IPL Auction 2022- ತಂಡದ 22 ಆಟಗಾರರಿಗೆ ಆರ್ ಸಿಬಿ ಖರ್ಚು ಮಾಡಿದ್ದು ಎಷ್ಟು ಕೋಟಿ ? ಆರ್ ಸಿಬಿ ತಂಡದ ಫುಲ್ ಡಿಟೇಲ್…!
ಐಪಿಎಲ್ ಟೂರ್ನಿಯ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ತಂಡ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು.
ನಮ್ಮ ಕರ್ನಾಟಕದ ಹೆಮ್ಮೆ, ನಮ್ಮ ಬೆಂಗಳೂರನ್ನು ಪ್ರತಿನಿಧಿಸುವ ಆರ್ ಸಿಬಿ ಅಂದ್ರೆ ಕರುನಾಡಿನ ಅಭಿಮಾನಿಗಳಲ್ಲಿ ವಿಶೇಷ ಪ್ರೀತಿ. ಆದ್ರೆ ಆರ್ ಸಿಬಿ ಟೀಮ್ ಮ್ಯಾನೇಜ್ ಮೆಂಟ್ ಆ ಪ್ರೀತಿಯನ್ನು ಇಟ್ಟುಕೊಂಡಿಲ್ಲ. ಕರ್ನಾಟಕದ ಸ್ಟಾರ್ ಆಟಗಾರರ ಕಡೆ ಮುಖ ಮಾಡದ ಆರ್ ಸಿಬಿಯಲ್ಲಿ ಇಬ್ಬರು ಯುವ ಆಟಗಾರರು ಇದ್ದಾರೆ ಅನ್ನೋದಷ್ಟೇ ಸಮಧಾನ.
ಅನೀಶ್ವರ್ ಗೌತಮ್ ಮತ್ತು ಲುನ್ವಿತ್ ಸಿಸೊಡಿಯಾ ಅವರು ತಲಾ 20 ಲಕ್ಷ ರೂಪಾಯಿ ಕೊಟ್ಟು ಕನ್ನಡಿಗರನ್ನು ಸಮಾಧಾನಪಡಿಸಿದೆ ಆರ್ ಸಿಬಿ ಟೀಮ್ ಮ್ಯಾನೇಜ್ ಮೆಂಟ್.
ಇನ್ನು ತಂಡದ ನಾಯಕ ಯಾರು ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಗ್ಲೇನ್ ಮ್ಯಾಕ್ಸ್ ವೆಲ್, ಫಾಫ್ ಡುಪ್ಲೇಸಸ್ ನಾಯಕತ್ವದ ರೇಸ್ ನಲ್ಲಿದ್ದಾರೆ. ಇನ್ನೊಂದೆಡೆ ವಿರಾಟ್ ಕೊಹ್ಲಿಯೇ ಮತ್ತೆ ನಾಯಕನಾದ್ರೂ ಅಚ್ಚರಿ ಏನಿಲ್ಲ. ಈ ನಡುವೆ ದಿನೇಶ್ ಕಾರ್ತಿಕ್ ಕೂಡ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಗಳಿವೆ.
ಹಾಗೇ ಆರ್ ಸಿಬಿ ತಂಡದಲ್ಲಿ ಒಟ್ಟು 22 ಆಟಗಾರರು ಇದ್ದಾರೆ. ಇದರಲ್ಲಿ ಎಂಟು ವಿದೇಶಿ ಆಟಗಾರರು ಇದ್ದಾರೆ.
ಅಂದ ಹಾಗೇ ಹರಾಜಿನಲ್ಲಿ ಆರ್ ಸಿಬಿ 19 ಆಟಗಾರರಿಗೆ 55.45 ಕೋಟಿ ರೂಪಾಯಿ ಖರ್ಚು ಮಾಡಿದೆ. ಮೂವರು ರಿಟೇನ್ ಆಟಗಾರರಿಗೆ 33 ಕೋಟಿ ರೂಪಾಯಿ ಕೊಟ್ಟು ಉಳಿಸಿಕೊಂಡಿದೆ.
ಒಟ್ಟು 90 ಕೋಟಿಯಲ್ಲಿ ಆರ್ ಸಿಬಿ 88.45 ಕೋಟಿ ರೂಪಾಯಿ ಖರ್ಚು ಮಾಡಿದ್ದು, 1.55 ಕೋಟಿ ರೂಪಾಯಿ ಉಳಿಸಿಕೊಂಡಿದೆ.
ಆರ್ ಸಿಬಿ ರಿಟೇನ್ ಮಾಡಿಕೊಂಡಿರುವ ಆಟಗಾರರು
ವಿರಾಟ್ ಕೊಹ್ಲಿ – 15 ಕೋಟಿ ರೂ.
ಗ್ಲೇನ್ ಮ್ಯಾಕ್ಸ್ ವೆಲ್ – 11 ಕೋಟಿ ರೂ.
ಮಹಮ್ಮದ್ ಸೀರಾಜ್ – 7 ಕೋಟಿ ರೂ.
ಐಪಿಎಲ್ ಮೆಗಾ ಹರಾಜಿನಲ್ಲಿ ಖರೀದಿ ಮಾಡಿದ ಆರ್ ಸಿಬಿ ಆಟಗಾರರು
ಫಾಫ್ ಡು ಪ್ಲೇಸಸ್ – 7 ಕೋಟಿ ರೂ.
ಹರ್ಷೆಲ್ ಪಟೇಲ್ – 10.75 ಕೋಟಿ ರೂ.
ವನಿಂದು ಹಸರಂಗ – 10.75 ಕೋಟಿ ರೂ.
ದಿನೇಶ್ ಕಾರ್ತಿಕ್ – 5.50 ಕೋಟಿ ರೂ.
ಜೋಶ್ ಹಾಝಲ್ ವುಡ್ – 7.75 ಕೋಟಿ ರೂ.
ಶಹಬಾಝ್ ಅಹಮ್ಮದ್ – 2.4 ಕೋಟಿ ರೂ.
ಅನುಜ್ ರಾವತ್ – 3.4 ಕೋಟಿ ರೂ.
ಆಕಾಶ್ ದೀಪ್ – 20 ಲಕ್ಷ ರೂ.
ಮಹಿಪಾಲ್ ಲೊಮ್ರೊ – 95 ಲಕ್ಷ ರೂ.
ಫಿನ್ ಆಲೆನ್ – 80 ಲಕ್ಷ ರೂ.
ಶೆರ್ಫನ್ ರುಥರ್ ಫೋರ್ಡ್ – 1 ಕೋಟಿ ರೂ.
ಜೇಸನ್ ಬೆಹ್ರೆಂಡೊರ್ಫ್ – 75 ಲಕ್ಷ ರೂ.
ಸುಯಾಶ್ ಪ್ರಭುದೇಸಾಯಿ – 30 ಲಕ್ಷ ರೂ.
ಚಾಮಾ ಮಿಲಿಂದ್ – 25 ಲಕ್ಷ ರೂ.
ಅನೀಶ್ವರ್ ಗೌತಮ್ – 20 ಲಕ್ಷ ರೂ.
ಕರಣ್ ಶರ್ಮಾ – 50 ಲಕ್ಷ ರೂ.
ಸಿದ್ಧಾರ್ಥ್ ಕೌಲ್ – 75 ಲಕ್ಷ ರೂ.
ಲುನ್ವಿತ್ ಸಿಸೊಡಿಯಾ – 20 ಲಕ್ಷ ರೂ.
ಡೇವಿಡ್ ವೆಲ್ಲೆ – 2 ಕೋಟಿ ರೂ.