ipl mega auction ಇಂಡಿಯನ್ ಪ್ರೀಮಿಯರ್ ಲೀಗ್ನ ಆಟಗಾರರ ಮೆಗಾ ಹರಾಜಿಗೆ ಎಲ್ಲಾ ತಯಾರಿಗಳು ನಡೆಯುತ್ತಿವೆ. ಈ ಮಧ್ಯೆ ಈ ಬಾರಿಯ ಆಟಗಾರರ ಮೆಗಾ ಹರಾಜು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. 10 ಫ್ರಾಂಚೈಸಿಗಳು ಕೇವಲ 217 ಆಟಗಾರರನ್ನು ಖರೀದಿ ಮಾಡಬೇಕಿದ್ದರೂ ಒಟ್ಟು 1214 ಆಟಗಾರರು ಹರಾಜಿನಲ್ಲಿ ಹೆಸರು ನೋಂದಾಯಿಸಿದ್ದಾರೆ.
ಒಟ್ಟು 19 ದೇಶಗಳ ಆಟಗಾರರು ಈ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪಾಕಿಸ್ತಾನದ ಆಟಗಾರರನ್ನು ಹೊರತು ಪಡಿಸಿ ಕ್ರಿಕೆಟ್ ಆಡುವ ಬಹುತೇಕ ರಾಷ್ಟ್ರಗಳ ಹೆಸರು ಈ ಬಾರಿಯ ಹರಾಜಿನಲ್ಲಿದೆ. ಭೂತಾನ್ ಆಟಗಾರ ಕೂಡ ಈ ಬಾರಿಯ ಹರಾಜಿನಲ್ಲಿ ಕಾಣಿಸಿಕೊಂಡಿರುವುದು ವಿಶೇಷ
ಅಮೆರಿಕಾ, ಯುಎಇ ಸೇರಿದಂತೆ ಹಲವು ಕ್ರಿಕೆಟ್ ಮಂಡಳಿಗಳು ತಮ್ಮ ಆಟಗಾರರ ಹೆಸರು ಬಿಸಿಸಿಐಗೆ ಕಳುಹಿಸಿವೆ. ಹೀಗಾಗಿ ಈ ಬಾರಿಯ ಮೆಗಾ ಹರಾಜು ಭಾರೀ ಕುತೂಲ ಕೆರಳಿಸಿದೆ.
ದೇಶ ಆಟಗಾರರ ಸಂಖ್ಯೆ
-
-
ಭಾರತ- 896
-
ಆಸ್ಟ್ರೇಲಿಯಾ 59
-
ದಕ್ಷಿಣ ಆಫ್ರಿಕಾ 48
-
ವೆಸ್ಟ್ ಇಂಡೀಸ್ 41
-
ಶ್ರೀಲಂಕಾ 36
-
ಇಂಗ್ಲೆಂಡ್ 30
-
ನ್ಯೂಜಿಲೆಂಡ್ 29
-
ಅಫ್ಘಾನಿಸ್ತಾನ 20
-
ನೇಪಾಳ 15
-
ಯುಎಸ್ಎ 14
-
ಬಾಂಗ್ಲಾದೇಶ 09
-
ನಮೀಬಿಯಾ 05
-
ಐರ್ಲೆಂಡ್ 03
-
ಒಮನ್ 03
-
ಜಿಂಬಾಬ್ವೆ 02
-
ಭೂತಾನ್ 01
-
ನೆದರ್ಲೆಂಡ್ಸ್ 01
-
ಸ್ಕಾಟ್ಲೆಂಡ್ 01
-
ಯುಎಇ 01
-