ಟೀಮ್ ಇಂಡಿಯಾ (India) ಮೊದಲ ಏಕದಿನ ಪಂದ್ಯವನ್ನು ಭರ್ಜರಿಯಾಗಿ ಗೆದ್ದು 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಶಿಖರ್ ಧವನ್,(Shikhar Dhawan) ರುತುರಾಜ್ ಗಾಯಕ್ವಾಡ್,(Ruturaj Gayakwad) ಕೆ.ಎಲ್ ರಾಹುಲ್ (KL Rahul) ಅನುಪಸ್ಥಿತಿಯಲ್ಲೂ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ (Westinidies) ತಂಡವನ್ನು ಹೀನಾಯಕವಾಗಿ ಬಗ್ಗು ಬಡದಿತ್ತು. ಸಿಕ್ಕಿದ ಅವಕಾಶಗಳನ್ನೆಲ್ಲಾ ಹೊಸ ಆಟಗಾರರು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ. ಇದು ಸಮಸ್ಯೆ ಆಗಿದೆ. ಉಪನಾಯಕ ಕೆ.ಎಲ್. ರಾಹುಲ್ ತಂಡಕ್ಕೆ ವಾಪಾಸಾಗಿದ್ದು, ಯಾರ ಸ್ಥಾನದಲ್ಲಿ ಆಡುತ್ತಾರೆ ಅನ್ನುವುದು ಚರ್ಚೆಗೆ ಕಾರಣವಾಗಿದೆ.
ಮೊದಲ ಪಂದ್ಯದಲ್ಲಿ ಇಶನ್ ಕಿಶನ್ (Ishan Kishan)- ರೋಹಿತ್ (Rohit Sharma) ಜೊತೆ ಇನ್ನಿಂಗ್ಸ್ ಆರಂಭಿಸಿದ್ದರು. ಮೊದಲ ವಿಕೆಟ್ ಗೆ ಈ ಜೋಡಿ ಉತ್ತಮ ಜೊತೆಯಾಟ ಆಡಿ ತಂಡದ ಗೆಲುವಿಗೆ ಭದ್ರ ಬುನಾಧಿ ಹಾಕಿಕೊಟ್ಟಿತ್ತು. ರೋಹಿತ್ ಶರ್ಮಾ 60 ರನ್ಗಳಿಸಿದ್ದರೆ, ಕಿಶನ್ 28 ರನ್ ಸಿಡಿಸಿದ್ದರು. ಈಗ ರಾಹುಲ್ ತಂಡಕ್ಕೆ ಎಂಟ್ರಿ ಆಗುತ್ತಿದ್ದಾರೆ. ಅನಿವಾರ್ಯವಾಗಿ ಕಿಶನ್ ಜಾಗದಲ್ಲಿ ಆಡಬೇಕಾಗುತ್ತದೆ.
ಈ ಮಧ್ಯೆ ಸೂರ್ಯಕುಮಾರ್ ಯಾದವ್ (Surya Kumar Yadav) ಮತ್ತು ಮೊದಲ ಪಂದ್ಯ ಆಡಿದ್ದ ದೀಪಕ್ ಹೂಡ (Deepak Hooda) ಕೂಡ ಅತ್ಯುತ್ತಮ ಆಟ ಆಡಿದ್ದರು. ಹೀಗಾಗಿ ಮಧ್ಯಮ ಕ್ರಮಾಂಕದಲ್ಲೂ ರಾಹುಲ್ಗೆ ಜಾಗವಿಲ್ಲ. ಮತ್ತೊಂದು ಕಡೆಯಲ್ಲಿ ಸತತ ಪಂದ್ಯಗಳನ್ನು ಆಡಿರುವ ರಿಷಬ್ ಪಂತ್ ಗೆ (Rihab Pant)ವಿರಾಮ ನೀಡಬೇಕು ಅನ್ನುವ ಚರ್ಚೆ ನಡೆಯುತ್ತಿದೆ. ಹೀಗಾದರೆ ಕಿಶನ್ ಕೀಪಿಂಗ್ ಗ್ಲೌಸ್ ಜೊತೆ ಆರಂಭಿಕ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಬಹುದು. ರಾಹುಲ್ ರಿಷಬ್ ಜಾಗದಲ್ಲಿ ಬ್ಯಾಟ್ಸ್ಮನ್ ಆಗಿ ಆಡಬಹುದು.
ಕೆರಿಬಿಯನ್ಸ್ ವಿರುದ್ಧದ 2ನೇ ಪಂದ್ಯ ಅಹ್ಮದಾಬಾದ್ನಲ್ಲೇ (Ahmadabad) ಫೆಬ್ರವರಿ 9 ರಂದು ನಡೆಯಲಿದೆ. ಈ ಪಂದ್ಯ ಗೆದ್ದರೆ ಭಾರತ 1 ಪಂದ್ಯ ಬಾಕಿ ಉಳಿದಿರುವರಂತೆಯೇ ಸರಣಿ ಗೆದ್ದ ಸಾಧನೆ ಮಾಡಲಿದೆ.