IPL Auction 2022 ಮೂರೇ ಮೂರು ಆಟಗಾರರನ್ನು ಖರೀದಿಸಲು ಆರ್ ಸಿಬಿ ಖರ್ಚು ಮಾಡುವ ಹಣ ಎಷ್ಟು..?
ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಜೇಸನ್ ಹೋಲ್ಡರ್ ಮೇಲೆ ಈಗ ಐಪಿಎಲ್ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಮೂಲಗಳ ಪ್ರಕಾರ ಜೇಸನ್ ಹೋಲ್ಡರ್ ಗೆ ಮೆಗಾ ಐಪಿಎಲ್ ಹರಾಜಿನಲ್ಲಿ ಭಾರೀ ಡಿಮ್ಯಾಂಡ್ ಇರಲಿದೆಯಂತೆ.
ಜೇಸನ್ ಹೋಲ್ಡರ್ ಅದ್ಭುತವಾದ ಫಾರ್ಮ್ ನಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ದದ ಟಿ-20 ಸರಣಿಯಲ್ಲೂ ಸರ್ವ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಸಂದರ್ಭಕ್ಕೆ ತಕ್ಕಂತೆ ಆಟವಾಡುವ ಸಾಮಥ್ರ್ಯವೂ ಅವರಲ್ಲಿದೆ. ಹೀಗಾಗಿ ಈ ಬಾರಿಯ ಐಪಿಎಲ್ ದುಬಾರಿ ಬೆಲೆಯ ಆಟಗಾರನಾಗುವ ಎಲ್ಲಾ ಸಾಧ್ಯತೆಗಳಿವೆ.IPL Auction: Will RCB pick Jason Holder..?
ಇನ್ನೊಂದು ಮೂಲಗಳ ಪ್ರಕಾರ ಜೇಸನ್ ಹೋಲ್ಡರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿ ಮಾಡಲು ಪ್ಲಾನ್ ಮಾಡಿಕೊಂಡಿದೆಯಂತೆ. ಜೇಸನ್ ಹೋಲ್ಡರ್ ಅವರಿಗೆ ಬಿಡ್ಡಿಂಗ್ ನಲ್ಲಿ 12 ಕೋಟಿ ರೂಪಾಯಿ ಮೀಸಲಿಟ್ಟಿದೆಯಂತೆ.
ಈಗಾಗಲೇ ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ಮಹಮ್ಮದ್ ಸೀರಾಜ್ ಅವರನ್ನು ಆರ್ ಸಿಬಿ ರಿಟೇನ್ ಮಾಡಿಕೊಂಡಿದೆ. ಸ್ಪಿನ್ ಆಲ್ ರೌಂಡರ್ ಆಗಿ ಗ್ಲೇನ್ ಮ್ಯಾಕ್ಸ್ ವೆಲ್ ಆರ್ ಸಿಬಿ ತಂಡದಲ್ಲಿರುವುದು ಪ್ಲಸ್ ಪಾಯಿಂಟ್ ಆಗಿದೆ. ಹಾಗೆ ವೇಗದ ಬೌಲರ್ ಆಲ್ ರೌಂಡರ್ ಕೋಟಾದಲ್ಲಿ ಜೇಸನ್ ಹೋಲ್ಡರ್ ಅವರನ್ನು ಖರೀದಿ ಮಾಡುವ ಲೆಕ್ಕಾಚಾರದಲ್ಲಿದೆ ಆರ್ ಸಿಬಿ ಟೀಮ್ ಮ್ಯಾನೇಜ್ ಮೆಂಟ್.
ಮತ್ತೊಂದೆಡೆ ಆರ್ ಸಿಬಿ ತಂಡ ಅಂಬಟಿ ರಾಯುಡ್ ಅವರನ್ನು ಖರೀದಿ ಮಾಡುವ ಪ್ಲಾನ್ ನಲ್ಲಿದೆ. ಅಂಬಟಿ ರಾಯುಡು ಅವರಿಗೆ ಎಂಟು ಕೋಟಿ ರೂಪಾಯಿ ಮೀಸಲಿಟ್ಟಿದೆ. ಹಾಗೇ ರಿಯಾನ್ ಪರಾಗ್ ಅವರಿಗೆ ಏಳು ಕೋಟಿ ರೂಪಾಯಿ ಮೀಸಲಿಟ್ಟಿದೆ. ಒಟ್ಟು 27 ಕೋಟಿ ರೂಪಾಯಿ ಹಣವನ್ನು ಮೂವರು ಆಟಗಾರರಿಗೆ ಖರ್ಚು ಮಾಡಲಿದೆ ಆರ್ ಸಿಬಿ.
ಆರ್ ಸಿಬಿ ಪಾಕೆಟ್ ನಲ್ಲಿ ಒಟ್ಟು 57 ಕೋಟಿ ರೂಪಾಯಿ ಇದೆ. ಮೂವರು ಆಟಗಾರರಿಗೆ 27 ಕೋಟಿ ರೂಪಾಯಿಯಾದ್ರೆ, ಇನ್ನುಳಿದ ಹಣದಲ್ಲಿ ಉಳಿದ ಆಟಗಾರರನ್ನು ಖರೀದಿ ಮಾಡಬೇಕಿದೆ
ಒಟ್ಟಿನಲ್ಲಿ ಆರ್ ಸಿಬಿ ತಂಡ ಈ ಬಾರಿ ಬಲಿಷ್ಠ ತಂಡವನ್ನು ಕಟ್ಟಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಕಳೆದ 14 ಆವೃತ್ತಿಗಳಲ್ಲಿ ಮೂರು ಬಾರಿ ಫೈನಲ್ ಗೆ ಎಂಟ್ರಿಯಾದ್ರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಪ್ರತಿ ಬಾರಿಯೂ ಕಪ್ ನಮ್ದೆ ಅಂತ ಹೇಳುತ್ತಾ ಅಭಿಯಾನ ಮಾಡುತ್ತಿರುವ ಆರ್ ಸಿಬಿ ತಂಡಕ್ಕೆ ಈ ಬಾರಿಯಾದ್ರೂ ಕಪ್ ಒಲಿಯುತ್ತಾ ಅನ್ನೋದನ್ನು ಕಾದು ನೋಡಬೇಕು.