Australia squad for Pak tour– ಪಾಕ್ ವಿರುದ್ದದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ
ಆಸ್ಟ್ರೇಲಿಯಾದ ಪಾಕಿಸ್ತಾನ ಪ್ರವಾಸ ಕನ್ ಫರ್ಮ್ ಆಗಿದೆ. 23 ವರ್ಷಗಳ ಬಳಿಕ ಪಾಕ್ ನೆಲಕ್ಕೆ ಕಾಲಿಡುತ್ತಿರುವ ಆಸ್ಟ್ರೇಲಿಯಾ ಟೆಸ್ಟ್ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಪ್ಯಾಟ್ ಕಮಿನ್ಸ್ ಅವರು ಮುನ್ನಡೆಸಲಿದ್ದಾರೆ. ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಜೋಶ್ ಹ್ಯಾಝಲ್ ವುಡ್ ಅವರು ತಂಡದಲ್ಲಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಆಟಗಾರರು ಐಪಿಎಲ್ ನಲ್ಲಿ ತಡವಾಗಿ ತಂಡಗಳನ್ನು ಸೇರಿಕೊಳ್ಳುವ ಸಾಧ್ಯತೆಗಳಿವೆ. Australia squad for Pak tour-Hazlewood returns, Boland retained
1998ರ ನಂತರ ಆಸ್ಟ್ರೇಲಿಯಾ ಭದ್ರತಾ ಕಾರಣದಿಂದಾಗಿ ಪಾಕ್ ನಲ್ಲಿ ಕ್ರಿಕೆಟ್ ಆಡಿರಲಿಲ್ಲ. ಕಳೆದ ಬಾರಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಕೊನೆಯ ಕ್ಷಣದಲ್ಲಿ ಪಾಕ್‍ಗೆ ತೆರಳಲು ಹಿಂದೇಟು ಹಾಕಿದ್ದವು.
ಜಸ್ಟನ್ ಲಾಂಗರ್ ಅವರು ಕೋಚ್ ಹುದ್ದೆಗೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಆಂಡ್ರ್ಯೂ ಮೆಕ್ ಡೊನಾಲ್ಡ್ ಅವರು ಹಂಗಾಮಿ ಕೋಚ್ ಆಗಿದ್ದಾರೆ. ಇನ್ನೊಂದೆಡೆ ತಂಡದಲ್ಲಿ ಆಸ್ಟನ್ ಆಗರ್ ಅವರು ತಂಡವನ್ನು ಸೇರಿಕೊಂಡಿದ್ದಾರೆ. ಇನ್ನುಳಿದಂತೆ ಆಶಷ್ ಸರಣಿಯ ತಂಡವನ್ನೇ ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಸಮಿತಿ ಪಾಕ್ ಪ್ರವಾಸಕ್ಕೂ ಆಯ್ಕೆ ಮಾಡಿದೆ.
ಮೊದಲ ಟೆಸ್ಟ್ ಪಂದ್ಯ ಮಾರ್ಚ್ 4ರಿಂದ ರಾವಲ್ಪಿಂಡಿಯಲ್ಲಿ ನಡೆದ್ರೆ, ಎರಡನೇ ಟೆಸ್ಟ್ ಪಂದ್ಯ ಮಾರ್ಚ್ 12ರಿಂದ ಕರಾಚಿಯಲ್ಲಿ ಹಾಗೂ ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 21ರಿಂದ ಲಾಹೋರ್ ನಲ್ಲಿ ನಡೆಯಲಿದೆ.
ಟೆಸ್ಟ್ ಸರಣಿಯ ಬಳಿಕ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಮೂರು ಏಕದಿನ ಪಂದ್ಯಗಳ ಸರಣಿ ಹಾಗೂ ಏಕೈಕ ಟಿ-20 ಪಂದ್ಯ ನಡೆಯಲಿದೆ.
ಆಸ್ಟ್ರೇಲಿಯಾ ಟೆಸ್ಟ್ ತಂಡ
ಪ್ಯಾಟ್ ಕಮಿನ್ಸ್ (ನಾಯಕ), ಆಷ್ಟನ್ ಆಗರ್, ಸ್ಕಾಟ್ ಬೊಲಾಂಡ್, ಆಲೆಕ್ಸ್ ಕ್ಯಾರೆ, ಕೆಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಜಲ್ ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖಾವಾಜ, ಮಾರ್ನಸ್ ಲಾಬ್ಯುಸ್ ಚೆಗ್ನೆ, ನಥಾನ್ ಲಿಯಾನ್, ಮಿಟ್ಚಲ್ ಮಾರ್ಶ್, ಮೈಕೆಲ್ ನೆಸೆರ್, ಸ್ಟೀವ್ ಸ್ಮಿತ್, ಮಿಟ್ಚೆಲ್ ಸ್ಟಾರ್ಕ್, ಮಿಟ್ಚೆಲ್ ಸ್ವಿಪೆನ್, ಡೇವಿಡ್ ವಾರ್ನರ್.