IPL 2022-RCB vs MI Head-to-Head Records- – ಮುಂಬೈ ಇಂಡಿಯನ್ಸ್ – ಆರ್ ಸಿಬಿ ಅಂಕಿ ಅಂಶಗಳಲ್ಲಿ ಯಾರು ಪ್ರಬಲ..?
![IPL 2022-RCB vs MI Head-to-Head Records- - ಮುಂಬೈ ಇಂಡಿಯನ್ಸ್ - ಆರ್ ಸಿಬಿ ಅಂಕಿ ಅಂಶಗಳಲ್ಲಿ ಯಾರು ಪ್ರಬಲ..? 2 rcb Faf du Plessis mumbai indians ipl 2022 rohit sharma sportskarnataka](http://sportskarnataka.com/wp-content/uploads/2022/04/rcb-vs-mi1.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್. ಐಪಿಎಲ್ ಟೂರ್ನಿಯ ಹೈಫೈ ತಂಡಗಳು.
ಕಾರಣ ಇಷ್ಟೇ.. ರಾಯಲ್ ಚಾಲೆಂಜರ್ಸ್ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ಸ್ಟಾರ್ ಪ್ಕೇಯರ್ಸ್. ಅಷ್ಟೇ ಅಲ್ಲ, ಎರಡು ಫ್ರಾಂಚೈಸಿಗಳ ಮಾಲೀಕರಿಂದಲೂ ಫೇಮಸ್ ಆಗಿವೆ.
ಅಂದ ಹಾಗೇ, ಮುಂಬೈ ಇಂಡಿಯನ್ಸ್ ಮತ್ತು ಆರ್ ಸಿಬಿ ನಡುವಿನ ಹೋರಾಟ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮತ್ತು ರೋಚಕತೆಯನ್ನು ಉಂಟು ಮಾಡುತ್ತಿವೆ.
ಸ್ಟಾರ್ ಆಟಗಾರರನ್ನು ಒಳಗೊಂಡಿರುವ ಉಭಯ ತಂಡಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶ್ರೇಷ್ಠ ಆಟಗಾರರು ಇದ್ದಾರೆ. ಹೀಗಾಗಿ ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಹಣಾಹಣಿಯನ್ನು ಹೈವೋಲ್ಟೇಜ್ ಪಂದ್ಯ ಅಂತನೇ ಕರೆಯಲಾಗುತ್ತಿದೆ.
ಕಳೆದ 14 ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಒಟ್ಟು 31 ಬಾರಿ ಮುಖಾಮುಖಿಯಾಗಿವೆ.
ಇದರಲ್ಲಿ 12 ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ನಗೆ ಬೀರಿದ್ರೆ, 19 ಬಾರಿ ಮುಂಬೈ ಇಂಡಿಯನ್ಸ್ ಜಯ ಸಾಧಿಸಿದೆ.
ಆದ್ರೆ ಕಳೆದ ಐದು ಪಂದ್ಯಗಳ ಅಂಕಿ ಅಂಶಗಳನ್ನು ನೋಡಿದಾಗ ಆರ್ ಸಿಬಿ ಮೇಲುಗೈ ಸಾಧಿಸಿದೆ. ಮೂರು ಪಂದ್ಯಗಳಲ್ಲಿ ಆರ್ ಸಿಬಿ ಜಯ ಸಾಧಿಸಿದ್ರೆ, ಮುಂಬೈ ಇಂಡಿಯನ್ಸ್ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. IPL 2022-RCB vs MI Head-to-Head Records
![IPL 2022-RCB vs MI Head-to-Head Records- - ಮುಂಬೈ ಇಂಡಿಯನ್ಸ್ - ಆರ್ ಸಿಬಿ ಅಂಕಿ ಅಂಶಗಳಲ್ಲಿ ಯಾರು ಪ್ರಬಲ..? 4 rcb mumbai indians ipl 2022 sportskarnataka](http://sportskarnataka.com/wp-content/uploads/2022/04/rcb-vs-m1-55.jpg)
ಅಷ್ಟೇ ಅಲ್ಲ, 2021ರ ಐಪಿಎಲ್ ನ ಎರಡು ಪಂದ್ಯಗಳಲ್ಲೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಂಬೈ ಇಂಡಿಯನ್ಸ್ ತಲೆಬಾಗಿದೆ. ಹೀಗಾಗಿ ಆರ್ ಸಿಬಿ ಇದೀಗ ಹ್ಯಾಟ್ರಿಕ್ ಗೆಲುವನ್ನು ಎದುರು ನೋಡುತ್ತಿದೆ.
ಇನ್ನು ಮೊದಲು ಬ್ಯಾಟಿಂಗ್ ಮಾಡಿದ್ದ ಆರು ಪಂದ್ಯಗಳನ್ನು ಆರ್ ಸಿಬಿ ಗೆದ್ರೆ, 10 ಪಂದ್ಯಗಳನ್ನು ಮುಂಬೈ ಇಂಡಿಯನ್ಸ್ ಗೆದ್ದಿದೆ. ಹಾಗೇ ಚೇಸಿಂಗ್ ನಲ್ಲಿ ಆರ್ ಸಿಬಿ ಆರು ಬಾರಿ ಜಯ ಸಾಧಿಸಿದ್ರೆ, ಮುಂಬೈ ಇಂಡಿಯನ್ಸ್ 9 ಬಾರಿ ಗೆಲುವು ಸಾಧಿಸಿದೆ.
ಮುಂಬೈ ತಂಡದ ಪ್ರಮುಖ ಆಟಗಾರ ಇಶಾನ್ ಕಿಶಾನ್ ಅವರು ವೈಯಕ್ತಿಕವಾಗಿ ಗರಿಷ್ಠ 99 ರನ್ ದಾಖಲಿಸಿದ್ದಾರೆ. ಆರ್ ಸಿಬಿ ತಂಡದ ವಿರಾಟ್ ಕೊಹ್ಲಿ 779 ರನ್ ಕಲೆ ಹಾಕಿದ್ದಾರೆ. ಹಾಗೇ ಆರ್ ಸಿಬಿಯ ಹರ್ಷೆಲ್ ಪಟೇಲ್ 27ಕ್ಕೆ 5 ವಿಕೆಟ್ ಉರುಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಕಿರಾನ್ ಪೊಲಾರ್ಡ್ ಅವರು ಆರ್ ಸಿಬಿಯ ವಿರುದ್ದ 553 ರನ್ ಗಳಿಸಿದ್ರೆ, ಜಸ್ಪ್ರಿತ್ ಬೂಮ್ರಾ 24 ವಿಕೆಟ್ ಗಳನ್ನು ಉರುಳಿಸಿದ್ದಾರೆ.
ಒಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಹಿಂದಿನ ಒಟ್ಟಾರೆ ಅಂಕಿ ಅಂಶಗಳಲ್ಲಿ ಮುಂಬೈ ಇಂಡಿಯನ್ಸ್ ಮೇಲುಗೈ ಸಾಧಿಸಿದೆ. ಆದ್ರೆ ಲೆಟೆಸ್ಟ್ ಅಂಕಿ ಅಂಶಗಳಲ್ಲಿ ಆರ್ ಸಿಬಿ ಪ್ರಾಬಲ್ಯ ಸಾಧಿಸಿದೆ.
ಒಟ್ಟಾರೆ, ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಳ್ಳಲು ರೋಹಿತ್ ಬಳಗ ಹೋರಾಟ ನಡೆಸಿದ್ರೆ, ಆರ್ ಸಿಬಿ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದೆ.