IPL Auction 2022 – ಐಪಿಎಲ್ ಹರಾಜಿನಲ್ಲಿ ಯುವ ಆಟಗಾರರಿಗೆ ಭಾರೀ ಡಿಮ್ಯಾಂಡ್..!
15ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 25ರಿಂದ ಆರಂಭವಾಗುವ ಸಾಧ್ಯತೆಗಳಿವೆ. ಹಾಗೇ ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ.
ಈಗಾಗಲೇ ಫ್ರಾಂಚೈಸಿಗಳು ತಮ್ಮ ತಂಡಗಳಿಗೆ ಯಾವ ಯಾವ ಆಟಗಾರರು ಬೇಕು. ಯಾವ ಆಟಗಾರನಿಗೆ ಎಷ್ಟು ಹಣ ನೀಡಬೇಕು. ಹೀಗೆ ಬಿಡ್ಡಿಂಗ್ ಲೆಕ್ಕಚಾರದಲ್ಲಿ ತೊಡಗಿಕೊಂಡಿವೆ.
ಇನ್ನೊಂದೆಡೆ ಪ್ರಾಂಚೈಸಿಗಳು ಯುವ ಆಟಗಾರರ ಮೇಲೆ ಕಣ್ಣಿಟ್ಟಿವೆ.ಸ್ಟಾರ್ ಆಟಗಾರರ ಜೊತೆಗೆ ಯುವ ಆಟಗಾರನ್ನು ಖರೀದಿ ಮಾಡಿಕೊಂಡು ಬಲಿಷ್ಠ ತಂಡವನ್ನು ಕಟ್ಟುವ ಪ್ಲಾನ್ ಮಾಡಿಕೊಳ್ಳುತ್ತಿವೆ.
ಅಂದ ಹಾಗೇ ಐಪಿಎಲ್ ಟೂರ್ನಿ ಕ್ರಿಕೆಟಿಗರ ಬದುಕನ್ನೇ ಬದಲಾಯಿಸಿಬಿಡುತ್ತದೆ. ವಿಶ್ವದ ಸ್ಟಾರ್ ಆಟಗಾರರು ಕೋಟಿ ಕೋಟಿ ಲೆಕ್ಕದಲ್ಲಿ ದುಡ್ಡನ್ನು ಸಂಪಾದಿಸಿದ್ರೆ, ಯುವ ಆಟಗಾರರು ಕೂಡ ತಮ್ಮ ಜೇಬು ತುಂಬಿಸಿಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಐಪಿಎಲ್ ನಲ್ಲಿ ದುಡ್ಡು ಚೆಲ್ಲಾಟವಾಡುತ್ತದೆ.
ಮುಖ್ಯವಾಗಿ ಫ್ರಾಂಚೈಸಿಗಳು, ದೇಶಿ ಟಿ-20 ಟೂರ್ನಿಯಲ್ಲಿ ಮ್ಯಾಚ್ ವಿನ್ನಿಂಗ್ ಅಟವನ್ನಾಡಿದ್ದ ತಮಿಳುನಾಡಿನ ಶಾರೂಖ್ ಖಾನ್, 19 ವಯೋಮಿತಿ ವಿಶ್ವಕಪ್ ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಆಂಗ್ ಕ್ರಿಶ್ ರಘುವಂಶಿ ಮತ್ತು ರಾಜಾ ಬಾವಾ, ಯುವ ವೇಗಿ ರಾಹ್ಯವರ್ಧನ್ ಹಂಗರ್ಗೆಕರ್ ಮೊದಲಾದವರಿಗೆ ಭಾರೀ ಬೇಡಿಕೆ ಇರಲಿದೆ.
ಇನ್ನು ಐಪಿಎಲ್ ನಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟಿಗರಿ ಭಾರೀ ಬೇಡಿಕೆ ಇದೆ. ಹೊಡಿ ಬಡಿ ಆಟಕ್ಕೆ ಪಕ್ಕಾ ಆಟಗಾರರಾಗಿರುವ ಕೆರೆಬಿಯನ್ನರ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಅದರಲ್ಲೂ ರೊಮಾರಿಯೊ ಶೆಫರ್ಡ್, ಆಕಿಲ್ ಹುಸೇನ್, ಒಡಿಯನ್ ಸ್ಮಿತ್ ಗರಿಷ್ಠ ಮಟ್ಟದಲ್ಲಿ ಹರಾಜು ಆಗುವ ಸಾಧ್ಯತೆ ಇದೆ.
ಇನ್ನು ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್ ಡೇವಾಲ್ಡ್ ಬ್ರಿವಿಸ್ ಅವರು ಭವಿಷ್ಯದ ಎಬಿಡಿ ವಿಲಿಯರ್ಸ್ ಅಂತನೇ ಬಿಂಬಿತರಾಗಿದ್ದಾರೆ. ಬೇಬಿ ಎಬಿ ಖ್ಯಾತಿ ಪಡೆದಿರುವ ಬ್ರಿವಿಸ್ ಅವರಿಗೆ ಇನ್ನೂ 19ರ ಹರೆಯ. ಮತ್ತೊಂದೆಡೆ ಆಸ್ಟ್ರೇಲಿಯಾ ಬೆನ್ ಮೆಕ್ ಡರ್ಮೆಟ್ ಅವರನ್ನು ಕಳೆದ ಐಪಿಎಲ್ ನಲ್ಲಿ ಅನ್ ಸೋಲ್ಡ್ ಆಗಿದ್ದರು. ಆದ್ರೆ ಈ ಬಾರಿ ಮೆಕ್ ಡರ್ಮೆಟ್ ಅವರಿಗೂ ಡಿಮ್ಯಾಂಡ್ ಇದೆ. ಕಾರಣ ಬಿಗ್ ಬ್ಯಾಷ್ ನಲ್ಲಿ ಅಮೋಘ ಆಟವನ್ನಾಡಿದ್ದರು. ಹಾಗೇ ಐರ್ಲೆಂಡ್ ನ ಜೋಯ್ ಕ್ಲಾರ್ಕ್, ಜೇಸನ್ ಸಂಘಾ ಕೂಡ ಬಿಬಿಎಲ್ ನಲ್ಲಿ ಹೊಡಿ ಬಡಿ ಆಟದ ಮೂಲಕ ಗಮನ ಸೆಳೆದಿದ್ದರು.
ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಸ್ಟಾರ್ ಆಟಗಾರರ ಜೊತೆಗೆ ಯುವ ಆಟಗಾರರಿಗೂ ಭಾರೀ ಡಿಮ್ಯಾಂಡ್ ಇರಲಿದೆ. ಹಾಗೇ ಕೋಟಿ ಕೋಟಿ ಲೆಕ್ಕದಲ್ಲಿ ತಮ್ಮ ಜೇಬಿಗೆ ಹಣವನ್ನು ತುಂಬಿಕೊಳ್ಳಲಿದ್ದಾರೆ.