ಐಪಿಎಲ್ 15ನೇ ಆವೃತ್ತಿಯಲ್ಲಿ ಎಲ್ಲಾ ಲೆಕ್ಕಾಚಾರಗಳು ಪಂದ್ಯದಿಂದ ಪಂದ್ಯಕ್ಕೆ ಬದಲಾಗುತ್ತಿದೆ. ಗೆಲುವು, ಸೋಲು ಎಲ್ಲಾ ತಂಡಗಳಿಗೂ ಮಾಮೂಲಿಯಾಗಿವೆ. ಈ ಮಧ್ಯೆ ಚೆನ್ನೈ, ಮುಂಬೈ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ಗೆಲುವಿನ ಮುಖವನ್ನೇ ಕಂಡಿಲ್ಲ. 2 ದಿನಕ್ಕೆ ಮೊದಲು ಅಗ್ರಸ್ಥಾನದಲ್ಲಿ ತಂಡ ಈಗ 4ನೇ ಸ್ಥಾನಕ್ಕೆ ಇಳಿದಿದೆ. ಪಂದ್ಯವೇ ಆಡದೆ ಆರ್ ಸಿಬಿ 5ನೇ ಸ್ಥಾನಕ್ಕೆ ಜಿಗಿದಿದೆ.
ಟಾಪ್ 5 ತಂಡಗಳು
ತಂಡ ಪಂದ್ಯ ಗೆಲುವು ಅಂಕ ರನ್ರೇಟ್
ಕೆಕೆಆರ್ 04 03 06 +1.102
ಜಿ.ಟಿ 03 03 06 +0.349
ಲಖನೌ 04 03 06 +0.256
ಆರ್.ಆರ್ 03 02 04 +1.218
ಆರ್ಸಿಬಿ 03 02 04 +0.159
ಗೆಲುವಿನ ಓಟ ಮುಂದುವರೆಸುತ್ತಿರುವ ಕೊಲ್ಕತ್ತಾ ನೈಟ್ ರೈಡರ್ಸ್ 4 ಪಂದ್ಯಗಳಿಂದ 6 ಅಂಕ ಕಲೆಹಾಕಿದೆ. ಗುಜರಾತ್ ಲಯನ್ಸ್ ಸೋಲೇ ಇಲ್ಲದ ಏಕೈಕ ತಂಡವಾಗಿ ಆಡಿರುವ ಮೂರೂ ಪಂದ್ಯಗಳನ್ನು ಗೆದ್ದಿದೆ. ಲಖನೌ ಬಳಿ ಕೂಡ 6 ಅಂಕಗಳಿದ್ದೂ ರನ್ರೇಟ್ ಕೊಂಚ ಕಡಿಮೆ ಇದೆ. ರಾಜಸ್ಥಾನ ರಾಯಲ್ಸ್ 3 ಪಂದ್ಯಗಳಿಂದ 2 ಮಾತ್ರ ಗೆದ್ದಿದೆ. ಆರ್ ಸಿಬಿ 5ನೇ ಸ್ಥಾನದಲ್ಲಿದೆ.
ಲಾಸ್ಟ್ 5 ತಂಡಗಳು
ಪಂಜಾಬ್ 04 02 04 -0.159
ಡಿ.ಸಿ. 03 01 02 -0.116
ಸಿಎಸ್ಕೆ 03 00 00 -1.251
ಮುಂಬೈ 03 00 00 -1.362
ಹೈದ್ರಾಬಾದ್ 02 00 00 -1.825
ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೋಲಿನಿಂದ ಅಂಕದ ಜೊತೆಗೆ ರನ್ ರೇಟ್ ಕೂಡ ಕಳೆದುಕೊಂಡಿವೆ. ಚೆನ್ನೈ ಸೂಪರ್ ಕಿಂಗಸ್, ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ಗೆಲುವಿನ ಮುಖವನ್ನೇ ಕಂಡಿಲ್ಲ.
ವೀಕೆಂಡ್ನಲ್ಲಿ ಐಪಿಎಲ್ ಫೈಟ್ ಸಖತ್ ಕುತೂಹಲ ಕೆರಳಿಸಿದೆ. 8 ತಂಡಗಳು ಶನಿವಾರ ಮತ್ತು ಭಾನುವಾರ ಅಖಾಡಕ್ಕೆ ಇಳಿಯುವುದರಿಂದ ಮ್ಯಾಚ್ ಸಖತ್ ಕುತೂಹಲ ಕೆರಳಿಸಿದೆ. ಪಾಯಿಂಟ್ ಟೇಬಲ್ನಲ್ಲೂ ಬದಲಾವಣೆ ಗ್ಯಾರೆಂಟಿ.