ಐಪಿಎಲ್ನಲ್ಲಿ ಬೌಂಡರಿ, ಸಿಕ್ಸರ್ಗಳ ಲೆಕ್ಕಾಚಾರ ಜೋರಾಗಿದೆ. ಐಪಿಎಲ್ ಪಂದ್ಯ ನಡೆಯುತ್ತಿರುವ 4 ಮೈದಾನಗಳ ಉದ್ದಗಲ ಎಷ್ಟು ಅನ್ನುವುದು ಪ್ರತೀ ತಂಡಕ್ಕೂ ಅರಿವಾಗಿದೆ. ಯಾವ ಗ್ರೌಂಡ್ನಲ್ಲಿ ಯಾವ ಬೌಲರ್ ಅನ್ನ ಟಾರ್ಗೆಟ್ ಮಾಡಬಹದು ಅನ್ನುವುದನ್ನು ಬ್ಯಾಟ್ಸ್ಮನ್ಗಳ ಲೆಕ್ಕಹಾಕಿದ್ದಾರೆ. ಯಾವ ಟೈಮ್ನಲ್ಲಿ ಯಾವ ಬೌಲರ್ ವಿಕೆಟ್ ತಂದುಕೊಡಬಲ್ಲರು ಅನ್ನುವ ಪ್ಲಾನ್ ಕೂಡ ನಾಯಕರಲ್ಲಿದೆ. ಆದರೆ ಬ್ರೊಬೋರ್ನ್ ಮತ್ತು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನ ಬ್ಯಾಟ್ಸ್ಮನ್ಗಳ ಸ್ವರ್ಗವಾಗಿದ್ದರೆ, ಡಿ.ವೈ. ಪಾಟೀಲ್ ಕ್ರೀಡಾಂಗಣ ಬ್ಯಾಟ್ಸ್ಮನ್ ಮತ್ತು ಬೌಲರ್ಗಳಿಗೆ ಸಮಾನಾದ ವೇದಿಕೆ ಒದಗಿಸಿದೆ. ಆದರೆ ವಾಂಖೆಡೆ ಕ್ರೀಡಾಂಗಣದಲ್ಲಿ ಮಾತ್ರ ಬೌಲರ್ಗಳು ಮ್ಯಾಚ್ ವಿನ್ನರ್ಗಳಾಗಿದ್ದಾರೆ.
ಬ್ರೆಬೊರ್ನ್ : 03 ಪಂದ್ಯ
46 ಸಿಕ್ಸರ್, 101 ಫೋರ್..!
ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಮೈದಾನ ಬ್ರೆಬೋರ್ನ್ನಲ್ಲಿ ಬ್ಯಾಟ್ಸ್ಮನ್ಗಳದ್ದೇ ಆಟ. ಇಲ್ಲಿ ಆಡಿರುವ 3 ಪಂದ್ಯಗಳ 4 ಇನ್ನಿಂಗ್ಸ್ಗಳಲ್ಲೂ 200ರ ಗಡಿ ದಾಟಿದೆ. ಮೂರೇ ಮೂರು ಪಂದ್ಯಗಳಲ್ಲಿ ಬರೋಬ್ಬರಿ 46 ಸಿಕ್ಸರ್ ಮತ್ತು 101 ಫೋರ್ಗಳು ಸಿಡಿದಿವೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶ್ ಗ್ರೌಂಡ್: 02 ಪಂದ್ಯ
28 ಸಿಕ್ಸರ್, 59 ಫೋರ್..!
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಗ್ರೌಂಡ್ನಲ್ಲೂ ಬ್ಯಾಟ್ಸ್ಮನ್ಗಳದ್ದೇ ಆಟ. ಇಲ್ಲಿ 28 ಸಿಕ್ಸರ್ಗಳು ಮತ್ತು 59 ಫೋರ್ಗಳು ಸಿಡಿದಿವೆ.
ಡಿ.ವೈ. ಪಾಟೀಲ್: 03 ಪಂದ್ಯ
58 ಸಿಕ್ಸರ್, 72 ಫೋರ್..!
ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲೂ ರನ್ ಮಳೆಗೇನು ಕಡಿಮೆ ಇಲ್ಲ. ಆದರೆ ಇಲ್ಲಿ 3 ಪಂದ್ಯಗಳು ನಡೆದಿವೆ. 58 ಸಿಕ್ಸರ್ ಮತ್ತು 72 ಫೋರ್ಗಳು ಸಿಡಿದಿವೆ.
ವಾಂಖೆಡೆ: 03 ಪಂದ್ಯ
35 ಸಿಕ್ಸರ್, 72 ಫೋರ್.!
ಬೌಲರ್ಗಳಿಗೆ ಬ್ಯಾಟ್ಸ್ಮನ್ಗಳು ಮರ್ಯಾದೆ ಕೊಟ್ಟಿದ್ದು ವಾಂಖೆಡೆಯಲ್ಲಿ ಮಾತ್ರ. ಇಲ್ಲಿ ಆಡಿರುವ 3 ಪಂದ್ಯಗಳಲ್ಲಿ ಸಿಡಿದಿರುವುದು ಕೇವಲ 35 ಸಿಕ್ಸರ್ ಮತ್ತು 72 ಫೋರ್ಗಳು ಮಾತ್ರ.
ಆಡಿರುವ 11 ಪಂದ್ಯಗಳಲ್ಲೇ 167 ಸಿಕ್ಸರ್ಗಳು ಸಿಡಿದಿವೆ. 304 ಫೋರ್ಗಳು ಬ್ಯಾಟ್ಸ್ಮನ್ಗಳ ಹೆಸರಿನ ಮುಂದೆ ದಾಖಲಾಗಿದೆ. ಸದ್ಯದ ಲೆಕ್ಕಾಚಾರದಂತೆ ಪಂದ್ಯವೊಂದಕ್ಕೆ ಸರಾಸರಿ 15 ಸಿಕ್ಸರ್ಗಳು ಮತ್ತು 28 ಫೋರ್ಗಳು ದಾಖಲಾಗಿವೆ. ಒಟ್ಟಿನಲ್ಲಿ ಐಪಿಎಲ್ನಲ್ಲಿ ಫೋರ್, ಸಿಕ್ಸ್ನದ್ದೇ ಮಾತು ಜೋರಾಗಿದೆ.