IPL auction 2022- 19 ವಯೋಮಿತಿ ವಿಶ್ವಕಪ್ ಗೆದ್ದ ಭಾರತ ತಂಡದ ಎಂಟು ಮಂದಿ ಆಟಗಾರರು ಐಪಿಎಲ್ ಹರಾಜಿನಲ್ಲಿಲ್ಲ…! ಕಾರಣ ಇಷ್ಡೇ..!
19 ವಯೋಮಿತಿ ವಿಶ್ವಕಪ್ ಗೆದ್ದ ಭಾರತ ಕಿರಿಯ ಆಟಗಾರರ ಸಂಭ್ರಮವನ್ನು ಬಣ್ಣಿಸಲು ಸಾಧ್ಯವಿಲ್ಲ. ಕೋವಿಡ್ ಆಘಾತದ ನಡುವೆಯೂ ಅದ್ಭುತ ಪ್ರದರ್ಶನ ನೀಡಿದ ಯಶ್ ಧೂಳ್ ಬಳದ ಸಾಧನೆಯನ್ನು ಕ್ರಿಕೆಟ್ ಅಭಿಮಾನಿಗಳು ಗುಣಗಾನ ಮಾಡುತ್ತಿದ್ದಾರೆ.
ಇದರ ನಡುವೆಯೇ ಭಾರತ ಕಿರಿಯರ ತಂಡದ ಎಂಟು ಮಂದಿ ಆಟಗಾರರಿಗೆ ಆಘಾತಕಾರಿ ಸುದ್ದಿಯೊಂದು ಬಂದಿದೆ. ಅದು ಕೂಡ ಬಿಸಿಸಿಐನಿಂದ. ಈ ಸುದ್ದಿಯನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟನೇ..
ಹೌದು, ಫೆಬ್ರವರಿ 12 ಮತ್ತು 13ರಂದು ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಯುವ ಆಟಗಾರರ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಅದರಲ್ಲೂ ವಿಶ್ವ ಕಪ್ ಗೆದ್ದ ಭಾರತ ಕಿರಿಯರ ತಂಡದ ಆಟಗಾರರ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿದ್ದವು. ಅದೇ ರೀತಿ ತಮ್ಮ ಸಾಮಥ್ರ್ಯವನ್ನು ಐಪಿಎಲ್ ನಲ್ಲಿ ಪ್ರದರ್ಶಿಸಬೇಕು. ಯಾವ ತಂಡವನ್ನು ಸೇರಿಕೊಳ್ಳಬಹುದು ಎಂಬುದರ ಬಗ್ಗೆ ಭಾರತ ಕಿರಿಯರ ತಂಡದ ಆಟಗಾರರು ಎದುರು ನೋಡುತ್ತಿದ್ದರು.
ಆದ್ರೆ ಭಾರತ ಕಿರಿಯರ ತಂಡದ ಎಂಟು ಆಟಗಾರರು ಐಪಿಎಲ್ ನಲ್ಲಿ ಆಡುವ ಕನಸು ಭಗ್ನಗೊಳ್ಳುವ ಸಾಧ್ಯತೆಗಳಿವೆ. ಇದಕ್ಕೆ ಕಾರಣ ಐಪಿಎಲ್ ರೂಲ್ಸ್.
ಯುವ ಆಟಗಾರರು ಐಪಿಎಲ್ ನಲ್ಲಿ ಬಿಡ್ಡಿಂಗ್ ನಲ್ಲಿ ಭಾಗಿಯಾಬೇಕಾದ್ರೆ ಕನಿಷ್ಠ ಒಂದು ಪ್ರಥಮ ದರ್ಜೆ ಅಥವಾ ಲೀಸ್ಟ್ ಎ ಪಂದ್ಯಗಳಲ್ಲಿ ಆಡಿರಬೇಕು. ಇಲ್ಲದೆ ಇದ್ರೆ ಅವರ ವಯೋಮಿತಿ 19 ದಾಟಿರಬೇಕು. ಆದ್ರೆ ವಿಶ್ವಕಪ್ ಗೆದ್ದ ಭಾರತ ಕಿರಿಯರ ತಂಡದ ಎಂಟು ಮಂದಿ ಆಟಗಾರರು ಈ ಅರ್ಹತೆಯನ್ನು ಪಡೆದುಕೊಂಡಿಲ್ಲ.
IPL auction 2022 – Eight of U-19 World Cup winning squad may not be allowed
ಇದಕ್ಕೆ ಕಾರಣ ಕಳೆದ ವರ್ಷ ರಣಜಿ ಪಂದ್ಯಗಳು ನಡೆದಿಲ್ಲ. ಈ ಬಗ್ಗೆ ಬಿಸಿಸಿಐ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಈ ಕುರಿತು ಸದ್ಯದಲ್ಲೇ ಬಿಸಿಸಿಐ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಿದೆ.
ಐಪಿಎಲ್ ಟೂರ್ನಿಯ ಈ ರೂಲ್ಸ್ ಎಂಟು ಮಂದಿ ಆಟಗಾರರ ಮೆಲೆ ಪರಿಣಾಮ ಬೀರಲಿದೆ. ವಿಕೆಟ್ ಕೀಪರ್ ದಿನೇಶ್ ಬಾನಾ, 19 ವಯೋಮಿತಿ ಭಾರತ ತಂಡದ ಉಪನಾಯಕ ಶೇಕ್ ರಶೀದ್, ಸ್ಪಿನ್ನರ್ ರವಿ ಕುಮಾರ್, ಆಲ್ ರೌಂಡರ್ ನಿಶಾಂತ್ ಸಿಂಧೂ, ಸಿದ್ದಾರ್ಥ್ ಯಾದವ್, ಆರಂಭಿಕ ಆಟಗಾರ ಅಂಗ್ ಕೃಷ್ ರಘುವಂಶಿ, ಮನವ್ ಪ್ರಕಾಶ್, ಗರ್ವ್ ಸಂಗ್ವಾನ್ ಅವರು ಈ ಬಾರಿಯ ಐಪಿಎಲ್ ಟೂರ್ನಿಯಿಂದ ವಂಚಿತರಾಗಲಿದ್ದಾರೆ. ಅದ್ರಲ್ಲೂ ಶೇಖ್ ರಶೀದ್, ದಿನೇಶ್ ಬಾನಾ, ನಿಶಾಂತ್ ಸಿಂಧೂ ಮತ್ತು ರವಿ ಕುಮಾರ್ ಅವರಿಗೆ ಐಪಿಎಲ್ ನ ಬೇಡಿಕೆಯ ಆಟಗಾರರು ಆಗಿದ್ದರು.
ಯುವ ಆಟಗಾರರ ಭವಿಷ್ಯದ ದೃಷ್ಟಿಯಿಂದ ಈ ಬಾರಿಯ ಐಪಿಎಲ್ ನ ನಿಯಮಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಯುವ ಆಟಗಾರರ ಬೆಂಬಲಕ್ಕೆ ನಿಲ್ಲಬೇಕು. ಕೋವಿಡ್ ಕಾರಣದಿಂದಾಗಿ ಕಳೆದ ವರ್ಷ ದೇಶಿ ಟೂರ್ನಿಗಳು ನಡೆದಿರಲಿಲ್ಲ. ಹೀಗಾಗಿ ಈ ಆಟಗಾರರು ಅವಕಾಶವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಬಿಸಿಸಿಐ ಶೀಘ್ರದಲ್ಲೇ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.