ಐಪಿಎಲ್ ಭಾರತದಲ್ಲಿ ನಡೆಯುತ್ತಾ ಇಲ್ವಾ ಅನ್ನುವ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿತ್ತು. ಆದರೆ ಈಗ ಬಿಸಿಸಿಐ ಎಲ್ಲದಕ್ಕೂ ಸ್ಪಷ್ಟನೆ ನೀಡಿದೆ. 15ನೇ ಆವೃತ್ತಿಯ ಎಲ್ಲಾ ಪಂದ್ಯಗಳು ಭಾರತದಲ್ಲಿ ನಡೆಯುವುದು ಪಕ್ಕಾ ಆಗಿದೆ. ಆದರೆ ಪ್ರೇಕ್ಷಕರಿಗೆ ಮಾತ್ರ ಮೈದಾನದಲ್ಲಿ ಪಂದ್ಯ ನೋಡುವ ಅವಕಾಶವನ್ನು ಬಿಸಿಸಿಐ ಒದಗಿಸಿಲ್ಲ. ಒಂದುವೇಳೆ ಪರಿಸ್ಥಿತಿ ಹದಗೆಟ್ಟರೆ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ದಕ್ಷಿಣ ಆಫ್ರಿಕಾವನ್ನು ಸಹ ಆಯ್ಕೆಗಳಾಗಿ ಇರಿಸಲಾಗಿದೆ.
ಮುಂಬೈನ 3 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ವಾಂಖೆಡೆ, ಡಿ.ವೈ ಪಾಟೀಲ್ ಅಕಾಡೆಮಿ ಮತ್ತು ಬ್ರೆಬೊರ್ನ್ ಮೈದಾನ ಈ ಬಾರಿಯ ಟೂರ್ನಿಗೆ ಆತಿಥ್ಯ ನೀಡಲಿದೆ. ಒಂದು ವೇಳೆ ಅಗತ್ಯಬಿದ್ದರೆ, ಪುಣೆಯಲ್ಲೂ ಪಂದ್ಯ ಆಯೋಜಿಸುವ ಸಾಧ್ಯತೆ ಇದೆ.
ಫೆಬ್ರವರಿ 12 ಮತ್ತು 13 ರಂದು ಮಾತ್ರ ಮೆಗಾ ಹರಾಜು ನಡೆಯಲಿದೆ ಬೆಂಗಳೂರಿನಲ್ಲೇ ಹರಾಜು ನಡೆಯಲಿದೆ. ಈ ಬಾರಿ 1214 ಆಟಗಾರರು ಲೀಗ್‌ನಲ್ಲಿ ಹರಾಜಿಗೆ ನೋಂದಾಯಿಸಿಕೊಂಡಿದ್ದಾರೆ, ಇದರಲ್ಲಿ 896 ಭಾರತೀಯ ಮತ್ತು 318 ವಿದೇಶಿ ಆಟಗಾರರು ಸೇರಿಕೊಂಡಿದ್ದಾರೆ. ಒಟ್ಟಿನಲ್ಲಿ ಕೊರೊನಾ ನಡುವೆ ಐಪಿಎಲ್ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿದೆ.