ವೆಸ್ಟ್ಇಂಡೀಸ್ ವಿರುದ್ಧದ T20 ಸರಣಿ ಈಗಷ್ಟೇ ಮುಗಿದಿದೆ. ಅದರ ಬೆನ್ನಲ್ಲೇ ಈಗ ಶ್ರೀಲಂಕಾ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಸಿದ್ಧವಾಗಬೇಕಿದೆ. ಕೇವಲ ನಾಲ್ಕೇ ದಿನದ ಗ್ಯಾಪ್ನಲ್ಲಿ ಎರಡು ಸರಣಿಗಳನ್ನು ಆಡಬೇಕಾಗಿದೆ ಟೀಮ್ ಇಂಡಿಯಾ. ಭಾರತೀಯ ಕ್ರಿಕೆಟಿಗರ ಬ್ಯುಸಿ ಶೆಡ್ಯೂಲ್ ಈಗ ಚರ್ಚೆಗೂ ಕಾರಣವಾಗಿದೆ.
ಲಂಕಾ ವಿರುದ್ಧ ಶೆಡ್ಯೂಲ್
ಶ್ರೀಲಂಕಾ ವಿರುದ್ಧ 3 ಟಿ20 ಪಂದ್ಯ ಮತ್ತು2 ಟೆಸ್ಟ್ ಪಂದ್ಯಗಳ ಸರಣಿಯನ್ನು ಟೀಮ್ ಇಂಡಿಯಾ ಆಡಲಿದೆ. ಮೊದಲನೇ ಟಿ20 ಪಂದ್ಯ ಫೆಬ್ರವರಿ 24ರಂದು ಲಕ್ನೋದಲ್ಲಿ ನಡೆಯಲಿದೆ. ದ್ವಿತೀಯ ಟಿ20 ಫೆಬ್ರವರಿ 26ರಂದು ಧರ್ಮಶಾಲಾದಲ್ಲಿ ಮತ್ತು ಅಂತಿಮ ಮೂರನೇ ಟಿ20 ಪಂದ್ಯ ಫೆಬ್ರವರಿ 27ರಂದು ಧರ್ಮಶಾಲಾದಲ್ಲೇ ನಡೆಯಲಿದೆ.
ಮೊದಲ ಟೆಸ್ಟ್ ಪಂದ್ಯ ಮೊಹಾಲಿಯಲ್ಲಿ ಮಾರ್ಚ್ 4ಕ್ಕೆ ಶುರುವಾಗಲಿದೆ. ಎರಡನೇಯದು ಡೇ ನೈಟ್ ಟೆಸ್ಟ್ ಪಂದ್ಯವಾಗಿದ್ದು, ಮಾರ್ಚ್ 12 ರಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಟೀಮ್ ಇಂಡಿಯಾ ಆಟಗಾರರಿಗೆ ಇದು ಸವಾಲಾಲಿದೆ.
ಟೀಮ್ ಇಂಡಿಯಾದ ಫಿಟ್ನೆಸ್ ಪರೀಕ್ಷೆ
ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟಿಗರು ಗಾಯಗೊಂಡಿದ್ದಾರೆ. ದೀಪಕ್ ಚಹರ್ ಹ್ಯಾಮ್ ಸ್ಟ್ರಿಂಗ್ಗೆ ಒಳಗಾಗಿದ್ದಾರೆ. ಕೆ.ಎಲ್. ರಾಹುಲ್ ಕೂಡ ಫಿಟ್ ಆಗಿಲ್ಲ. ಯುವ ಕ್ರಿಕೆಟಿಗರು ಜಾಗ ಗಟ್ಟಿಮಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಬೆನ್ನುಬೆನ್ನಿಗೆ ಪಂದ್ಯ ನಡೆಯುತ್ತಿರುವುದು ರೋಹಿತ್ ಬಳಗಕ್ಕೆ ಫಿಟ್ನೆಸ್ ಪರೀಕ್ಷೆ ಮಾಡಲಿದೆ.