ಐಪಿಎಲ್ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಗೆ ಸಿದ್ಧತೆಗಳು ನಡೆಯುತ್ತಿದೆ. ಐಪಿಎಲ್ ಇತಿಹಾಸದಲ್ಲಿ ಈ ಬಾರಿ ಅತೀ ಹೆಚ್ಚು ಆಟಗಾರರ ಹರಾಜು ಕೂಡ ನಡೆಯುತ್ತಿದೆ. ಒಟ್ಟು 1214 ಆಟಗಾರರ ಹೆಸರು ಹರಾಜು ಪಟ್ಟಿಯಲ್ಲಿ ಇರಲಿದೆ. ಈ ಮಧ್ಯೆ ಆಟಗಾರರ ಹರಾಜು ಪ್ರಕ್ರಿಯೆ ಯಾವಾಗ ಮತ್ತು ಎಲ್ಲಿ ಅನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿಲ್ಲ.
ಈ ಹಿಂದೆ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಹರಾಜು ನಡೆಸುವ ಬಗ್ಗೆ ನಿರ್ಧಾರ ಮಾಡಲಾಯಿತು. ಆದರೆ ಕೋವಿಡ್ ಕಾರಣದಿಂದ ಈಗ ಹರಾಜು ಸ್ಥಳ ಬದಲಾಗುವ ಸುಳಿವು ಸಿಕ್ಕಿದೆ. ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿರುವ ಕಾರಣದಿಂದ ಸ್ಥಳ ಬದಲಾವಣೆ ಆಗಬಹುದು ಎಂದು ಹೇಳಲಾಗುತ್ತಿದೆ.
ಬೆಂಗಳೂರಿನ ಬದಲು ಮುಂಬೈನಲ್ಲೇ ಆಟಗಾರರ ಹರಾಜು ನಡೆಸಲು ಬಿಸಿಸಿಐ ಯೋಚನೆ ಮಾಡಿದೆ ಎಂದು ಹೇಳಲಾಗುತ್ತಿದೆ. ಮೆಗಾ ಹರಾಜಿಗೆ 318 ವಿದೇಶಿ ಆಟಗಾರರು ಮತ್ತು 896 ಭಾರತೀಯ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಹಳೆಯ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ಉಳಿಸಿಕೊಂಡಿದ್ದರೆ, ಹೊಸ 2 ಫ್ರಾಂಚೈಸಿಗಳು ತಲಾ 2 ಆಟಗಾರರಂತೆ 6 ಆಟಗಾರರನ್ನು ಉಳಿಸಿಕೊಂಡಿದೆ. ಮೆಗಾ ಹರಾಜಿನಲ್ಲಿ ಒಟ್ಟು 217 ಆಟಗಾರರು ಬಿಕರಿಯಾಗುವುದು ಖಚಿತ. ಒಟ್ಟಿನಲ್ಲಿ ಬಿಸಿಸಿಐ ಐಪಿಎಲ್ ಹರಾಜು ಬಗ್ಗೆ ಸಖತ್ ಪ್ಲಾನ್ ಮಾಡುತ್ತಿದೆ.