ವ್ಯವಸ್ಥೆಯೊಂದಿಗೆ ಲೀಗ್ ಹಂತದ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಈ ಬಾರಿಯ ಐಪಿಎಲ್ನಲ್ಲಿ ಒಟ್ಟು 74 ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಲೀಗ್ ಪಂದ್ಯಗಳ ಬಳಿಕ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ಲೇ ಆಫ್ ಹಾಗೂ ಫೈನಲ್ ಪಂದ್ಯ ನಡೆಯುವ ಸಾಧ್ಯತೆ ಇದೆ.